newsfirstkannada.com

ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಮೇಲೆ ನಿಗೂಢ ಹೆಲಿಕಾಪ್ಟರ್ ಹಾರಾಟ; ಶ್ರೀಮಂತ ದೇಗುಲದ ಭಕ್ತರಲ್ಲಿ ಆತಂಕ

Share :

05-08-2023

    ತಳಮಹಡಿಯಲ್ಲಿ 1 ಲಕ್ಷ ಕೋಟಿ ಸಂಪತ್ತು ಇರುವ ದೇವಸ್ಥಾನ

    ರಾತ್ರಿ ದೇವಾಲಯದ ಮೇಲೆ ಹೆಲಿಕಾಪ್ಟರ್ ಹಾರಾಡಿದ್ದು ಯಾಕೆ?

    ಹೆಲಿಕಾಪ್ಟರ್‌ 5 ಬಾರಿ ಹಾರಾಟ ನಡೆಸಿದ್ದಕ್ಕೆ ಹಲವು ಅನುಮಾನ

ತಿರುವನಂತಪುರಂ: ಒಂದು ಲಕ್ಷ ಕೋಟಿಗೂ ಅಧಿಕ ಸಂಪತ್ತು ಹೊಂದಿರುವ ಕೇರಳದ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯ ಮತ್ತೊಮ್ಮೆ ಸುದ್ದಿಯಾಗಿದೆ. ಈ ದೇಗುಲದ ಕೋಟಿ, ಕೋಟಿ ಖಜಾನೆಯ ವಿಚಾರ ಕೋರ್ಟ್‌ ಮೆಟ್ಟಿಲೇರಿದ ಮೇಲೆ ಭದ್ರತೆ ಹೆಚ್ಚಿಸಲಾಗಿದೆ. ಇಷ್ಟಾದ್ರೂ ಕಳೆದ ಜುಲೈ 28ರಂದು ಈ ದೇವಸ್ಥಾನದ ಮೇಲೆ ಖಾಸಗಿ ಹೆಲಿಕಾಪ್ಟರ್ ಒಂದು ಹಾರಾಟ ನಡೆಿಸಿದೆ. ನಡುರಾತ್ರಿ ಖಾಸಗಿ ಹೆಲಿಕಾಪ್ಟರ್ ಒಂದು 5ಕ್ಕೂ ಹೆಚ್ಚು ಬಾರಿ ದೇವಸ್ಥಾನದ ಮೇಲೆ ಹಾರಾಟ ನಡೆಸಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ದೇಗುಲದ ಒಳಗೆ ಒಂದು ಲಕ್ಷ ಕೋಟಿಗೂ ಅಧಿಕ ಸಂಪತ್ತು ಇರುವಾಗ ಖಾಸಗಿ ಹೆಲಿಕಾಪ್ಟರ್‌ ಹಾರಾಟ ನಡೆಸಿರೋದು ಆತಂಕಕ್ಕೆ ಕಾರಣವಾಗಿದೆ.

ಮಧ್ಯರಾತ್ರಿ ಖಾಸಗಿ ಹೆಲಿಕಾಪ್ಟರ್ ಶ್ರೀಮಂತ ದೇವಾಲಯದ ಮೇಲೆ ಹಾರಾಡಿದ್ದು ಯಾಕೆ? ಈ ಹೆಲಿಕಾಪ್ಟರ್ ಉದ್ದೇಶ ಏನಾಗಿತ್ತು ಅನ್ನೋದು ಗೊಂದಲಕ್ಕೆ ಕಾರಣವಾಗಿದೆ. ಸ್ಥಳೀಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ಕಮಿಷನರ್ ಅವರಿಂದ ರಾಜ್ಯ ಪೊಲೀಸ್ ಮುಖ್ಯಸ್ಥರು ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ. ಕಳೆದ 2011ರಿಂದಲೂ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಜಾಗವನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಆದ್ರೆ ನೋ ಫ್ಲೈ ಜೋನ್ ಮಾತ್ರ ಅನ್ವಯವಾಗಿಲ್ಲ. ಖಾಸಗಿ ಹೆಲಿಕಾಪ್ಟರ್ ಹಾರಾಟದ ಬಳಿಕ ಕೇರಳ ಪೊಲೀಸರು ಪದ್ಮನಾಭ ಸ್ವಾಮಿ ದೇವಾಲಯದ ಪ್ರದೇಶವನ್ನು ನೋ ಫ್ಲೈ ಜೋನ್ ಎಂದು ಘೋಷಿಸಲು ಮನವಿ ಮಾಡಿದ್ದಾರೆ.

ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಖಜಾನೆಯು ರಾಜಮನೆತನಕ್ಕೆ ಸೇರಿದ್ದು ಎಂದು ಕೇಸ್ ಹಾಕಲಾಗಿತ್ತು. ದೇವಸ್ಥಾನದಲ್ಲಿರುವ ತಳಮಹಡಿಯಲ್ಲಿರುವ ಎ ಕಮಾನನ್ನು ಮಾತ್ರ ತೆರೆಯಲಾಗಿದ್ದು, ಬಿ ಕಮಾನನ್ನು ತೆರೆಯಲಾಗಿಲ್ಲ. ಇದರಲ್ಲಿ ತಿರುವಾಂಕೂರು ರಾಜಮನೆತನದವರು ಲಕ್ಷಾಂತರ ಕೋಟಿ ಮೌಲ್ಯದ ಸಂಪತ್ತು ನಮಗೆ ಸೇರಬೇಕೆಂದು ಕಾನೂನು ಸಮರ ನಡೆಸಿದ್ದರು. ಕೇರಳ ಹೈಕೋರ್ಟ್‌ ಕೊನೇ ರಾಜವಂಶಸ್ಥರ ಸಾವಿನೊಂದಿಗೆ ದೇವಸ್ಥಾನದ ಹಕ್ಕುಗಳು ಮುಗಿದು ಹೋಗಿವೆ. ದೇವಾಲಯದ ಮೇಲಿನ ಹಕ್ಕುಗಳು ರಾಜಮನೆತನದವರಿಗೆ ಇರುವುದಿಲ್ಲ ಎಂದು ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲೂ ವಿಚಾರಣೆ ನಡೆಸಲಾಗಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಹೆಲಿಕಾಪ್ಟರ್ ಹಾರಾಟ ನಡೆಸಿರೋದು ಆಶ್ಚರ್ಯ ತಂದಿದೆ. ಸದ್ಯ ಅನಂತ ಪದ್ಮನಾಭ ಸ್ವಾಮಿ ದೇವಾಲಯ ಕೇರಳ ರಾಜ್ಯ ಪೊಲೀಸರ ಸರ್ಪಗಾವಲಿನಲ್ಲಿದೆ. ವಿಶೇಷ ಪೊಲೀಸ್ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಮೇಲೆ ನಿಗೂಢ ಹೆಲಿಕಾಪ್ಟರ್ ಹಾರಾಟ; ಶ್ರೀಮಂತ ದೇಗುಲದ ಭಕ್ತರಲ್ಲಿ ಆತಂಕ

https://newsfirstlive.com/wp-content/uploads/2023/08/Padmanabhaswamy-Tempel.jpg

Load More