newsfirstkannada.com

ರಾಜ್ಯಾದ್ಯಂತ ಭರ್ಜರಿ ಮಳೆ; ಉಡುಪಿಯಲ್ಲಿ 7 ಮಂದಿ ಸಾವು; ಹೈ ಅಲರ್ಟ್ ಘೋಷಣೆ

Share :

08-07-2023

  ಮಳೆರಾಯನ ಮಾಸ್​ ಎಂಟ್ರಿಗೆ ಕರಾವಳಿ ಕಂಗಾಲು

  ಕಡಲನಗರಿಗೆ ಕಂಟಕವಾದ ಭಾರೀ ಕಡಲ್ಕೊರೆತ..!

  ‘ಮಹಾ’ಮಳೆಗೆ ರಾಯಚೂರಲ್ಲಿ NDRF ಅಲರ್ಟ್​

ಬೆಂಗಳೂರು: ಮುಂಗಾರು ಮಳೆ ತಡವಾಗಿ ಎಂಟ್ರಿ ಕೊಟ್ಟರೂ ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದೆ. ಅದರಲ್ಲೂ ಕರಾವಳಿ ಮಲೆನಾಡು ಪ್ರದೇಶಗಳಲ್ಲಿ ಮಳೆರಾಯ ತುಸು ಹೆಚ್ಚೇ ಕರುಣೆ ತೋರಿದ್ದು, ಇಂದು ಕೆಲಕಾಲ ವಿಶ್ರಾಂತಿ ಪಡೆದಿದ್ದಾನೆ. ಆದ್ರೂ ಕಡಲು ಭೋರ್ಗರೆಯುತ್ತಿದ್ದು ನದಿಪಾತ್ರದ ಜನರು ಆತಂಕದಲ್ಲಿದ್ದಾರೆ.

ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ತಡವಾಗಿ ಎಂಟ್ರಿ ಕೊಟ್ರೂ ಜಬರ್ದಸ್ತ್​ ಆಗಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಅದರಲ್ಲೂ ಕರಾವಳಿ ಭಾಗದಲ್ಲಂತೂ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಕೆಲವೆಡೆ ಆಕಾಶ ಬಾಯ್ತೆರೆದಿದ್ದಾನೇನೋ ಎಂಬಂತೆ ವರ್ಷಧಾರೆಯಾಗ್ತಿದೆ. ಮತ್ತೊಂದೆಡೆ ಮಳೆ ನಿಂತ್ರೂ ಸಮುದ್ರರಾಜ ಭಯ ಹುಟ್ಟಿಸುವಂತೆ ಭೋರ್ಗರೆಯುತ್ತಿದ್ದಾನೆ. ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ.

ಕಡಲನಗರಿಯಲ್ಲಿ ಕಡಲ್ಕೊರೆತ.. ಜಂಬೋ ಸ್ಯಾಂಡ್ ಮೊರೆ

ಕರಾವಳಿಯಲ್ಲಿ ಅಲ್ಲಲ್ಲಿ ಮಳೆ ತಗ್ಗಿದ್ರೂ ಸತತವಾಗಿ ಸುರಿದ ವರುಣನ ಮೇಲಿನ ಕೋಪಕ್ಕೆ ಭೂರಮೆ ಮುನಿಸಿಕೊಂಡಂತಿದೆ. ಯಾಕಂದ್ರೆ ಸಮುದ್ರರಾಜನ ಆವೇಷ ಜೋರಾಗಿದೆ. ಕಡಲು ಭಾರೀ ಗಾತ್ರದ ಅಲೆಗಳಿಂದ ಭೋರ್ಗರೆಯುತ್ತಿದ್ದು ಕಡಲತಡಿಯ ಜನರಲ್ಲಿ ಆತಂಕ ಮನೆಮಾಡಿದೆ. ಮೀನಕಳಿಯ ಪ್ರದೇಶದಲ್ಲಿ ಈಗಾಗಲೇ ಕಡಲ್ಕೊರೆತ ಶುರುವಾಗಿದ್ದು, ಕೆಲವು ಮನೆಗಳಲ್ಲಿ ಭೀತಿ ಶುರುವಾಗಿದೆ. ಹೀಗಾಗಿ ಕಡಲ್ಕೊರೆತ ತಡೆಗೆ ಜಂಬೋ ಸ್ಯಾಂಡ್ ಅರ್ಥಾತ್​​ ಆನೆ ಗಾತ್ರದ ಮರಳಿನ ಮೂಟೆಗಳನ್ನು ಸಾಲಾಗಿ ಇಡಲಾಗ್ತಿದೆ. ಆದ್ರೆ ಶಾಶ್ವತ ಪರಿಹಾರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮಹಾಮಳೆಗೆ ಕೃಷ್ಣನಗರಿ ಕಂಗಾಲು.. ಮನೆ ಕುಸಿದು ಜನ ತತ್ತರ

ಇನ್ನು ಮಹಾಮಳೆಗೆ ಉಡುಪಿಯಲ್ಲಿ ಇದುವರೆಗೆ ಒಟ್ಟು 7 ಮಂದಿ ಕೊನೆಯುಸಿರೆಳೆದಿದ್ದಾರೆ. ಅದರಲ್ಲಿ ಹೆಚ್ಚಿನವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇನ್ನು ಸಾವನ್ನಪ್ಪಿದವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗಿದೆ. ಮಳೆಯಬ್ಬರಕ್ಕೆ ಕೆಲವೆಡೆ ಮನೆಗಳು ಕುಸಿದಿದ್ದು ಹಾನಿಯಾದವರಿಗೂ ಪರಿಹಾರ ನೀಡಲಾಗುತ್ತದೆ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಉಡುಪಿಯ ಪಡುಬಿದ್ರಿ ಸಮೀಪದ ಕಾಡಿಪಟ್ಣದ ಕಡಲ್ಕೊರೆತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಭೇಟಿ ನೀಡಿ ವೀಕ್ಷಿಸಿದ್ರು. ಈ ವೇಳೆ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ಉಡುಪಿಯಲ್ಲಿ ಕಡಲ ಕಿನಾರೆಗೆ ಬಂದು ಅಪ್ಪಳಿಸುತ್ತಿರುವ ಅಲೆಗಳು

ಸದ್ಯ ಉಡುಪಿಯಲ್ಲಿ ಮಳೆಯಬ್ಬರ ಕಡಿಮೆಯಾಗಿದ್ದು, ಜಿಟಿ ಜಿಟಿ ಮಳೆಯಾಗುತ್ತಿದೆ. ಮಳೆ ಕಡಿಮೆಯಾದ್ರೂ ಸಮುದ್ರ ಅಬ್ಬರ ಹಾಗೆ ಇದ್ದು ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಹೀಗಾಗಿ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಮಲ್ಪೆ ಬೀಚ್‌ನಲ್ಲೂ ಸಮುದ್ರಕ್ಕೆ ಇಳಿಯದಂತೆ ದಡದಲ್ಲಿ ನೆಟ್ ಅಳವಡಿಸಿ, ಎಚ್ಚರಿಕೆ ಫಲಕಗಳನ್ನ ಹಾಕಲಾಗಿದೆ.

ಇನ್ನು ಉತ್ತರಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಿದೆ. ಮಲೆನಾಡು ಪ್ರದೇಶಗಳಲ್ಲಿ ನಿಧಾನವಾಗಿ ಮಳೆ ಚುರುಕು ಪಡೆದಿದೆ. ಸಿದ್ದಾಪುರ ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸತತ ಮಳೆ ಸುರಿದಿದ್ದು ದಿನವೂ 50 ಮಿಲಿ ಮಿಟರ್​ಗಿಂತ ಹೆಚ್ಚು ಮಳೆಯಾಗಿದೆ. ಉಳಿದಂತೆ ಶಿರಸಿ, ಯಲ್ಲಾಪುರ, ಮುಂಡಗೋಡು, ದಾಂಡೇಲಿಗಳಲ್ಲೂ ಮಳೆಯಾಗಿದೆ. ಮಳೆಯಿಂದಾಗಿ ಕೃಷಿ ಚಟುವಟಿಕೆ ಚುರುಕಾಗಿದೆ.

‘ಮಹಾ’ಮಳೆಗೆ ರಾಯಚೂರು ಜಿಲ್ಲೆಯಲ್ಲಿ ಬೀಡುಬಿಟ್ಟ NDRF

ಇನ್ನು ಮಹಾರಾಷ್ಟ್ರದಲ್ಲಿ ಅಪಾರ ಪ್ರಮಾಣದ ಮಳೆ ಹಿನ್ನೆಲೆ ರಾಯಚೂರು ಜಿಲ್ಲೆಯಲ್ಲಿ NDRF ತಂಡ ಬೀಡು ಬಿಟ್ಟಿದೆ. ಕೃಷ್ಣಾ ಹಾಗೂ ತುಂಗಭದ್ರಾ ನದಿಪಾತ್ರದ 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ತಾಲೀಮು ನಡೆಸಿದ್ದಾರೆ.

ಮಂಡ್ಯದ ಕೆಆರ್‌ಎಸ್‌ ಜಲಾಶಯದ ಒಳಹರಿವು ಹೆಚ್ಚಳ

ಇನ್ನು ಮುಂಗಾರು ಮಳೆ ಹಿನ್ನೆಲೆ ಮಂಡ್ಯದ ಕೆಆರ್‌ಎಸ್‌ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾಗಿದೆ. ಒಂದೇ ದಿನದಲ್ಲಿ ಡ್ಯಾಂನಲ್ಲಿ ಒಂದು ಟಿಎಂಸಿ ನೀರು ಹೆಚ್ಚಳವಾಗಿದ್ದು ಕಾವೇರಿ ಮತ್ತೆ ತನ್ನ ಜಲ ವೈಭವ ಮರುಕಳಿಸುವ ಉತ್ಸುಕದಲ್ಲಿದ್ದಾಳೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಹಿನ್ನೆಲೆ ಕೆಆರ್‌ಎಸ್‌ ಡ್ಯಾಂಗೆ 13,449 ಕ್ಯೂಸೆಕ್ ನೀರು ಒಳಹರಿವು ಬಂದಿದೆ.

ಇಷ್ಟು ಜಿಲ್ಲೆಗಳು ಮಾತ್ರವಲ್ಲದೇ ಬೆಂಗಳೂರು, ಮಂಡ್ಯ, ರಾಮನಗರ, ಬಾಗಲಕೋಟೆ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಕೆಲವೆಡೆ ಕೃಷಿ ಚಟುವಟಿಕೆಗಳಿಗೆ ಚುರುಕು ನೀಡಿದ್ರೆ ಮತ್ತೆ ಕೆಲವೆಡೆ ಅವಾಂತರ ಸೃಷ್ಟಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಾದ್ಯಂತ ಭರ್ಜರಿ ಮಳೆ; ಉಡುಪಿಯಲ್ಲಿ 7 ಮಂದಿ ಸಾವು; ಹೈ ಅಲರ್ಟ್ ಘೋಷಣೆ

https://newsfirstlive.com/wp-content/uploads/2023/07/rain-9.webp

Load More