ಚಾಯ್ಸ್ ಮಾಡ್ತಿಲ್ಲ, ಜಾಸ್ತಿ ಮಾತೂ ಆಡುತ್ತಿಲ್ಲ.. ಸೀರೆ ಸಿಕ್ರೆ ಸಾಕು!
ಶಾಪ್ ಓಪನ್ ಆಗೋ ಮುಂಚೆಯೇ ಕಾಯುತ್ತಿದ್ದ ಮಹಿಳೆಯರು
M.G ರೋಡ್‌ನ KSIC ಮಳಿಗೆಯಲ್ಲಿ ಸೀರೆಗಾಗಿ ನೂಕಾಟ, ತಳ್ಳಾಟ
ಬೆಂಗಳೂರು: ಮೈಸೂರು ಸಿಲ್ಕ್ ಸೀರೆಗೆ ಮರುಳಾಗದ ನಾರಿಯರು ಸಿಗೋದು ಬಹಳ ಕಡಿಮೆ. ರೇಷ್ಮೆ ಸೀರೆಯ ಅಂದ, ಚೆಂದ, ಗುಣಮಟ್ಟ ಅಷ್ಟು ಚೆನ್ನಾಗಿರುತ್ತೆ. ಹೊಸ, ಹೊಸ ಮೈಸೂರು ಸಿಲ್ಕ್ ಸೀರೆಯನ್ನು ಕೊಂಡುಕೊಳ್ಳುವುದು ಎಷ್ಟೋ ಮಹಿಳೆಯರ ಮಹದಾಸೆಯಾಗಿರುತ್ತೆ. ಮೈಸೂರು ಸಿಲ್ಕ್ ಸೀರೆಗೆ ಅದೆಷ್ಟು ಡಿಮ್ಯಾಂಡ್ ಜಾಸ್ತಿ ಆಗಿದೆ ಅಂದ್ರೆ ಪ್ರತಿಷ್ಠಿತ KSIC ಮಳಿಗೆಗೆ ಬಂದ ಸೀರೆ ಒಂದೆರಡು ಗಂಟೆಯಲ್ಲೇ ಖಾಲಿಯಾಗುತ್ತಿದೆ.
ಮೈಸೂರು ಸಿಲ್ಕ್ ಸೀರೆಗಾಗಿ ನಾರಿಯರು ಮುಗಿಬೀಳುತ್ತಿದ್ದಾರೆ. ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರುವ KSIC ಮಳಿಗೆ ಓಪನ್ ಆಗೋದನ್ನೇ ಮಹಿಳೆಯರು ಕಾಯುತ್ತಿದ್ದಾರೆ. ಶಾಪ್ ಓಪನ್ ಆಗುತ್ತಿದ್ದಂತೆ ನಾರಿಯರು ನುಗ್ಗುತ್ತಿದ್ದಾರೆ.
ಇದನ್ನೂ ಓದಿ: ಮೈಸೂರು ಸಿಲ್ಕ್ ಸೀರೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್.. ಕ್ಯೂ ನಿಂತರೂ ಸಿಗುತ್ತಿಲ್ಲ ಸ್ಯಾರಿ; ಕಾರಣವೇನು?
ಶನಿವಾರವೇ ಎಂ.ಜಿ ರೋಡ್‌ನ KSIC ಮಳಿಗೆಗೆ ಒಂದು ವಾರಕ್ಕಾಗುವಷ್ಟು ಸಿಲ್ಕ್ ಸೀರೆ ಸ್ಟಾಕ್ ಬಂದಿದೆ. ಆದರೆ ಮಳಿಗೆ ಒಳಗೆ ಬಂದ ಮಹಿಳೆಯರು ಚಾಯ್ಸ್ ಮಾಡ್ತಿಲ್ಲ, ಜಾಸ್ತಿ ಮಾತೂ ಆಡುತ್ತಿಲ್ಲ. ಸೀರೆ ಸಿಕ್ರೆ ಸಾಕು ಎಂದು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಒಂದು ವಾರಕ್ಕೆ ಆಗುವಷ್ಟು ಸ್ಟಾಕ್ ಒಂದೆರಡು ಗಂಟೆಯಲ್ಲಿ ಖಾಲಿಯಾಗಿದೆ.
ಇಂದು ಬೆಳಗ್ಗೆ ಮಳಿಗೆ ಓಪನ್ ಆಗುವ ಮುಂಚೆಯೇ ಎಷ್ಟೋ ಮಹಿಳೆಯರು ಕಾಯುತ್ತಾ ನಿಂತಿದ್ದರು. ಓಪನ್ ಆಗುತ್ತಿದ್ದಂತೆ ಕೈಗೆ ಸಿಕ್ಕಿದ್ದೇ ಭಾಗ್ಯವೆಂದು ನಾರಿಯರು ಮುಗಿಬಿದ್ದು ಮೈಸೂರು ಸಿಲ್ಕ್ ಸೀರೆ ಖರೀದಿಸಿದ್ದಾರೆ. ಹೊಸದಾಗಿ ಬಂದಿರೋ ಸೀರೆಗಳು ಖಾಲಿಯಾಗೋ ತನಕ ನಾರಿಯರ ನೂಕಾಟ, ತಳ್ಳಾಟ ನಡೆದಿದೆ. ಒಬ್ಬೊಬ್ಬರಿಗೆ ಒಂದು ಸೀರೆ ಸಿಗೋದು ಕಷ್ಟವಾಗಿತ್ತು. ಕೆಲವರು ಸೀರೆಯೂ ಸಿಗದೆ ವಾಪಸ್ ಹೋಗಿದ್ದಾರೆ.
ಇದನ್ನೂ ಓದಿ: ಟಿಪ್ಪುವಿನಿಂದ ವಿಕ್ಟೋರಿಯಾ ರಾಣಿವರೆಗೂ; ಮೈಸೂರು ಸಿಲ್ಕ್ ಸೀರೆ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು?
ಕಳೆದ ವಾರ ಎಂ.ಜಿ ರೋಡ್‌ನ KSIC ಮಳಿಗೆಯಲ್ಲಿ ಸೀರೆಗೆ ಇಷ್ಟೇ ಡಿಮ್ಯಾಂಡ್ ಕಂಡು ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ KSIC ರಾಜ್ಯದಲ್ಲಿ ರೇಷ್ಮೆ ಸೀರೆಯ ಉತ್ಪಾದನೆ ಕಡಿಮೆ ಆಗಿಲ್ಲ. ಆದರೆ ಡಿಮ್ಯಾಂಡ್ ಜಾಸ್ತಿ ಆಗಿದೆ ಎಂದು ಪ್ರತಿಕ್ರಿಯೆ ನೀಡಿತ್ತು. ಇದೀಗ ಮತ್ತೆ ಮೈಸೂರು ಸಿಲ್ಕ್ ಸೀರೆಗಾಗಿ ನಾರಿಯರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ನೂರಾರು ವರ್ಷಗಳ ಇತಿಹಾಸ ಇರುವ ಮೈಸೂರು ಸಿಲ್ಕ್ ಸೀರೆ ಸಿಕ್ಕವರಿಗೆ ಸೀರುಂಡೆ ಅನ್ನುವಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ