newsfirstkannada.com

ವರುಣಾರ್ಭಟಕ್ಕೆ ಉತ್ತರದಲ್ಲಿ ಕಣ್ಣೀರ ಹೊಳೆ.. ಜೀವ ಕಳೆದುಕೊಂಡ ಸಂತ್ರಸ್ತರು; ದೆಹಲಿಗೆ ಮತ್ತೆ ಕಾದಿದೆಯಾ ಯುಮುನೆಯ ವಿಶ್ವರೂಪ..?

Share :

24-07-2023

    ಭಾರೀ ಮಳೆಯಲ್ಲೇ ಕೆಲವೊಬ್ಬರು ಪವಾಡ ರೀತಿಯಲ್ಲಿ ಬಚಾವ್..!

    ಉತ್ತರಾಖಂಡ್​ದ ತೆಹ್ರಿ ಗರ್ವಾಲ್​ನ ಸೀತಾಪುರ ಬಳಿ ಬ್ರಿಡ್ಜ್​ ಕುಸಿತ

    ಬ್ರಿಡ್ಜ್​ ಕುಸಿತದಿಂದ ಕುಸಿದಿದ್ದ 100 ಜನರನ್ನ ಉಳಿಸಿದ NDRF ಪಡೆ

ಉತ್ತರ ಭಾರತದ ಸ್ಥಿತಿ ಹೇಳ ತೀರದಾಗಿದೆ. ಮಹಾರಾಷ್ಟ್ರದಿಂದ ಕಾಶ್ಮೀರದವರೆ ಮಳೆ ಆರ್ಭಟಿಸ್ತಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವು ಪಟ್ಟಣಗಳು ದ್ವೀಪದಂತಾಗಿವೆ. ಬಿಪರ್​ಜಾಯ್​ ಶಂಕುಸ್ಥಾಪನೆ ನೆರವೇರಿಸಿ ತೆರಳಿದ ಬಳಿಕ ಉತ್ತರ ಭಾರತದ ಮೇಲೆ ಪ್ರವಾಹದ ಪ್ರಹಾರ ಮತ್ತಷ್ಟು ಭೀಕರತೆಗೆ ತಳ್ಳಿದೆ. ವರುಣನ ರುದ್ರನರ್ತನ ಕಂಡು ಉತ್ತರ ಭಾರತ ತತ್ತರಿಸಿದೆ.. ಮಳೆಯ ಈ ದಾಂಗುಡಿಗೆ ಜನರ ನಿದ್ರೆಯೇ ಮಾಯವಾಗಿದೆ.. ಗುಜರಾತ್​​​, ಮಾಹಾರಾಷ್ಟ್ರ, ರಾಜಸ್ಥಾನ, ಜಮ್ಮು ಕಾಶ್ಮೀರ, ಪಂಜಾಬ್​​ನಲ್ಲಿ ಮಳೆ ಅಬ್ಬರಕ್ಕೆ ಜಲಾಧೀನವಾಗ್ತಿವೆ.

ಗುಜರಾತ್​, ದೆಹಲಿಗೆ ಕಾದಿದ್ಯಾ ಮತ್ತೆ ಗಂಡಾಂತರ!

ಪ್ರವಾಹದ ಕಪಿಮುಷ್ಟಿಗೆ ಸಿಲುಕಿದ ಜನರು ಮಳೆಯ ಉಗ್ರಾವತಾರಕ್ಕೆ ಸಂಕಟದಿಂದ ಚಡಪಡಿಸ್ತಿದ್ದಾರೆ. ರಾಜಧಾನಿ ದೆಹಲಿಗೆ ಯಮುನೆ ಮತ್ತೆ ಅಪಾಯದ ಗಂಟೆ ಬಾರಿಸಿದ್ದಾಳೆ.. ಹಲವು ರಾಜ್ಯಗಳ ಒಂದೊಂದು ದೃಶ್ಯವೂ, ಭೀಕರ, ಭಯಾನಕತೆಯನ್ನ ಬಿಚ್ಚಿಡ್ತಿದೆ.

ಗುಜರಾತ್​​ನ ಜುನಾಗಢ್​ ಮೇಲೆ ವರುಣ ಸವಾರಿ!

ಗುಜರಾತ್​ನ ಜುನಾಗಢ್​ದಲ್ಲಿ ಭಾರೀ ಮಳೆ ಆಗ್ತಿದ್ದು, 47 ವರ್ಷದ ತನ್ನದೇ ಹಳೇ ದಾಖಲೆಯನ್ನ ಮುರಿದು ಹಾಕಿದೆ.. ನಿನ್ನೆ ಒಂದೇ ದಿನ 4ಗಂಟೆಯಲ್ಲಿ 8 ಇಂಚು ಮಳೆ ಸುರಿದಿದೆ. ಇವತ್ತು ಮತ್ತು ನಾಳೆ ಯೆಲ್ಲೋ ಅಲರ್ಟ್​ ಎಚ್ಚರಿಕೆ ನೀಡಲಾಗಿದೆ. ಹಲವು ಪ್ರದೇಶಗಳಲ್ಲಿ ಮಳೆಯಿಂದ ವಾಹನಗಳು ಜಖಂ ಆಗಿವೆ. ಒಂದರ ಮೇಲೆ ಒಂದು ಏರಿ ಕುಳಿತಿವೆ.

ಬಸ್​ನಡಿ ಸಿಲುಕಿದ್ದವರು ಬಚಾವ್​​ ಆಗಿದ್ದೆ ಪವಾಡ!

ಇದು ನಿಜಕ್ಕೂ ಪವಾಡವೇ ಸರಿ. ಜುನಾಗಢ್​ನಲ್ಲಿ ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಮಳೆ ನೀರಿನಲ್ಲಿ ಬಸ್​ವೊಂದು ಮುನ್ನುಗ್ತಿದೆ. ಈ ಹೊತ್ತಲ್ಲೆ ಬಸ್​ನ ಪಕ್ಕದಲ್ಲಿ ಮೂವರು ಸಾಗ್ತಿದ್ದಾರೆ. ಆದ್ರೆ, ಚಾಲಕನ ಗಮನಕ್ಕೂ ಬಂದ್ರು ನೀರಿನ ಸೆಳೆತಕ್ಕೆ ಒಬ್ಬನ ಮೇಲೆ ಬಸ್​​​ ನುಗ್ಗಿದೆ. ಹಿಂದಿನ ಟೈಯರ್​ನಲ್ಲಿ ಸಿಲುಕಿ ಬಿಟ್ರು ಅನ್ನೋ ಹೊತ್ತಿಗೆ ಪವಾಡ ರೀತಿಯಲ್ಲಿ ಬಚಾವ್​ ಆಗಿದ್ದಾರೆ.

ಜಲಾಸುರನ ಬಂಧಿಯಾದ ಕಾರು, ಬೋಟ್​​ ರೀತಿ ಸವಾರಿ!

ಮಳೆ ನೀರಿನ ರಭಸಕ್ಕೆ ಕಾರು, ಬಂಧಿ ಆಗಿದೆ. ಬೋಟ್​​ ಅವತಾರ ತಾಳಿದ ಕಾರು, ಗೇರ್​​ ಹಾಕದೇ ನೀರಿನ ನಿರ್ದೇಶನದಂತೆ ಕೊಚ್ಚಿ ಹೋಗಿದೆ. ಈ ದೃಶ್ಯವೂ ಜುನಾಗಢ್​ನಲ್ಲಿ ನಡೆದಿದೆ.

ದೇವಭೂಮಿಯಲ್ಲಿ ಬದುಕಿದ ನೂರು ಜೀವಗಳು!

ಉತ್ತರಾಖಂಡ್​ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ತೆಹ್ರಿ ಗರ್ವಾಲ್​ನ ಸೀತಾಪುರ ಬಳಿ ಬ್ರಿಡ್ಜ್​ ಕುಸಿದಿದೆ. ಇದೇ ಬ್ರಿಡ್ಜ್​ ಹತ್ತಿರ ಸುಮಾರು ನೂರು ಪ್ರವಾಸಿಗಳು ಸಿಲಿಕಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಎಸ್​​ಡಿಆರ್​ಎಫ್​ ತಂಡ ಎಲ್ಲರನ್ನ ರಕ್ಷಣೆ ಮಾಡಿದೆ..

ಮತ್ತೆ ಡೇಂಜರ್​​ ಜೋನ್​ ದಾಟಿದ ಯಮುನಾ ನದಿ!

ಈ ದೃಶ್ಯಗಳು ಕೇವಲ ಯಮುನಾ ನದಿಯದ್ದಲ್ಲ.. ದೆಹಲಿಯ ಜನತೆ ಎದುರಿಸಲಿರುವ ಅಪಾಯ ಮುನ್ಸೂಚನೆ.. ಯಮುನಾ ನದಿಯ ನೀರಿನ ಮಟ್ಟ ಹಿಂದಿಗಿಂತ ಹೆಚ್ಚಾಗಿದೆ.. ನೀರಿನಲ್ಲಿ ಬೋಟ್​ ಮೂಲಕ ಜನರನ್ನ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಮೈಕ್​​​ ಮೂಲಕ ಸೂಚಿಸ್ತಿದ್ದಾರೆ. ಯಮುನೆಯ ಯಮನ ಅವತಾರದ ಬಳಿಕ ಗಂಗಾ ನದಿ ಕೂಡ ಉಕ್ಕಿ ಹರಿಯುತ್ತಿದೆ. ಕಾನ್ಪುರದ ಚೈನ್‌ಪುರವ, ಘಮರ್‌ಖೇಡ, ದೇವನಿಪುರ್ವ, ಮಕ್ಕಾಪುರ ಗ್ರಾಮಗಳಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಘಾಟ್​ ತೀರಕ್ಕೆ ತೆರಳದಂತೆ ಆಡಳಿತ ಮಂಡಳಿ ನಿರ್ಬಂಧ ಹೇರಿದೆ.

ವಿಶಾಖ್​ಪಟ್ಟಣಂನಲ್ಲಿ ವಾಹನಗಳಿಗೆ ರಸ್ತೆ-ನೀರು ಕನ್ಫ್ಯೂಸ್​​​!

ಆಂಧ್ರ ಪ್ರದೇಶದ ವಿಶಾಖ್​ಪಟ್ಟಣಂನಲ್ಲೂ ಭಾರೀ ವರ್ಷಧಾರೆ ಆಗ್ತಿದೆ.. ಹಲವು ಪ್ರದೇಶಗಳು ಮುಳುಗಡೆ ಆಗಿವೆ. ರಸ್ತೆಗಳೆಲ್ಲ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಪರದಾಡಿದ್ರು.

ಮುಂಬೈನಲ್ಲಿ ಮತ್ತೆ ಆತಂಕಕ್ಕೆ ದೂಡಿದ ವರುಣನ ದರ್ಶನ!

ಇತ್ತ ಮುಂಬೈನಲ್ಲಿ ಸಂಜೆ ಆಗ್ತಿದ್ದಂತೆ ವರುಣನ ದರ್ಶನ ಆಗಿದೆ.. ರಾತ್ರಿ ಇಡೀ ಮಳೆ ಸುರಿದಿದೆ.. ಮಳೆ ನಡುವೆ ವಾಹನಗಳ ಸಂಚಾರ ವಿರಳವಾಗಿತ್ತು.. ಭಾನುವಾರವಾದ್ರೂ ಟ್ರಾಫಿಕ್​​ ಬಿಸಿ ಇರಲಿಲ್ಲ.. ಇನ್ನು, ಮಹಾರಾಷ್ಟ್ರದ ರಾಯ್​ಗಢ್​ನ ಇರ್​ಶಾಲ್ವಾಡಿ ಗ್ರಾಮದಲ್ಲಿ ಬುಧವಾರ ಘೋರ ದುರಂತ ಸಂಭವಿಸಿತ್ತು. 27 ಮೃತದೇಹಗಳನ್ನ ಹೊರ ತೆಗೆದಿದ್ದ ಎನ್​ಡಿಆರ್​ಎಫ್​ ತಂಡ, ನಿರಂತರ ಭೂಕುಸಿತ ಕಾರಣಕ್ಕೆ ಕಾರ್ಯಾಚರಣೆ ಸ್ಥಗಿತ ಮಾಡಿದೆ. ಗ್ರಾಮಸ್ಥರೊಂದಿಗೆ ಚರ್ಚಿಸಿ ಘಟನೆಯಲ್ಲಿ ಕಾಣೆ ಆಗಿದ್ದ 57 ಜನ ಸಾವನ್ನಪ್ಪಿದ್ದಾರೆ ಅಂತ ಸರ್ಕಾರ ಘೋಷಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರುಣಾರ್ಭಟಕ್ಕೆ ಉತ್ತರದಲ್ಲಿ ಕಣ್ಣೀರ ಹೊಳೆ.. ಜೀವ ಕಳೆದುಕೊಂಡ ಸಂತ್ರಸ್ತರು; ದೆಹಲಿಗೆ ಮತ್ತೆ ಕಾದಿದೆಯಾ ಯುಮುನೆಯ ವಿಶ್ವರೂಪ..?

https://newsfirstlive.com/wp-content/uploads/2023/07/Delhi_RAIN_1-1.jpg

Load More