newsfirstkannada.com

×

Train Derailment: ದೇಶದ ಹಲವೆಡೆ ಸ್ಫೋಟಕ ಸಂಚು.. ರೈಲು ಹಳಿ ತಪ್ಪಿಸುವ ಹುನ್ನಾರ ಮಾಡ್ತಿರೋದು ಯಾರು?

Share :

Published September 10, 2024 at 5:12pm

Update September 10, 2024 at 5:25pm

    ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿವೆ ರೈಲು ಹಳಿ ತಪ್ಪಿಸುವ ದುಷ್ಕೃತ್ಯಗಳು

    ನಿನ್ನೆ ಉತ್ತರಪ್ರದೇಶ, ಇಂದು ರಾಜಸ್ಥಾನದಲ್ಲಿ ಹಳಿ ತಪ್ಪಿಸುವ ಹುನ್ನಾರ

    ಈ ಸಂಚಿನ ಹಿಂದೆ ಇದೆಯಾ ಪಾಕಿಸ್ತಾನ ಭಯೋತ್ಪಾದಕರ ಕೈವಾಡ?

ನವದೆಹಲಿ: ದೇಶದಲ್ಲಿ ದಿನೇ ದಿನೇ ರೈಲು ಹಳಿ ತಪ್ಪಿಸುವ ಹುನ್ನಾರಗಳು ಹೆಚ್ಚಾಗುತ್ತಿವೆ. ವಂದೇ ಭಾರತ್ ರೈಲಿಗೆ ಕಲ್ಲು ಹೊಡೆಯುವುದರಿಂದ ಹಿಡಿದು ಆರಂಭವಾದ ಈ ಹುಚ್ಚಾಟಗಳು ಈಗ ಬೇರೆಯದ್ದೇ ಹಂತಕ್ಕೆ ಹೋಗಿವೆ. ನಿನ್ನೆಯಷ್ಟೇ ಉತ್ತರಪ್ರದೇಶದ ಕಾನ್ಪುರ ಬಳಿ ರೈಲ್ವೇ ಹಳಿ ಮೇಲೆ ಯಾವುದೋ ದುಷ್ಕರ್ಮಿಗಳು ಗ್ಯಾಸ್ ಸಿಲಿಂಡರ್ ಇಟ್ಟಿದ್ದರು. ಈಗ ಮತ್ತೆ ಅಂತಹುದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಜನಪ್ರಿಯ ಐಸ್​ಕ್ರೀಮ್ ಪಾರ್ಲರ್​​ಗೆ ಹೊಕ್ಕ ಅಬಕಾರಿ ಅಧಿಕಾರಿಗಳಿಗೆ ಸಿಕ್ಕಿದ್ದೇನು; ವಿಷಯ ತಿಳಿದ್ರೆ ಶಾಕ್ ಆಗ್ತಿರಾ

ರಾಜಸ್ಥಾನದ ಅಜ್ಮೀರ್​ನಲ್ಲಿ ರೈಲ್ವೆ ಹಳಿಯ ಮೇಲೆ ಸಿಮೆಂಟ್ ಬ್ಲಾಕ್​ಗಳನ್ನು ಇಟ್ಟು ರೈಲು ಹಳಿ ತಪ್ಪಿಸುವಂತ ಮತ್ತೊಂದು ದುಷ್ಕೃತ್ಯ ನಡೆದಿದೆ.ಅಜ್ಮೀರ್​​ ಬಳಿಯ ಸರ್ದಾನಾ, ಬಂಗಾದ್​ ಗ್ರಾಮಗಳ ನಡುವೆ ಹಾಯ್ದು ಹೋಗುವ ರೈಲು ಹಳಿಯ ಮೇಲೆ ದುಷ್ಕರ್ಮಿಗಳು ಸಿಮೆಂಟ್ ಬ್ಲಾಕ್​ ಇಟ್ಟಿದ್ದು ಪತ್ತೆಯಾಗಿದೆ.

ಈ ಬಗ್ಗೆ ದೂರು ನೀಡಿದ ಪ್ರೈಟ್ ಕಾರಿಡಾರ್ ಕಾರ್ಪೋರೇಷನ್ ಅಧಿಕಾರಿಗಳು, ಭಾರತದಲ್ಲಿ ಆಗಸ್ಟ್​ 1 ರಿಂದ ಈ ರೀತಿಯ 18 ಕೇಸ್ ದಾಖಲಾಗಿರುವ ಬಗ್ಗೆ ಮಾಹಿತಿ ನೀಡಿದೆ. ಕಳೆದ ಎರಡು ವರ್ಷಗಳಲ್ಲಿ ಒಟ್ಟು 24 ರೈಲು ಹಳಿಗಳನ್ನು ತಪ್ಪಿಸುವಂತ ದುಷ್ಕೃತ್ಯ ನಡೆದಿದೆ.

ಇದನ್ನೂ ಓದಿ: ಭಾರತೀಯರ ತಟ್ಟೆಯ ಮೇಲೆ ಬಾಂಗ್ಲಾದೇಶದ ಕಣ್ಣು, ಹೊಸ ಮಧ್ಯಂತರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಎಂತಹದು?

ಪದೇ ಪದೇ ಇಂತಹ ಸಂಚುಗಳು ಆಗುತ್ತಿರುವುದೇಕೆ ಅಂತ ಜಾಡು ಹಿಡಿದು ಹೊರಟರೆ ಮತ್ತದೇ ಉಗ್ರಗಾಮಿಗಳ ಸಂಚು ಆಚೆಗೆ ಬರುತ್ತದೆ. ಭಾರತದ ರೈಲು ಹಳಿಗಳನ್ನು ಸ್ಪೋಟಿಸಲು ಪಾಕಿಸ್ತಾನದ ಉಗ್ರಗಾಮಿಗಳು ಕರೆ ನೀಡಿದ್ದಾರೆ. ಹೀಗಾಗಿಯೇ ಭಾರತದಲ್ಲಿ ನಡೆಯುತ್ತಿರುವ ಈ ರೈಲು ಹಳಿ ತಪ್ಪಿಸುವ ದುಷ್ಕೃತ್ಯಗಳ ಹಿಂದೆ ಪಾಕ್ ಕೈವಾಡ ಇರುವ ಶಂಕೆ ಇದೆ. ಅದರಲ್ಲೂ ಪಾಕ್ ಉಗ್ರರು ಕರೆ ಕೊಟ್ಟ ಬಳಿಕ ಈ ಕೃತ್ಯಗಳ ಸಂಖ್ಯೆ ಹೆಚ್ಚಾಗುತ್ತಿವೆ. ರೈಲು ಹಳಿ ತಪ್ಪಿಸುವ ದುಷ್ಕೃತ್ಯಗಳ ಬಗ್ಗೆ ಎನ್​ಐಎ ತನಿಖೆಗೆ ಆಗ್ರಹ ಮಾಡಲಾಗಿದೆ. ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರ. ದಿನಕ್ಕೆ ಕೋಟ್ಯಾಂತರ ಮಂದಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಹೀಗಾಗಿ ರೈಲು ಹಳಿ ತಪ್ಪಿಸಿ ಸಾವಿರಾರು ಜನರ ಮಾರಣಹೋಮಕ್ಕೆ ಉಗ್ರರು ಸಂಚು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Train Derailment: ದೇಶದ ಹಲವೆಡೆ ಸ್ಫೋಟಕ ಸಂಚು.. ರೈಲು ಹಳಿ ತಪ್ಪಿಸುವ ಹುನ್ನಾರ ಮಾಡ್ತಿರೋದು ಯಾರು?

https://newsfirstlive.com/wp-content/uploads/2024/09/TRAIN.jpg

Load More