newsfirstkannada.com

PHOTOS: ಈಜಿಪ್ಟ್‌ನಲ್ಲಿ ಪ್ರಧಾನಿ ಮೋದಿ ಹವಾ ಸೃಷ್ಟಿಸಿದ ಟಾಪ್ 10 ಫೋಟೋಗಳು ಇಲ್ಲಿದೆ ನೋಡಿ

Share :

25-06-2023

    13ನೇ ಅತ್ಯುನ್ನತ ಪ್ರಶಸ್ತಿ ಮುಡಿಗೇರಿಸಿಕೊಂಡ ನರೇಂದ್ರ ಮೋದಿ

    11ನೇ ಶತಮಾನದ ಅಲ್​-ಹಕೀಮ್​ ಮಸೀದಿಗೆ ಐತಿಹಾಸಿಕ ಭೇಟಿ

    ಕೈರೋದಲ್ಲಿರುವ ಪ್ರಸಿದ್ಧ ಪಿರಿಮಿಡ್​ಗಳ ಸೌಂದರ್ಯ ಸವಿದ ನಮೋ

ಅಮೆರಿಕಾ ಪ್ರವಾಸದ ಬಳಿಕ ಮೊದಲ ಬಾರಿಗೆ ಈಜಿಪ್ಟ್​ ನೆಲಕ್ಕೆ ಪಾದಾರ್ಪಣೆ ಮಾಡಿರೋ ಮೋದಿ ಅಲ್ಲೂ ಸಹ ಸಂಚಲನ ಸೃಷ್ಟಿಸಿದ್ದಾರೆ. ಈಜಿಪ್ಟ್​ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಈಜಿಪ್ಟ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರೋ ನಮೋ, ಅಬ್ದೆಲ್​ ಫತ್ತಾಹ್​ ಜೊತೆ ಸುಧೀರ್ಘ ಮಾತುಕತೆ ನಡೆಸಿದ್ದಾರೆ. ಎರಡೂ ದೇಶಗಳ ನಡುವಿನ ಬಾಂಧವ್ಯವನ್ನ ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಇಬ್ಬರೂ ನಾಯಕರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

13ನೇ ಅತ್ಯುನ್ನತ ಪ್ರಶಸ್ತಿ ಮುಡಿಗೇರಿಸಿಕೊಂಡ ನಮೋ!
ಈಜಿಪ್ಟ್​ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ‘ಆರ್ಡರ್​ ಆಫ್​ ದಿ ನೈಲ್​’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ವಿಶ್ವದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ‘ಆರ್ಡರ್​ ಆಫ್​ ದಿ ನೈಲ್​’ ಪ್ರಶಸ್ತಿ ಮೋದಿಗೆ ದೊರಕಿರುವ 13ನೇ ಅತ್ಯುನ್ನತ ಪ್ರಶಸ್ತಿಯಾಗಿದೆ. ಮಾನವೀಯ ಮೌಲ್ಯಗಳನ್ನ ಆಧರಿಸಿ ನೀಡುವ ಈ ಪ್ರಶಸ್ತಿ ಸದ್ಯ ಮೋದಿಯ ಮುಡಿಗೇರಿದೆ.

ಅಲ್​-ಹಕೀಮ್​ ಮಸೀದಿಗೆ ನಮೋ ಭೇಟಿ
ಈಜಿಪ್ಟ್​ನ ಕೈರೋದಲ್ಲಿರುವ 11 ಶತಮಾನದ ಅಲ್​-ಹಕೀಮ್​ ಮಸೀದಿಗೆ ಮೋದಿ ಭೇಟಿ ನೀಡಿದ್ರು. ಮಸೀದಿಗೆ ಆಗಮಿಸಿದ ಮೋದಿಯನ್ನ ಧರ್ಮಗುರುಗಳು ಆದರದಿಂದ ಸ್ವಾಗತಿಸಿದ್ರು. ಬಳಿಕ ಮಸೀದಿಯ ಇತಿಹಾಸವನ್ನ ಮೋದಿಗೆ ವಿವರಿಸಿದ್ರು.

ಇತಿಹಾಸ ಪ್ರಸಿದ್ಧ ಪಿರಮಿಡ್​ ವೀಕ್ಷಿಸಿದ ನಮೋ
ಈಜಿಪ್ಟ್​ನ ಕೈರೋದಲ್ಲಿರುವ ಇತಿಹಾಸ ಪ್ರಸಿದ್ಧ ಪಿರಿಮಿಡ್​ಗಳ ಸೌಂದರ್ಯವನ್ನ ಸಹ ಮೋದಿ ಸವಿದ್ರು. ಈ ವೇಳೆ ಪಿರಮಿಡ್​ ಬಗ್ಗೆ ಮೋದಿ ಅವರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಅವರಿಗೆ ಪಿರಮಿಡ್​ ಮಾದರಿಯ ಕಂಚಿನ​ ಪುತ್ಥಳಿ ನೀಡಿ ಗೌರವಿಸಿದ್ರು.

ಪ್ರಥಮ ಮಹಾಯುದ್ಧದಲ್ಲಿ ಮಡಿದ ಯೋದರ ಸ್ಮಾರಕಕ್ಕೂ ಭೇಟಿ ನೀಡಿ ಮೋದಿ ಗೌರವ ಸಲ್ಲಿಸಿದ್ರು. ಬಳಿಕ ಕೈರೋದಲ್ಲಿ ವಾಸವಿರುವ ಅನಿವಾಸಿ ಭಾರತೀಯರನ್ನ ಸಹ ಮೋದಿ ಭೇಟಿಯಾದ್ರು.

ಈಜಿಪ್ಟ್​​ನಲ್ಲೂ ಹೊಸ ಮೈಲಿಗಲ್ಲು ಸೃಷ್ಟಿಸಿರೋ ಮೋದಿಗೆ ಅಲ್ಲೂ ಸಹ ಆದರದ ಸ್ವಾಗತ, ಅದ್ದೂರಿ ಗೌರವ ಸಿಕ್ಕಿದೆ. ಈ ಮೂಲಕ ಭಾರತ ಮತ್ತು ಈಜಿಪ್ಟ್​ ನಡುವಿನ ಸಂಬಂಧವನ್ನ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮೋದಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

PHOTOS: ಈಜಿಪ್ಟ್‌ನಲ್ಲಿ ಪ್ರಧಾನಿ ಮೋದಿ ಹವಾ ಸೃಷ್ಟಿಸಿದ ಟಾಪ್ 10 ಫೋಟೋಗಳು ಇಲ್ಲಿದೆ ನೋಡಿ

https://newsfirstlive.com/wp-content/uploads/2023/06/PM-Modi-1-2.jpg

Load More