newsfirstkannada.com

Red Alert: ರಣಭೀಕರ ಮಳೆಗೆ ತತ್ತರಿಸಿ ಹೋದ ತೆಲಂಗಾಣ.. 19 ಜಿಲ್ಲೆಯಲ್ಲಿ ಸಾವು-ನೋವಿನ ಭೀತಿ!

Share :

Published September 1, 2024 at 8:21pm

    ಭೀಕರ ಮಳೆಗೆ ತೆಲಂಗಾಣ ತತ್ತರ, 19 ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರು

    ಒಂದೇ ದಿನ 52.1 ಸೆಂಟಿ ಮೀಟರ್ ಮಳೆ, ನಲುಗಿ ಹೋದ ಖಮ್ಮಮ್ ಜಿಲ್ಲೆ

    ರೈಲು ಓಡಾಟಗಳಲ್ಲೂ ವ್ಯತ್ಯಯ, ಪ್ರವಾಹದಲ್ಲಿ ಸಿಲುಕಿರುವ ಜನರ ಪರದಾಟ

ಹೈದರಾಬಾದ್: ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನಜೀವನವೇ ಅಸ್ತವ್ಯಸ್ಥಗೊಂಡಿದೆ. ನದಿಗಳು ಉಕ್ಕಿ ಹರಿದ ಪರಿಣಾಮ ಹಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಉಂಟಾಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಎಲ್ಲಾ ಜಿಲ್ಲೆಯ ಅಧಿಕಾರಿಗಳು ಆಗುವ ತೊಂದರೆಗಳನ್ನು ನಿವಾರಿಸಲು ಸಜ್ಜಾಗುವಂತೆ ಆದೇಶ ನೀಡಿದ್ದಾರೆ.

ಸರ್ಕಾರ ಈಗಾಗಲೇ 19 ಜಿಲ್ಲೆಗಳಿಗೆ ಪ್ರವಾಹ ಭೀತಿ ಎದುರಾಗಬಹುದೆಂದು ಹೇಳಿದ್ದು 9 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್ ಘೋಷಣೆ ಮಾಡಿದ್ದು 12 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಣೆ ಮಾಡಿದೆ. ಖಮ್ಮಮ್ ಜಿಲ್ಲೆಯೊಂದರಲ್ಲಿಯೇ ಸುಮಾರು 52.1 ಸೆಂಟಿ ಮೀಟರ್ ಮಳೆ ಬಿದ್ದಿದ್ದು. ಜನರ ಜೀವನ ಅಕ್ಷರಶಃ ಅಸ್ತವ್ಯಸ್ಥಗೊಳಿಸಿದೆ.

ಇದನ್ನೂ ಓದಿ: ನೀಟ್ ಪರೀಕ್ಷೆ ಪಾಸ್ ಮಾಡಿ MBBSಗೆ ಆಯ್ಕೆಯಾದ ಬುಡಕಟ್ಟು ವಿದ್ಯಾರ್ಥಿ; ದೇಶದ ಇತಿಹಾಸದಲ್ಲೇ ಮೊದಲು!

ದಕ್ಷಿಣ ಕೇಂದ್ರ ರೈಲ್ವೆಯ 99 ಟ್ರೇನ್​ಗಳು ಓಡಾಟ ರದ್ದು
ಭೀಕರ ಮಳೆಯಿಂದಾಗಿ ರೈಲುಗಳ ಸಂಚಾರಕ್ಕೂ ಕೂಡ ಕುತ್ತು ಬಂದಿದೆ. ಸೌತ್ ಸೆಂಟ್ರಲ್ ರೈಲ್ವೆಯ ಒಟ್ಟು 99 ರೈಲುಗಳ ಓಡಾಟವನ್ನು ರದ್ದುಗೊಳಿಸಿದ್ದು 54 ರೈಲುಗಳ ಓಡಾಟದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಆದಿಲಾಬಾದ್, ನಿರ್ಮಲ್, ನಿಜಾಮಾಬಾದ್, ಮಹಬೂಬಾಬಾದ್, ಜನಗಾಂವ್, ಕಾಮರೆಡ್ಡಿ, ಮಹಬೂಬನಗರ, ನಾಗರಕರ್ನೂಲ್, ವನಪರ್ತಿ, ನಾರಾಯಣಪೇಟೆ ಮತ್ತು ಜೋಗುಲಾಂಬ ಗದ್ವಾಲ್ ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಪರಿಸ್ಥಿತಿ ಎದುರಿಸಲು ಎನ್​ಡಿಆರ್​ಎಫ್ ಪಡೆ ರೆಡಿ
ಈಗಾಗಲೇ ಕೇಂದ್ರ ಸರ್ಕಾರ ಒಟ್ಟು 9 ಎನ್​ಡಿಆರ್​​ಎಫ್ ತಂಡಗಳನ್ನು ಕಳುಹಿಸಿದ್ದು ಅವುಗಳಲ್ಲಿ ಮೂರು ತಂಡಗಳು ವಿಶಾಖಪಟ್ಟಣಂ, ಚೆನ್ನೈ ಹಾಗೂ ಅಸ್ಸಾಂಗೆ ತೆರಳಿವೆ. ಉಳಿದ ತಂಡಗಳು ತೆಲಂಗಾಣಕ್ಕೆ ಬಂದಿವೆ ಎಂದು ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ. ಇನ್ನೂ ಭೀಕರ ಮಳೆಗೆ ಓರ್ವ ಸಾವನ್ನಪ್ಪಿದ್ದು. ಪ್ರವಾಹದಲ್ಲಿ ಮೂವರು ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಗಳಿವೆ ಎಂದು ಕೂಡ ಕೇಂದ್ರ ಸಚಿವ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ-ಮುಂಬೈ ಪ್ರಯಾಣದ ವೇಳೆ ಶಾಕಿಂಗ್ ಮಾಹಿತಿ; ಕ್ರಿಕೆಟ್ ದಿಗ್ಗಜನಿಗೆ ಕ್ಷಮೆ ಕೇಳಿದ ಏರ್​ ಇಂಡಿಯಾ

ತೆಲಂಗಾಣದ ಖಮ್ಮಮ್ ಜಿಲ್ಲೆಯ ಭೀಕರ ಮಳೆಗೆ ಪತರಗುಟ್ಟಿ ಹೋಗಿದೆ. ಜಿಲ್ಲೆಯ 110 ಗ್ರಾಮಗಳು ಅಕ್ಷರಶಃ ನೀರಲ್ಲಿ ನಿಂತಿವೆ. ಪ್ರಕಾಶ ನಗರದ ಹಿಲ್​ಲಾಕ್​ನಲ್ಲಿ ಜನರು ರಕ್ಷಣೆಗಾಗಿ ಪರಿತಪಿಸುತ್ತಿದ್ದಾರೆ. ಅಜ್ಮೀರ್ ತಾಂಡಾ ಹಿಲ್​ಲಾಕ್​ನಲ್ಲಿ ಒಟ್ಟು 68 ಜನರು ಸಿಲುಕಿದ್ದಾರೆ. ಹಲವು ಕಡೆ ಒಟ್ಟು 42 ಜನರು ಭೀಕರ ಪ್ರವಾಹದ ನಡುವೆ ಸಿಲುಕಿದ್ದು. ಅವರ ರಕ್ಷಣೆಗಾಗಿ ಈಗ ಎನ್​ಡಿಆರ್​ಎಫ್ ತಂಡ ಸಜ್ಜಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Red Alert: ರಣಭೀಕರ ಮಳೆಗೆ ತತ್ತರಿಸಿ ಹೋದ ತೆಲಂಗಾಣ.. 19 ಜಿಲ್ಲೆಯಲ್ಲಿ ಸಾವು-ನೋವಿನ ಭೀತಿ!

https://newsfirstlive.com/wp-content/uploads/2024/09/ANDRA-RAIN-DAMEGE.jpg

Load More