newsfirstkannada.com

ಒರಿಸ್ಸಾದಲ್ಲೂ ಮಹಾ‘ಮಳೆ’.. ಇವೆರಡು ರಾಜ್ಯಗಳಲ್ಲಿ ರೆಡ್​ ಅಲರ್ಟ್​ ಘೋಷಣೆ

Share :

26-07-2023

    ಮಹಾ ಮಳೆಯಿಂದ ತತ್ತರಿಸಿದ ಒರಿಸ್ಸಾ ಜನ

    ಜುಲೈ 27 ರವರೆಗೆ ಭಾರೀ ಮಳೆ ಸುರಿಯುವ ಮುನ್ಸೂಚನೆ

    ಶಾಲಾ ಕಾಲೇಜುಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ

ಕರ್ನಾಟಕ ಮಾತ್ರವಲ್ಲದೆ, ಭಾರತದ ಹಲವೆಡೆ ಮಳೆ ಸುರಿಯುತ್ತಿದೆ. ಅತ್ತ ಒರಿಸ್ಸಾದಲ್ಲೂ ವರುಣಾರ್ಭಟ ಮುಂದುವರಿದಿದ್ದು, ಜುಲೈ 27 ರವರೆಗೆ ಭಾರೀ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ತೆಲಂಗಾಣ, ಕೇರಳ ರಾಜ್ಯಗಳಿಗೂ ಭಾರತದ ಹವಾಮಾನ ಇಲಾಖೆ ರೆಡ್ ಆಲರ್ಟ್ ಘೋಷಿಸಿದೆ. ಮಾತ್ರವಲ್ಲದೆ, ತೆಲಂಗಾಣದ ಶಾಲಾ ಕಾಲೇಜುಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ ವರುಣನ ಪ್ರತಾಪ

ಅತ್ತ ಮಹಾರಾಷ್ಟ್ರದ ಶಾಲಾ ಕಾಲೇಜುಗಳಿಗೂ ಎರಡು ದಿನ ರಜೆ ಘೋಷಣೆ ಮಾಡಲಾಗಿದ್ದು, ರಾಯಘಡ ಜಿಲ್ಲೆಗೆ ರೆಡ್ ಆಲರ್ಟ್ ಘೋಷಣೆ ಮಾಡಲಾಗಿದೆ.

ದೆಹಲಿಯಲ್ಲಿ ಮಳೆ

ಇನ್ನು ದೆಹಲಿಯಲ್ಲಿ ‌ಇಂದು ಬೆಳಿಗ್ಗೆಯೇ ಮಳೆ ಸುರಿದಿದೆ. ಯಮುನಾ ನದಿ ಕೂಡ ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟಕ್ಕಿಂತ ಕೆಲ ಮೀಟರ್ ಕೆಳಭಾಗದಲ್ಲಿ ಹರಿಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒರಿಸ್ಸಾದಲ್ಲೂ ಮಹಾ‘ಮಳೆ’.. ಇವೆರಡು ರಾಜ್ಯಗಳಲ್ಲಿ ರೆಡ್​ ಅಲರ್ಟ್​ ಘೋಷಣೆ

https://newsfirstlive.com/wp-content/uploads/2023/07/Odisha-Rain.jpg

Load More