newsfirstkannada.com

ಸಿಲಿಕಾನ್​ ಸಿಟಿಯಲ್ಲಿ ವರುಣನ ಆರ್ಭಟ.. ಭಾರೀ ಮಳೆಗೆ ವಾಹನ ಸವಾರರ ಪರದಾಟ; ಎಲ್ಲೆಲ್ಲಿ ಟ್ರಾಫಿಕ್ ಜಾಮ್‌?

Share :

Published August 29, 2024 at 3:45pm

Update August 29, 2024 at 3:50pm

    ಮಧ್ಯಾಹ್ನದ ಬಳಿಕ ಎಂಟ್ರಿ ಕೊಟ್ಟ ಮಳೆಯಿಂದ ಜನಜೀವನ ಅಸ್ತವ್ಯಸ್ತ

    ಕಳೆದ ಅರ್ಧ ಗಂಟೆಯಿಂದ ರಾಜಧಾನಿಯಲ್ಲಿ ಸುರಿಯುತ್ತಿರೋ ಮಳೆ

    ಮಲ್ಲೇಶ್ವರಂ, ಜಯನಗರ, ಬಸವನಗುಡಿ, ಸೇರಿದಂತೆ ಹಲವೆಡೆ ಮಳೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತ ಎಫೆಕ್ಟ್​ನಿಂದ ಇಂದು ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮೆಜೆಸ್ಟಿಕ್, ಶಾಂತಿನಗರ, ಕಾರ್ಪೊರೇಷನ್, ವಿಜಯನಗರ, ರಾಜಾಜಿನಗರ, ಮಲ್ಲೇಶ್ವರಂ, ಜಯನಗರ, ಬಸವನಗುಡಿ, ಕೆಆರ್​ ಮಾರ್ಕೆಟ್​​ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ.

ಇದನ್ನೂ ಓದಿ: ಜೀನ್ಸ್​ ಪ್ಯಾಂಟ್​​, PUMA ಟೀ-ಶರ್ಟ್​, ಕತ್ತಲ್ಲಿ ಕೂಲಿಂಗ್​​ ಗ್ಲಾಸ್​.. ಬಳ್ಳಾರಿಗೆ ಬಂದ ಭಲೇ ಭೂಪತಿ ಹೊಸ ವಿವಾದ..!

ಇನ್ನು ದಿಢೀರ್​ ಮಳೆಯಿಂದ ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ವಾಹನ ಸವಾರರು ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳಿಗೆ ಮಳೆ ನೀರಿನಿಂದ ತೊಂದರೆ ಉಂಟಾಗುತ್ತಿದೆ. ಛತ್ರಿ ಹಿಡಿದುಕೊಂಡು ರೈನ್ ಕೋಟ್ ಧರಿಸಿ ಜನರ ಓಡಾಡುತ್ತಿದ್ದಾರೆ. ಮಧ್ಯಾಹ್ನದ ಬಳಿಕ ಎಂಟ್ರಿ ಕೊಟ್ಟ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇನ್ನು, ಈ ಹಿಂದೆ ಹವಾಮಾನ ಇಲಾಖೆಯೂ ರಾಜ್ಯದಲ್ಲಿ ಆಗಸ್ಟ್ 31 ತನಕ ಭಾರೀ ಮಳೆಯಾಗಲಿದೆ ಅಂತ ಮುನ್ಸೂಚನೆ ಕೊಟ್ಟಿದೆ. ಇಂದು ಹವಾಮಾನ ಇಲಾಖೆಯ ಮಾಹಿತಿಯಂತೆ ನಗರದಲ್ಲಿ ಮಳೆ ಆರಂಭವಾಗಿದೆ. ನಗರದಲ್ಲಿ ವರುಣನ ಆರ್ಭಟಕ್ಕೆ ನಗರದ ಹಲವು ಕಡೆಗಳಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದೆ. ಸಿಲ್ಕ್ ಬೋರ್ಡ್, ಮಾಗಡಿ ರಸ್ತೆ, ಮಡಿವಾಳ, ಫ್ರಿಡ್ ಪರ್ಕ್​ನಿಂದ ಆನಂದ ರಾವ್ ಸರ್ಕಲ್​ಗೆ ಸಂಪರ್ಕಿಸುವ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಹೀಗಾಗಿ ವಾಹನ ಸವಾರರು ಮಳೆಯಲ್ಲೇ ನಿಂತುಕೊಳ್ಳುವ ಸ್ಥಿತಿ ನಿರ್ಮಾನವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್​ ಸಿಟಿಯಲ್ಲಿ ವರುಣನ ಆರ್ಭಟ.. ಭಾರೀ ಮಳೆಗೆ ವಾಹನ ಸವಾರರ ಪರದಾಟ; ಎಲ್ಲೆಲ್ಲಿ ಟ್ರಾಫಿಕ್ ಜಾಮ್‌?

https://newsfirstlive.com/wp-content/uploads/2024/08/rain-20.jpg

Load More