ಉತ್ತರಾಖಂಡ್ನಲ್ಲಿ ಮಳೆ ನಿಂತರೂ ಕಡಿಮೆಯಾಗದ ನೆರೆ
ಹಲವು ಗ್ರಾಮಗಳಿಗೂ ನುಗ್ಗಿದ ‘ಗಿರಿ’ ಪ್ರವಾಹದ ನೀರು
ಇಬ್ಬರ ಮೃತದೇಹ ಪತ್ತೆ, ಉಳಿದವರಿಗಾಗಿ ತೀವ್ರ ಶೋಧ
ಹಿಮಾಚಲದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಮಳೆರಾಯ ಮತ್ತೆ ಆರ್ಭಟಿಸಿದ್ದಾನೆ. ಸಿರ್ಮೌರಿ ಜಿಲ್ಲೆಯಲ್ಲಿ ಮೇಘಸ್ಫೋಟಕ್ಕೆ ಗಿರಿ ನದಿ ರೌದ್ರಾವತಾರತಾಳಿದ್ದು, ಒಂದೇ ಕುಟುಂಬದ ಐವರು ನಾಪತ್ತೆ ಆಗಿದ್ದಾರೆ. ಇತ್ತ ಉತ್ತರಾಖಂಡ್ನಲ್ಲಿ ಮಳೆ ಕಡಿಮೆಯಾಗಿದ್ರೂ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಪ್ರವಾಸಿಗರ ನೆಚ್ಚಿನ ತಾಣವಾದ ಹಿಮಾಚಲ ಪ್ರದೇಶದ ಮೇಲೆ ವರುಣ ದೇವ ಮತ್ತೆ ವಕ್ರದೃಷ್ಟಿ ಬೀರಿದ್ದಾನೆ. ಸಿರ್ಮೂರ್ ಜಿಲ್ಲೆಯಲ್ಲಿ ಮೇಘಸ್ಫೋಟದಿಂದ ಗಿರಿ ನದಿ ರೌದ್ರಾವತಾರ ತಾಳಿದ್ದು, ಮಾಳಗಿ ದಡಿಯಾತ್, ಔಲಿ, ತಹಸಿಲ್ ಪೌಂಟಾ ಸಾಹಿಬ್ ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗಿದೆ.
ಪ್ರವಾಹದ ನೀರಿನಲ್ಲಿ ಮನೆಯೊಂದು ಕೊಚ್ಚಿಹೋಗಿದ್ದು, ಮನೆಯಲ್ಲಿ ವಾಸವಾಗಿದ್ದ ಕುಲ್ದೀಪ್ ಕುಮಾರ್ ಎಂಬುವರ ಕುಟುಂಬದ ಐವರು ನಾಪತ್ತೆಯಾಗಿದ್ದಾರೆ. ಇನ್ನು ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಒಂದು ಮೃತದೇಹ ಪತ್ತೆಯಾಗಿದೆ. ಮೇಘಸ್ಫೋಟದಿಂದಾಗಿ ಗಿರಿ ನದಿಯ ನೀರಿನ ಮಟ್ಟವೂ ಹೆಚ್ಚಾಗಿದೆ. ಇದರಿಂದ ರಾಜ್‌ಬಾನ್ ಮತ್ತು ಸತೌನ್ ನಡುವಿನ ರಸ್ತೆಯ ಭಾಗವನ್ನು ನಿರ್ಬಂಧಿಸಲಾಗಿದೆ.
ಉತ್ತರಾಖಂಡ್ನಲ್ಲಿ ಮಳೆ ನಿಂತರೂ ಕಡಿಮೆಯಾಗದ ಪ್ರವಾಹ
ಮತ್ತೊಂದೆಡೆ ಉತ್ತರಾಖಂಡ್ನಲ್ಲೂ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮಳೆ ಕಡಿಮೆಯಾಗಿದ್ದರೂ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ರಿಷಿಕೇಶದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಸ್ಡಿಆರ್ಎಫ್ ಸಿಬ್ಬಂದಿ, 50 ಜನರನ್ನು ರಕ್ಷಣೆ ಮಾಡಿದ್ದಾರೆ. ಲಕ್ಷ್ಮಣ್ ಜುಲಾ ಪ್ರದೇಶದ ಚೌರಾಸಿ ಕುಟಿಯಾ ಬಳಿ ಮನೆಯ ಗೋಡೆ ಕುಸಿದಿದೆ. ಇದರಲ್ಲಿ ಸಿಲುಕಿದ್ದ ಇಬ್ಬರಲ್ಲಿ ಓರ್ವ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಮತ್ತೊಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಳ ಆಗ್ತಿರುವುದನ್ನು ಕಂಡ ಯುವಕ ಎದ್ನೋ ಬಿದ್ನೋ ಎಂಬಂತೆ ಕೈಯಲ್ಲಿ ತನ್ನ ಚಪ್ಪಲಿಗಳನ್ನು ಹಿಡಿದುಕೊಂಡು ನದಿಗೆ ಇಳಿದು ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. ಒಟ್ಟಾರೆ. ಉತ್ತರಭಾರತದಲ್ಲಿ ಕೆಲದಿನಗಳಿಂದ ಕೊಂಚ ಬಿಡುವು ನೀಡಿದ್ದ ಮಳೆರಾಯ ಮತ್ತೆ ಆರ್ಭಟಿಸುತ್ತಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ