Advertisment

ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೋಟಿ ಕೋಟಿ ಅಕ್ರಮ. ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಏನಂದ್ರು..?

author-image
Ganesh Nachikethu
Updated On
ದುಡ್ಡು ಕೊಟ್ರೆ ಮಾತ್ರ ಗೃಹಲಕ್ಷ್ಮಿ ಅರ್ಜಿ ಅಪ್ಲೈ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ನೋಡಲೇ ಬೇಕಾದ ಸ್ಟೋರಿ ಇದು
Advertisment
  • ಸಚಿವೆ ಲಕ್ಷ್ಮಿ ಹೆಬ್ವಾಳ್ಕರ್ ವಿಶೇಷ ಕರ್ತವ್ಯ ಅಧಿಕಾರಿಯಿಂದ ಭಾರೀ ಭ್ರಷ್ಟಾಚಾರ
  • ರಾಜ್ಯಪಾಲರಿಗೆ, ಲೋಕಾಯುಕ್ತರಿಗೆ ನೀಡಿದ್ಯಾರು..? ಆ ದೂರಿನಲ್ಲೇನಿದೆ ಗೊತ್ತಾ?
  • ತನ್ನ ಇಲಾಖೆ ಭ್ರಷ್ಟಾಚಾರದ ಕುರಿತು ಸಚಿವೆ ಲಕ್ಷ್ಮಿ ಹೆಬ್ವಾಳ್ಕರ್ ಹೇಳಿದ್ದೇನು..?

ಬೆಂಗಳೂರು: ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿಶೇಷ ಕರ್ತವ್ಯ ಅಧಿಕಾರಿ ಬಿ.ಹೆಚ್ ನಿಶ್ಚಲ್ ಅವರೇ ಭಾರೀ ಹಗರಣ ಮಾಡಿ ಕೋಟಿಗಟ್ಟಲೇ ಲೂಟಿ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

Advertisment

ಈ ಸಂಬಂಧ ಮಾತಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಾನು ತೆಲಂಗಾಣ ಎಲೆಕ್ಷನ್​​ನಲ್ಲಿ ಇದ್ದೇನೆ. ನನಗೆ ಈ ಬಗ್ಗೆ ಏನು ಗೊತ್ತಿಲ್ಲ. ನಾನು ಒಂದೇ ಮಾತು ಹೇಳ್ತಿಲ್ಲ. ಯಾರು ಈ ಪದ್ಮರಾಜ್​ ಎಂದು ನನಗೆ ಗೊತ್ತಿಲ್ಲ. ACDPO ಒಬ್ಬರು ಮನವಿ ಕೊಟ್ಟಿದ್ದರು. ದಾಖಲೆ ಏನಾದರೂ ಇದ್ದರೆ ನಾನು ಪರಿಶೀಲಿಸುವೆ ಎಂದರು.

ದೂರು ಕೊಟ್ಟು ತುಂಬಾ ಒಳ್ಳೆ ಕೆಲಸ ಮಾಡಿದ್ದಾರೆ. ಲೋಕಾಯುಕ್ತ ತನಿಖೆಯಿಂದ ನಿಜಾಂಶ ತಿಳಿಯುತ್ತೆ. ಈ ಬಗ್ಗೆ ನಾನು ಇಲಾಖಾ ತನಿಖೆ ಕೂಡ ನಡೆಸುತ್ತೇನೆ ಎಂದರು.

ಏನಿದು ದೂರು..?

ಬಿ.ಹೆಚ್ ನಿಶ್ಚಲ್ ವಿರುದ್ಧ ಸಾಲು ಸಾಲು ಆರೋಪ‌ ಕೇಳಿ ಬಂದಿದ್ದು ಅದೇ ಇಲಾಖೆಯ ಅಧಿಕಾರಿ ಎಸ್​​.ಸಿ ಪದ್ಮರಾಜು ಅವರು ದಾಖಲೆಗಳ ಸಮೇತ ರಾಜ್ಯಪಾಲರು, ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಸಚಿವೆ & ಸಚಿವೆ ಸಹೋದರ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಸಚಿವರು ಹೇಳಿದ್ದಾರೆಂದು ಕೋಟ್ಯಂತರ ರೂಪಾಯಿ ಹಣ ಸಂಗ್ರಹ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು MLC ಹಟ್ಟಿಹೊಳಿ ಹೆಸರನ್ನು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment