newsfirstkannada.com

Rain Alert: 5 ದಿನ ರಾಜ್ಯಾದ್ಯಂತ ಗುಡುಗು, ಸಿಡಿಲಿನ ಆರ್ಭಟ.. ಭಾರೀ ಮಳೆಯ ಎಚ್ಚರಿಕೆ?

Share :

Published June 25, 2024 at 6:20am

Update June 24, 2024 at 10:40pm

  ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾರ್ಭಟ

  ಮಲೆನಾಡು, ಕರಾವಳಿ ಭಾಗಗಳಲ್ಲಿ ಬಿಟ್ಟು ಬಿಡದೇ ನಿರಂತರ ಮಳೆ

  ಜೂನ್ 27ರವರೆಗೆ ಉತ್ತರ ಒಳನಾಡು ಭಾಗಗಳಿಗೆ ಪ್ರತ್ಯೇಕ ಅಲರ್ಟ್​​!

ಬೆಂಗಳೂರು: ರಾಜ್ಯದ ಹಲವೆಡೆ ಕೊಂಚ ರಿಲ್ಯಾಕ್ಸ್​ ಮೂಡ್​​ಗೆ ಜಾರಿದ್ದ ವರುಣದೇವ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ನಿರಂತರವಾಗಿ ಆರ್ಭಟಿಸ್ತಿರೋ ಮೇಘರಾಜ ಮುಂದಿನ 5 ದಿನಗಳ ಕಾಲ ಯೆಲ್ಲೋ, ಅರೆಂಜ್​​​ ಅಲರ್ಟ್​​​ಗೆ ಕಾರಣವಾಗಿದ್ದಾನೆ.

ಇದನ್ನೂ ಓದಿ: ಕೃಪೆ ತೋರದ ಮಳೆರಾಯ.. ದೆಹಲಿಯಲ್ಲಿ 48 ಗಂಟೆಯಲ್ಲಿ 50 ಮಂದಿ ಸಾವು.. ಏನಾಯ್ತು.. 

ಕರುನಾಡಿನಲ್ಲಿ ಮುಂದುವರೆದ ಮಳೆರಾಯನ ಅಬ್ಬರ
ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾರ್ಭಟ
ರಾಜ್ಯದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಮುಂದಿನ 5 ದಿನಗಳ ಕಾಲ ಮತ್ತೆ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಮಲೆನಾಡು, ಕರಾವಳಿ ಭಾಗಗಳಲ್ಲಿ ಬಿಟ್ಟು ಬಿಡದೇ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು, ವಾಹನ ಸವಾರರು ನದಿಯಂತಾದ ರಸ್ತೆಯಲ್ಲೇ ಒದ್ದಾಡಿದ್ದಾರೆ. ಇತ್ತ ಬೀದರ್​ನಲ್ಲಿ ಗಾಳಿ ಸಹಿತ ಆರ್ಭಟಿಸಿದ ಮಳೆಗೆ ಬೃಹತ್​ದಾಕಾರದ ಮರಗಳು ಧರೆಗುರುಳಿದ್ದು, ಹಲವು ವೆಹಿಕಲ್ಸ್​​ ಕಂಪ್ಲೀಟ್​ ಜಖಂಗೊಂಡಿದೆ.

ಜೂನ್ 27ರವರೆಗೆ ಆರೆಂಜ್ ಅಲರ್ಟ್ ಘೋಷಣೆ
ಉತ್ತರ ಒಳನಾಡು ಭಾಗಗಳಿಗೆ ಪ್ರತ್ಯೇಕ ಅಲರ್ಟ್​​
ಜೂನ್ 24ರಿಂದ​ 29ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣನ ಅಬ್ಬರ ಇರಲಿದೆ. ಈಗಾಗಲೇ ಕರಾವಳಿ ಮಲೆನಾಡು ಭಾಗಗಳಲ್ಲಿ ವರುಣ ಅಬ್ಬರಿಸಿದ್ದಾನೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಕರಾವಳಿ, ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಉತ್ತಮ ಮಳೆಯಾಗ್ತಿರೋ ಹಿನ್ನೆಲೆ ಜೂನ್​ 27ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇತ್ತ ಉತ್ತರ ಒಳನಾಡು ಪ್ರದೇಶಗಳಿಗೂ ಜೂನ್​ 27ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಎಲ್ಲೆಲ್ಲಿ ಆರೆಂಜ್‌ ಅಲರ್ಟ್‌!

ಮಂಗಳೂರು, ಉಡುಪಿ, ಸುಳ್ಯ, ಪುತ್ತೂರು
ಸಂಪಾಜೆ, ಕುಂದಾಪುರ, ಆದಿ ಉಡುಪಿ, ಆಗುಂಬೆ,
ಶಿವಮೊಗ್ಗ, ಮೈಸೂರು, ಚಾಮರಾಜನಗರ, ಕೋಲಾರ,
ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ಕೊಡಗು

ಇದನ್ನೂ ಓದಿ: ಡೆವಿಲ್ ಗ್ಯಾಂಗ್‌ಗೆ ಬಿಗ್‌ ಶಾಕ್; ದರ್ಶನ್ ಸಿನಿಮಾ ನಿರ್ಮಾಪಕರಿಗೆ ನಡುಕ ಹುಟ್ಟಿಸಿದೆ ಈ ನಿರ್ಧಾರ! 

ಎಲ್ಲೆಲ್ಲಿ ಯೆಲ್ಲೋ ಅಲರ್ಟ್‌!

ಬಾಗಲಕೋಟೆ, ಧಾರವಾಡ, ಯಾದಗಿರಿ, ಬಳ್ಳಾರಿ
ರಾಯಚೂರು, ಬೆಳಗಾವಿ, ಬೀದರ್, ಹಾವೇರಿ

ಕೊಂಚ ರಿಲ್ಯಾಕ್ಸ್​​ ಮೂಡ್​ನಲ್ಲಿದ್ದ ವರುಣ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಮಳೆಯಿಂದಾಗಿ ರೈತರು ಸಂತಸದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rain Alert: 5 ದಿನ ರಾಜ್ಯಾದ್ಯಂತ ಗುಡುಗು, ಸಿಡಿಲಿನ ಆರ್ಭಟ.. ಭಾರೀ ಮಳೆಯ ಎಚ್ಚರಿಕೆ?

https://newsfirstlive.com/wp-content/uploads/2024/06/RAIN-RAIN-4.jpg

Load More