newsfirstkannada.com

ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆಯಿಂದ ಮಹತ್ವದ ಮುನ್ಸೂಚನೆ!

Share :

24-07-2023

    ರಾಜ್ಯದಲ್ಲಿ ವರುಣಾರ್ಭಟ.. ಎಲ್ಲೆಲ್ಲೂ ನೀರೇ ನೀರು

    ಕರ್ನಾಟಕದ ಬಹುತೇಕ ಕಡೆ ಮೇಘರಾಜ ಮರ್ದನ

    ಕಾಫಿನಾಡಿನಲ್ಲಿ ತುಂಗಾ, ಭದ್ರಾ ನದಿ ಭೋರ್ಗರೆತ..!

ಬೆಂಗಳೂರು: ಮಳೆಗಾಲದಲ್ಲಿ ಮಳೆಯಾಗೋದು ಕಾಮನ್. ಆದ್ರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯ ಮಿತಿ ಮೀರಿ ಆರ್ಭಟಿಸುತ್ತಿದ್ದಾನೆ. ಮೇಘರಾಜನ ವರ್ಷಧಾರೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆಗಳೆಲ್ಲ ಮಳೆನೀರಿನಿಂದ ಕೆರೆಯಂತೆ ಭಾಸವಾಗುತ್ತಿವೆ. ನದಿಗಳ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಇದರಿಂದ ನದಿಪಾತ್ರದ ಜನರಲ್ಲಿ ಪ್ರವಾಹದ ಭೀತಿ ಶುರುವಾಗಿದೆ.

ಎಲ್ಲೆಲ್ಲೂ ಮಳೆರಾಯನ ಆರ್ಭಟ. ಮೇಘರಾಜನ ರೌದ್ರನರ್ತನಕ್ಕೆ ನದಿಗಳ ಭೋರ್ಗರೆತ. ಹಳ್ಳಕೊಳ್ಳಗಳೆಲ್ಲ ತುಂಬಿ ಹರಿಯುತ್ತಾ ಓಟ. ರಸ್ತೆಗಳೆಲ್ಲ ಜಲಾವೃತ. ತುಂಬಿ ಹರಿಯೋ ನದಿ ಪಕ್ಕದಲ್ಲಿ ಯುವಕರ ಹುಚ್ಚಾಟ.

ರಾಜ್ಯದಲ್ಲಿ ವರುಣಾರ್ಭಟ.. ಎಲ್ಲೆಲ್ಲೂ ನೀರೋ ನೀರು!

ರಾಜ್ಯದಲ್ಲಿ ಲೇಟ್‌ ಆಗಿ ಆರಂಭವಾಗಿದ್ದ ಮುಂಗಾರು, ಇದೀಗ ಬಿರುಸುಗೊಂಡಿದೆ. ಕರುನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮೇಘರಾಜನ ಮರ್ದನ ಶುರುವಾಗಿದೆ. ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಗೆ ಕಾಫಿನಾಡು ಚಿಕ್ಕಮಗಳೂರು ತೊಯ್ದು ತೊಪ್ಪೆಯಾಗಿದೆ. ಮಳೆಯಿಂದಾಗಿ ತುಂಗಾ, ಭದ್ರಾ, ಹೇಮಾವತಿ ನದಿಯ ನೀರಿನ ಹರಿವು ಹೆಚ್ಚಳವಾಗಿದ್ದು, ಶೃಂಗೇರಿ, ಕಾರ್ಕಳ ರಸ್ತೆಯ ಸಂಚಾರ ಅಸ್ತವ್ಯಸ್ತವಾಗಿದೆ. ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ರಸ್ತೆಯಲ್ಲಿ ತುಂಗಾನದಿ ಭೋರ್ಗರೆದು ಹರಿಯುತ್ತಿದೆ.

ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದ್ರಿಂದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಕಳಸ-ಹೊರನಾಡು ಸಂಪರ್ಕ ಕಲ್ಪಿಸೋ ರಸ್ತೆ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ 20 ಕಿ.ಮೀ. ಸುತ್ತಿಕೊಂಡು ಹೋಗಬೇಕಿದ್ದು, ವಾಹನ ಸವಾರರ ಗೋಳು ಹೇಳತೀರದಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಹಾನಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್​ ಭೇಟಿ ನೀಡಿದ್ರು. ಕೊಪ್ಪ, ಎನ್.ಆರ್. ಪುರ ತಾಲೂಕಿನ ಮಳೆ ಹಾನಿ ಪ್ರದೇಶಗಳಲ್ಲಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ತುಂಬಿ ಹರಿವ ನದಿಯಲ್ಲಿ ಯುವಕರ ಹುಚ್ಚಾಟ

ಬೆಣ್ಣೆನಗರಿ ದಾವಣಗೆರೆಯಲ್ಲೂ ಮಳೆರಾಯನ ಆರ್ಭಟ ಜೋರಾಗಿದೆ. ಕಳೆದ ವಾರದಿಂದ ಜಿಲ್ಲೆಯಲ್ಲಿ ಜಿಟಿ-ಜಿಟಿ ಮಳೆ ಸುರಿಯುತ್ತಿದೆ. ಈ ಮಧ್ಯೆ ಮಲೆನಾಡಿನ ಭಾಗದಲ್ಲಿ ಭಾರೀ ಮಳೆಯಿಂದಾಗಿ ತುಂಗಾಭದ್ರಾ ನಜಿಯ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆ ಆಗುತ್ತಲೇ ಇದೆ. ಹೀಗೆ ತುಂಬಿ ಹರಿಯುತ್ತಿರೋ ನದಿಯ ಪಕ್ಕದಲ್ಲಿ ಯುವಕರು ಹುಚ್ಚಾಟ ಮೆರೆಯುತ್ತಿದ್ದಾರೆ. ಅಪಾಯವನ್ನೂ ಲೆಕ್ಕಿಸದೇ ನದಿಗೆ ಕಟ್ಟಿರೋ ತಡೆಗೋಡೆ ಮೇಲೆ ನಿಂತು ಸೆಲ್ಫಿಗೆ ಪೋಜು ಕೊಡುತ್ತಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಮಳೆಯಬ್ಬರ.. ನೇತ್ರಾವತಿಯ ಭೋರ್ಗರೆತ

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು, ಪವಿತ್ರಕ್ಷೇತ್ರ ಧರ್ಮಸ್ಥಳದ ಸಮೀಪ ನೇತ್ರಾವತಿ ನದಿಯ ಹರಿವು ಜೋರಾಗಿದೆ. ಹೀಗಾಗಿ ನೇತ್ರಾವತಿ ಸ್ನಾನ ಘಟ್ಟ ಮುಳುಗಡೆಯಾಗುವ ಭೀತಿ ಶುರುವಾಗಿದೆ. ಹೀಗಾಗಿ ನದಿಗೆ ಇಳಿಯದಂತೆ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ. ಆದ್ರೂ ಅಪಾಯವನ್ನ ಲೆಕ್ಕಿಸದೇ ಯಾತ್ರಿಗಳು ನದಿಗೆ ಇಳಿಯುತ್ತಿದ್ದಾರೆ.

ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲ ಬಳಿ ಕಾಂತುಕೋಡಿ ಸೇತುವೆ ಮುಳುಗಡೆಯಾಗಿದೆ. ಹೀಗೆ ಮುಳುಗಿರೋ ಸೇತುವೆಯನ್ನ ದಾಟಿಸಲು ಹೋಗಿ ಪಿಕಪ್ ವಾಹನವೊಂಜು ಸೇತುವೆಯಲ್ಲಿ ಸಿಲುಕಿ ಪರದಾಡಿದ ಪ್ರಸಂಗ ನಡೆದಿದೆ. ಬಳಿಕ ಸ್ಥಳೀಯರೆಲ್ಲರೂ ಸೇರಿ ಹಗ್ಗದ ಸಹಾಯದಿಂದ ವಾಹನದಲ್ಲಿದ್ದವರ ರಕ್ಷಣೆ ಮಾಡಿದ್ದಾರೆ. ಇತ್ತ ಪುಷ್ಪಗಿರಿಯ ಗೌರಿ ಹೊಳೆ ಉಕ್ಕಿ ಹರಿಯುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭೂ ಕುಸಿತದ ಆತಂಕ ಮನೆಮಾಡಿದೆ.

ಕೊಡಗಿನಲ್ಲಿ ಭಾರೀ ಮಳೆ.. ತ್ರಿವೇಣಿ ಸಂಗಮ ಮುಳುಗಡೆ

ಮಂಜಿನ ನಗರಿ ಮಡಿಕೇರಿಯಲ್ಲೂ ಭಾರೀ ಮಳೆಯಾಗುತ್ತಿದೆ. ಪರಿಣಾಮ ಭಾರೀ ಮಳೆಗೆ ಉಕ್ಕಿ ನದಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಅಲ್ಲದೇ ಕೊಡಗಿನ ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಹೀಗಾಗಿ ಭಾಗಮಂಡಲದ ತ್ರಿವೇಣಿ ಸಂಗ್ರಮದ ಸ್ನಾನಘಟ್ಟ ಮತ್ತೆ ಮುಳುಗಡೆಯಾಗಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಜಲಾವೃತವಾಗಿದ್ದು, ರಸ್ತೆ ಮೇಲೆ 1 ಅಡಿ ನೀರು ನಿಂತಿದೆ.

ಮೇಘರಾಜನ ಮೊರೆತ.. ಕುಂಡಲ್ ಸೇತುವೆ ಮುಳುಗಡೆ

ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆರಾಯನ ಆರ್ಭಟ ಮುಂದುವರಿದಿದೆ. ಪರಿಣಾಮ ಜೋಯಿಡಾದ ಕಾತೇಲಿ ವ್ಯಾಪ್ತಿಯ ಕುಂಡಲ್ ಸೇತುವೆ ಮುಳುಗಡೆಯಾಗಿದೆ. ಇದ್ರಿಂದ ಕುಂಡಲ್, ಕುರುವಾಲಿ, ಆಂಬಾಳ ಗ್ರಾಮದ ಸಂಪರ್ಕ ಬಂದ್ ಆಗಿದೆ. ರಾಫ್ಟಿಂಗ್ ದೋಣಿ ಮೂಲಕ ಗ್ರಾಮಸ್ಥರ ರಕ್ಷಣಾಕಾರ್ಯ ನಡೆಯುತ್ತಿದೆ.

ರಾಜ್ಯದಲ್ಲಿ ವರುಣನ ಆಟಾಟೋಪ ಮುಂದುವರಿದಿದೆ. ಕರುನಾಡಿನಲ್ಲಿ ಅಬ್ಬರಿಸುತ್ತಾ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಒಟ್ನಲ್ಲಿ ಮಳೆ ಕೊರತೆ ನಡುವೆ ಆರ್ಭಟಿಸುತ್ತಿರುವ ವರುಣಾ ಕೊಂಚ ನಿರಾಳತೆ ನೀಡಿದೆಯಾದ್ರೂ, ನಡೆಯುತ್ತಿರೋ ಅವಾಂತರಗಳು ತಲೆನೋವನ್ನೂ ತಂದಿಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆಯಿಂದ ಮಹತ್ವದ ಮುನ್ಸೂಚನೆ!

https://newsfirstlive.com/wp-content/uploads/2023/07/KARNATAKA_RAIN.jpg

Load More