30ರಿಂದ 40 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ
ಮಳೆ ಬಂದಾಗ ಮರದ ಕೆಳಗೆ ಆಶ್ರಯ ಪಡೆಯಬೇಡಿ
ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಗಳೇನು ಗೊತ್ತಾ?
ಪ್ರತಿ ದಿನ ರಾಜ್ಯ ರಾಜಧಾನಿ ಬೆಂಗಳೂರಿನ ಜನ ಮಳೆರಾಯನ ಹೊಡೆತಕ್ಕೆ ಸಿಲುಕಿ ನಡುಗುತ್ತಿದ್ದಾರೆ. ಇಷ್ಟು ದಿನ ಸಂಜೆ ವೇಳೆ ಬರುತ್ತಿದ್ದ ವರುಣ ಇವತ್ತು ಮಧ್ಯಾಹ್ನ ಆಗಮಿಸಿ ಅಬ್ಬರಿಸಿದ್ದಾನೆ. ಬೆಂಗಳೂರಿನ ಹಲವೆಡೆ 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಬೆಂಗಳೂರು ನಗರದ ಹಲವೆಡೆ ಇಂದು ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ರಸ್ತೆಯಲ್ಲಿ ನದಿಯಂತೆ ನೀರು ಹರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಮೆಜೆಸ್ಟಿಕ್, ಶಿವಾನಂದ ಸರ್ಕಲ್ ಬಳಿಯ ಅಂಡರ್ ಪಾಸ್‌ಗಳಲ್ಲಿ ಮಳೆ ನೀರಿನ ರಭಸಕ್ಕೆ ವಾಹನ ಸವಾರರು ಹೈರಾಣಾಗಿದ್ದಾರೆ. ಬಿರುಗಾಳಿಯಂತೂ 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಬೀಸಿದ್ದು, ಕಮಲಾನಗರದಲ್ಲಿ ಬೃಹತ್ ಮರವೊಂದು ಧರೆಗುರುಳಿದೆ.
ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಹವಾಮಾನ ಇಲಾಖೆಯು ಕೆಲವು ಎಚ್ಚರಿಕೆಯನ್ನು ಜನರಿಗೆ ನೀಡಿದೆ. ಬಿರುಗಾಳಿಯಿಂದ ದುರ್ಬಲ ಮರದ ಕೊಂಬೆಗಳು ನೆಲಕ್ಕುರುಳುವ ಸಾಧ್ಯತೆ ಇದೆ. ಹಾಗಾಗಿ ಮರದ ಕೆಳಗೆ ಆಶ್ರಯ ಪಡೆಯಬೇಡಿ. ಕಾಂಕ್ರಿಟ್ ಗೋಡೆಗಳಿಗೆ ಒರಗಬೇಡಿ. ಗುಡುಗು, ಮಿಂಚು ಸಂಭವಿಸಿದಾಗ ತಕ್ಷಣವೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅನ್ ಪ್ಲಗ್ ಮಾಡಿ. ಮನೆಯೊಳಗೆ ಇರಿ, ಕಿಟಕಿ ಬಾಗಿಲುಗಳನ್ನು ಮುಚ್ಚುವುದು ಒಳ್ಳೆಯದು. ಸಾಧ್ಯವಾದರೆ ದೂರ ಪ್ರಯಾಣಗಳಿಂದ ತಪ್ಪಿಸಿಕೊಳ್ಳಿ. ನೀವು ಬೈಕ್, ವಾಹನ ಚಲಾಯಿಸುತ್ತಿದ್ರೆ ಎಚ್ಚರವಹಿಸಿ ಎನ್ನಲಾಗಿದೆ.
ರಾಜಧಾನಿ ಬೆಂಗಳೂರು ಅಲ್ಲದೇ ಇಂದು ಮತ್ತು ನಾಳೆ ಕೊಡಗು, ಮೈಸೂರು, ಉತ್ತರಕನ್ನಡ, ಉಡುಪಿ, ರಾಯಚೂರು, ಕಲಬುರ್ಗಿ, ಶಿವಮೊಗ್ಗ, ಚಿತ್ರದುರ್ಗ, ಹಾಸನ, ಚಾಮರಾಜನಗರ, ರಾಮನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ