ಭಯಾನಕ ಜಲಪ್ರಳಯ.. ‘ಉತ್ತರ’ ಅಯೋಮಯ!
ಉಕ್ಕಿದ ನದಿಗಳು.. ತೇಲಿದ ಕಟ್ಟಡ, ರಸ್ತೆ, ವಾಹನಗಳು
ಪಂಜಾಬ್ನಲ್ಲೂ ಪ್ರವಾಹ.. ಕೊಚ್ಚಿ ಹೋದ ಕಾರುಗಳು
ಬೆಂಗಳೂರು: ಹತ್ತು ವರ್ಷಗಳ ಹಿಂದೆ ಭಯಾನಕ ಜಲಪ್ರಳಯಕ್ಕೆ ಉತ್ತರ ಭಾರತ ತತ್ತರಿಸಿತ್ತು. ಇದೀಗ ಮತ್ತೆ ಅಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಜಮ್ಮು ಕಾಶ್ಮೀರದಿಂದ ಹಿಡಿದು ದೆಹಲಿವರೆಗೆ ಎಲ್ಲ ರಾಜ್ಯಗಳಲ್ಲೂ ಭಾರೀ ಮಳೆ ಆಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಉತ್ತರ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮಳೆರಾಯ ಭಯಾನಕ ವಾತಾವರಣ ಸೃಷ್ಟಿಸಿದ್ದಾನೆ.
ಬಿಯಾಸ್ ಭೋರ್ಗರೆತಕ್ಕೆ ಕೊಚ್ಚಿ ಹೋದ ‘ಹಿಮಾಚಲ’!
ಅಬ್ಬಬ್ಬಾ.. ಒಂದೊಂದು ದೃಶ್ಯಗಳನ್ನು ನೋಡ್ತಿದ್ರೂ ಎದೆ ಝಲ್ ಎನ್ನುತ್ತೆ. ಉತ್ತರದ ನದಿಗಳ ಆರ್ಭಟಕ್ಕೆ ಎಲ್ಲವೂ ಕೊಚ್ಚಿ ಹೋಗ್ತಿದೆ. ಹಿಮಾಚಲದ ಜೀವನದಿ ಬಿಯಾಸ್ಯಲ್ಲಿ ರೌದ್ರಾವತಾರಕ್ಕೆ ಕಟ್ಟಡಗಳು, ರಸ್ತೆಗಳು, ವಾಹನಗಳು ಹೀಗೆ ಎಲ್ಲವೂ ಆಪೋಶನವಾಗ್ತಿವೆ.
ಗುಡ್ಡದಿಂದ ನುಗ್ಗಿ ಬಂದ ಕೆಸರು ನೀರು.. ಮನೆಗಳು ಧ್ವಂಸ
ಹಿಮದ ಸಿರಿಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದ್ದ ಹಿಮಾಚಲ ಪ್ರದೇಶ, ವರುಣ ದೇವನ ವಕ್ರ ದೃಷ್ಟಿಯಿಂದ ತತ್ತರಿಸಿ ಹೋಗಿದೆ. ಪ್ರವಾಸಿಗರ ಹಾಟ್ ಫೇವರೇಟ್ ಮನಾಲಿ ನೀರಲ್ಲಿ ಮುಳುಗ್ತಿದೆ. ಪ್ರವಾಹ ತೀವ್ರತೆ ದೊಡ್ಡದೊಡ್ಡ ಕಟ್ಟಡಗಳನ್ನೇ ಕೊಚ್ಚಿಕೊಂಡು ಹೋಗ್ತಿದೆ. ಮನಾಲಿಯ ಹೋಟೆಲ್ ಒಂದು ನೀರಿನ ರಭಸಕ್ಕೆ ಹೇಗೆ ಕೊಚ್ಚಿ ಹೋಗ್ತಿದೆ ನೋಡಿ.
ಟ್ರಕ್, ಬಸ್, ಕಾರುಗಳು ನದಿ ಪಾಲು
ಕೇವಲ ಕಟ್ಟಡಗಳು ಮಾತ್ರವಲ್ಲ ವಾಹನಗಳೂ ಸಹ ನದಿಯ ಒಡಲು ಸೇರ್ತಿವೆ ಕಾರುಗಳು, ದೊಡ್ಡ ದೊಡ್ಡ ಟ್ರಕ್ಗಳು, ಬಸ್ಗಳು ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗ್ತಿವೆ.
ಗುಡ್ಡ ಕುಸಿತದಿಂದ ಮನೆಗಳು ಧ್ವಂಸ
ಇನ್ನು, ಬೆಟ್ಟಗುಡ್ಡಗಳೂ ಕುಸುವ ದೃಶ್ಯಗಳು ಭಯಂಕರವಾಗಿವೆ. ಗುಡ್ಡ ಕುಸಿತದಿಂದ ಮನೆಗಳು ನೆಲಸಮವಾಗಿದ್ದು, ದೊಡ್ಡದೊಡ್ಡ ಮರದ ದಿಮ್ಮೆಗಳಿಂದ ರಸ್ತೆಗಳಿಗೆ ನುಗ್ಗಿ ಬಂದಿವೆ. ಮಳೆಯಿಂದಾಗಿ ಇದುವರೆಗೆ 20 ಜನ ಸಾವನ್ನಪ್ಪಿದ್ದು, 1300 ರಸ್ತೆಗಳಿಗೆ ಹಾನಿ ಆಗಿದೆ ಎಂದು ಹಿಮಾಚಲ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ.
ನದಿಗಳ ಅಬ್ಬರಕ್ಕೆ ಕೊಚ್ಚಿಹೋದ ರಸ್ತೆಗಳು
ಧಾರಾಕಾರ ಮಳೆಯಿಂದ ಡ್ಯಾಂಗಳ ಭರ್ತಿಯಾಗಿದ್ದು, ಎಲ್ಲ ಗೇಟ್ಗಳನ್ನ ಓಪನ್ ಮಾಡಿ ಅಪಾರ ಪ್ರಮಾಣದ ನೀರು ಬಿಡಲಾಗ್ತಿದೆ. ಇದಿಂದ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ರಸ್ತೆಗಳು, ಸೇತುವೆಗಳು ಹೇಗೆ ಕೊಚ್ಚಿ ಹೋಗಿವೆ ಅಂತ ನೀವೇ ನೋಡಿ.
ಪಂಜಾಬ್ನಲ್ಲೂ ಪ್ರವಾಹ ಸ್ಥಿತಿ, ಕೊಚ್ಚಿ ಹೋದ ಕಾರುಗಳು
ಇನ್ನು ಪಂಜಾಬ್ನಲ್ಲಿ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದ ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿವೆ. ಮೊಹಾಲಿಯಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳು ಬೆಂಕಿಪೊಟ್ಟಣದಂತೆ ತೇಲಿಕೊಂಡು ಹೋಗಿವೆ. ಮಳೆಯ ನೀರಿನ ಜೊತೆಗೆ ಮೊಸಳೆ ಕೂಡ ಜನವಸತಿ ಪ್ರದೇಶಕ್ಕೆ ನುಗ್ಗಿದೆ.
ಜಮ್ಮು-ಕಾಶ್ಮೀರದಲ್ಲೂ ವರುಣಾರ್ಭ ಜೋರು
ಜಮ್ಮು ಕಾಶ್ಮೀರದಲ್ಲೂ ವರುಣ ಅಬ್ಬರ ಹೆಚ್ಚಾಗಿದ್ದು, ರಸ್ತೆಗಳು, ಸೇತುವೆಗಳು ಕೊಚ್ಚಿಹೋಗಿವೆ. ರಸ್ತೆಗಳಿಲ್ಲದ ಕಾರಣ ಅಮರನಾಥ ಯಾತ್ರೆಗೆ ಹೋಗುವವರಿಗೆ ಸಮಸ್ಯೆ ಆಗಿದೆ. ಇನ್ನು ಅನಂತ್ನಾಗ್ ಜಿಲ್ಲೆಯಲ್ಲಿ ಮಳೆ ನೀರಿನಿಂದ ರೈತರು ಬೆಳೆಗಳ ರಾಶಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಅನ್ನದಾತ ಕಂಗಾಲಾಗಿದ್ದಾನೆ.
ಹರಿಯಾಣದಲ್ಲಿ ಪ್ರವಾಹ ಆತಂಕ
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಮಳೆರಾಯನ ಅಬ್ಬರ ಹೆಚ್ಚಾಗುತ್ತಿದೆ. ಹರಿಯಾಣದಲ್ಲೂ ಅಬ್ಬರಿಸಿ ಬೊಬ್ಬೆರಿಯುತ್ತಿರುವ ಮಳೆಯಿಂದ ರಸ್ತೆಗಳು ಕೊಚ್ಚಿಹೋಗಿವೆ. ಕೆಲವೆಡೆ ಪ್ರವಾಹದ ಆತಂಕ ಸೃಷ್ಟಿಯಾಗಿದೆ.
ನದಿಯಲ್ಲಿ ಸಿಲುಕಿದ ಬಸ್.. ಪ್ರಯಾಣಿಕರ ಪರದಾಟ
ಉತ್ತರಾಖಂಡ್ನಲ್ಲೂ ಮಳೆರಾಯ ಸೃಷ್ಟಿಸಿರೋ ಸಮಸ್ಯೆಗಳು ಒಂದೆರಡಲ್ಲ.. ವಿಕಾಸನಗರದಲ್ಲಿ ಬಸ್ಸೊಂದು ರಭಸವಾಗಿ ಹರಿಯುತ್ತಿದ್ದ ನದಿಯ ನೀರಿನಲ್ಲಿ ಸಿಲುಕಿದೆ. ಈ ಬಸ್ನಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಕಿಟಕಿಯ ಮೂಲಕ ಹಾರಿ ಜನರು ತಮ್ಮ ಪ್ರಾಣವನ್ನ ಉಳಿಸಿಕೊಂಡಿದ್ದಾರೆ.
ಉಕ್ಕಿ ಹರಿದ ಯಮುನಾ.. ದೆಹಲಿ ಜಲಾವೃತ
ಇನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲಿ 41 ವರ್ಷಗಳಲ್ಲೇ ದಾಖಲೆ ಮಳೆಯಾಗಿದೆ. ಇದರ ಪರಿಣಾಮ ದೆಹಲಿಯಲ್ಲಿ ಯಮುನಾ ನದಿ ಗರಿಷ್ಠ ಮಟ್ಟ ಮೀರಿ ಹರಿಯುತ್ತಿದೆ. ಇನ್ನು ಮಳೆಯಿಂದಾಗಿ ರಸ್ತೆಗಳೆಲ್ಲಾ ಹೊಳೆಯಂತಾಗಿದ್ದು, ಇದೇ ನೀರಲ್ಲೇ ಜನರು ಈಜುವ ದೃಶ್ಯ ಕಂಡು ಬಂತು. ಇದಷ್ಟೇ ಅಲ್ಲ, ಉತ್ತರ ಭಾರತದ ಇನ್ನೂ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ