ಹಣಕಾಸಿನ ಸಮಸ್ಯೆಯಿಂದ ಕೆಲವು ಕೆಲಸಗಳು ಸ್ಥಗಿತವಾಗಬಹುದು
ಒಂದೇ ಸಮಯದಲ್ಲಿ ಎರಡು ಮೂರು ಕೆಲಸಗಳಾಗುವ ಸಾಧ್ಯತೆಗಳಿವೆ ಶುಭ
ವಿದೇಶ ಪ್ರಯಾಣಕ್ಕಾಗಿ ಪ್ರಯತ್ನಿಸುತ್ತಿದ್ದವರಿಗೆ ಈ ದಿನ ಶುಭವಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ ದಕ್ಷಿಣಾಯಣ ವರುಷ ಋತು ಭಾದ್ರಪದ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಹಸ್ತಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ
ಮೇಷ ರಾಶಿ
- ತಾಯಿಯ ಆಶೀರ್ವಾದದ ಮೂಲಕ ಈ ದಿನದ ಕೆಲಸವನ್ನು ಆರಂಭಿಸಿ
- ಮನಸಲ್ಲಿ ಹೊಸ ಹೊಸ ಆಲೋಚನೆಗಳು ಬರಬಹುದು
- ಖರ್ಚನ್ನು ಸರಿಯಾಗಿ ಗಮನಿಸಿ – ಆದಾಯಕ್ಕೆ ಹೊಂದಿಕೆಯಾಗುವಂತೆ ಮಾಡಿ
- ಮನೆಯಲ್ಲಿ ಪರಸ್ಪರ ವಿವಾದಗಳು ಉಂಟಾಗಬಹುದು
- ಯಾವುದೇ ಕಾರಣಕ್ಕೂ ಸಾಲ ಮಾಡುವುದು ಬೇಡ
- ಕೆಂಪು ವಸ್ತ್ರ ಧರಿಸಿ ಶುಭವಾಗಲಿದೆ
- ಸ್ರಷ್ಟಾ ಮಂತ್ರ ಜಪದಿಂದ ಶುಭವಿದೆ
ವೃಷಭ
- ಒಂದೇ ಸಮಯದಲ್ಲಿ ಎರಡು ಮೂರು ಕೆಲಸಗಳಾಗುವ ಸಾಧ್ಯತೆಗಳಿವೆ ಶುಭ
- ನಿಮ್ಮ ಸಾಮರ್ಥ್ಯ ನೋಡಿ ಜವಾಬ್ದಾರಿಯುತ ಕೆಲಸ ನಿಮ್ಮ ಹೆಗಲೇರಲಿದೆ
- ಕಾರ್ಯ ನಿಮಿತ್ತ ಪ್ರಯಾಣ ಮಾಡಬಹುದು
- ವಿದ್ಯಾರ್ಥಿಗಳಿಗೆ ಗಂಭೀರ ವಿಷಯಗಳನ್ನ ಅಧ್ಯಯನ ಮಾಡುವುದಕ್ಕೆ ಆಸಕ್ತಿ ಬರಬಹುದು
- ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ..ವಿನಾಕಾರಣ ಮಾತು ಬೇಡ
- ಮನೆಯಲ್ಲಿ ಕೆಲಸಗಾರರಿದ್ದಾರೆ ಸ್ವಲ್ಪ ಜಾಗೃತೆವಹಿಸಿ
- ಶಿಂಶೂಮಾರ ಮಂತ್ರವನ್ನು ಜಪಮಾಡಿಸಿ
ಮಿಥುನ
- ಹಣಕಾಸಿನ ಸಮಸ್ಯೆಯಿಂದ ಕೆಲವು ಕೆಲಸಗಳು ಸ್ಥಗಿತವಾಗಬಹುದು
- ಕಾರ್ಯಕ್ಷೇತ್ರದಲ್ಲಿ ಕೆಲವು ಅರಿವಿಲ್ಲದ ಸಮಸ್ಯೆಗಳು ಉಂಟಾಗಬಹುದು
- ಕುಟುಂಬದ ಸದಸ್ಯರ ಸ್ವಭಾವದಿಂದ ನಿಮಗೆ ಬೇಸರವಾಗಬಹುದು
- ಪೂರ್ವಿಕರ ಆಸ್ತಿ ವಿಚಾರಗಳಲ್ಲಿ ಒಂದು ತಿರುವು ಬರಬಹುದು
- ಸಮಾಜದಲ್ಲಿ ನಿಮ್ಮನ್ನ ಗುರುತಿಸಿಕೊಳ್ಳೋಕೆ ತುಂಬಾ ಪ್ರಯತ್ನ ಮಾಡಬೇಕಾಗುತ್ತೆ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ವೈದ್ಯರಿಗೆ ಶುಭಫಲ ಇದೆ
- ಕಾಮಧೇನು ಮಂತ್ರವನ್ನ ಜಪಿಸಿ
ಕಟಕ
- ವಿದೇಶ ಪ್ರಯಾಣಕ್ಕಾಗಿ ಪ್ರಯತ್ನಿಸುತ್ತಿದ್ದವರಿಗೆ ಈ ದಿನ ಶುಭವಿದೆ
- ಸಂಬಂಧಿಕರಲ್ಲಿ ಬಹು ಜನಪ್ರಿಯರಾಗುತ್ತೀರಿ
- ಸಾಮಾಜಿಕ ಕಾರ್ಯಾ ಜನಸೇವೆಯಲ್ಲಿ ಉತ್ಸುಕರಾಗುತ್ತೀರಿ
- ಕೈ ಹಾಕಿದ ಕೆಲಸಗಳು ಪೂರ್ಣವಾಗುವ ಸೂಚನೆ ಇರುತ್ತದೆ
- ಮನರಂಜನೆಯನ್ನು ಅನುಭವಿಸುವ ಮೂಲಕ ಸಂತೋಷವಾಗಿರುತ್ತೀರಿ
- ಚಿಕ್ಕ ಮಕ್ಕಳ ಬಗ್ಗೆ ಗಮನ ಇರಲಿ ಮಕ್ಕಳಿಗೆ ಸಮಸ್ಯೆ ಇದೆ
- 12 ಅಶ್ವತ್ಥ ಪ್ರದಕ್ಷಿಣೆ ಮಾಡಿ
ಸಿಂಹ
- ಅಪರಿಚಿತ ಅಭಯ ಕಾಡಬಹುದು
- ಮಾಟ ಮಂತ್ರ ಇತ್ಯಾದಿಗಳ ಬಗ್ಗೆ ವಿಚಾರ ಮಾಡುತಿರಿ
- ಹಣ ಮತ್ತು ದ್ರವ್ಯ ಕಳೆದುಕೊಳ್ಳುವ ಸಾಧ್ಯತೆಗಳಿದೆ
- ವಿನಾಕಾರಣ ಬಾದಾಮಿ ವಾದಗಳು ಬೇಡ
- ಸಾಧನೆ ಪ್ರಗತಿಯ ಬಗ್ಗೆ ಅಹಂ ಭಾವ ಬೇಡ
- ನಿಮ್ಮ ಧೈರ್ಯ ಹಾಗೂ ಭಾವನೆಗಳಿಗೆ ಭಂಗ ಬರುತ್ತದೆ ಎಚ್ಚರಿಕೆ ಇರಲಿ
- ಪ್ರತ್ಯಂಗಿರಾ ಹೋಮ ಮಾಡಿಸಿ
ಕನ್ಯಾ
- ಸಾಂಸಾರಿಕ ಮಕ್ಕಳ ವಿಚಾರವಾಗಿ ಇದ್ದ ಚಿಂತೆ ದೂರವಾಗಬಹುದು
- ಕೆಲಸದಲ್ಲಿ ಬಡ್ತಿ ಅಥವಾ ಹಣ ಕೈ ಸೇರುತ್ತದೆ
- ಕೌಶಲದ ಕೆಲಸ ನಿಮಗೆ ಸಹಾಯ ಆಗುವಂತೆ ಮಾಡಬಹುದು
- ಸ್ನೇಹಿತರೊಂದಿಗೆ ಸೇರಿ ಹೊಸ ಯೋಜನೆ ರೂಪಿಸಲು ಅವಕಾಶ ಇದೆ
- ನಿಮ್ಮ ಜವಾಬ್ದಾರಿಯುವುದ ಕೆಲಸಗಳು ಸಕಾಲದಲ್ಲಿ ಮುಗಿಯಬಹುದು
- ಬದಲಾವಣೆಯ ಪರವ ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ
- ಕುಲದೇವತಾ ಆರಾಧನೆ ಮಾಡಿ
ತುಲಾ
- ನಿಮಗಿರುವ ಬುದ್ಧಿವಂತಿಕೆಯಿಂದ ನಿಮ್ಮ ವಿರೋಧಿಗಳನ್ನ ಸೋಲಿಸುತ್ತಿರಿ
- ಹಳೆಯ ನಷ್ಟ ಮತ್ತು ಅವಮಾನಕ್ಕೆ ಇವತ್ತು ಪ್ರತಿಕಾರದ ಸಮಯವಾಗಿರುತ್ತೆ.
- ಆದ್ರೆ ಜಗಳ ಬೇಡ ಕೇವಲ ಮಾತಿನಿಂದ ನೀವು ಹೇಳಬೇಕಾದ್ದನ್ನ ಹೇಳಿ
- ನಿಮ್ಮ ತತ್ವಗಳಲ್ಲಿ ಯಾವುದೇ ಕಾರಣಕ್ಕೂ ರಾಜೀ ಬೇಡ ಸೂಚನೆಗಳಿವೆ
- ಅವಿವಾಹಿತರಿಗೆ ಸಿಹಿ ಸುದ್ದಿ ಮದುವೆಗೆ ನಿಶ್ಚಯದ ಸೂಚನೆಗಳಿವೆ
- ಸಾಲಿಗ್ರಾಮ ಮಹಾ ವಿಷ್ಣುವಿನ ಆರಾಧನೆ ಮಾಡಿ
ವೃಶ್ಚಿಕ
- ಹವಾಮಾನ ಬೈಪಾರಿತ್ಯ ಶೀತ ಸಂಬಂಧಿ ತೊಂದರೆ, ಕುಟುಂಬಕ್ಕೆಲ್ಲ ಬರಬಹುದು
- ನಯ ವಂಚಕರಿಂದ ದೂರವಿರಬೇಕಾಗುತ್ತದೆ
- ಮೇಲಾಧಿಕಾರಿಗಳ ಜೊತೆ ಕುಟುಂಬದ ಹಿರಿಯರ ಜೊತೆ ವಾದಿಸಬಾರದು
- ನಿಮ್ಮ ಸ್ಥಾನ ಸಂಬಂಧಗಳ ತಿಳುವಳಿಕೆ ನಿಮಗಿರಬೇಕಾಗುತ್ತದೆ
- ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನಹರಿಸಿ..ಕೋಪ ಬೇಡ
- ಕೆಲವು ವಾತಾವರಣ ಚೆನ್ನಾಗಿರುವುದಿಲ್ಲ
- ದುರ್ಗಾದೇವಿಯನ್ನ ಆರಾಧನೆ ಮಾಡಿ
ಧನುಸ್ಸು
- ಬೇರೆಯವರಿಗೆ ಸಾಲದ ರೂಪದಲ್ಲಿ ಹಣ ಇಲ್ಲವೇ ಪದಾರ್ಥ ನೀಡಬಾರದು
- ಪುಸ್ತಕ ಪ್ರೇಮಿಗಳಿಗೆ ವ್ಯಾಪಾರಸ್ಥರಿಗೆ ಶುಭದಿನ
- ಸಹೋದರರ ಮೈಮನಸ್ಸು ಇರಬಹುದು
- ಆದಾಯದ ಮೂಲ ನುಡಿ ಖರ್ಚಿಗೆ ಮುಂದಾಗಬೇಕು
- ದುಂದು ವೆಚ್ಚ ಬೇಡ ದುಬಾರಿ ವಸ್ತುಗಳ ಕರೀರಿ ಬೇಡ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
ಮಕರ
- ಕುಟುಂಬದ ವಾತಾವರಣ ವ್ಯಾಪಾರ ವ್ಯವಹಾರ ಚೆನ್ನಾಗಿ ಕಾಣುತ್ತದೆ
- ಆದರೆ ವಿರೋಧಿಗಳು ನಿಮ್ಮೆಲ್ಲ ಸಂತೋಷವನ್ನು ಹಾಳು ಮಾಡಬಹುದು
- ಧಾರ್ಮಿಕ ಮುಖಂಡರಿಗೆ ಹಿನ್ನಡೆ ಅವಮಾನ ಇರುತ್ತದೆ
- ಹಿತ ಶತ್ರುಗಳ ಕಾಟದಿಂದ ನಿಮ್ಮ ಗೌರವಕ್ಕೆ ಧಕ್ಕೆ
- ವ್ಯಾಪಾರ ವಿಸ್ತರಿಸಲು ಕೈ ಹಾಕಿ ನಷ್ಟವಾಗಬಹುದು
- ಪ್ರೇಮಿಗಳಿಗೆ ಅಶುಭ ಹುಚ್ಚು ಧೈರ್ಯ ಬೇಡ ಭವಿಷ್ಯಕ್ಕೆ ತೊಂದರೆ
- ಸುದರ್ಶನ ನನ್ನ ಪ್ರಾರ್ಥಿಸಿ
ಕುಂಭ
- ನೌಕರರಿಗೆ ವಿದ್ಯಾರ್ಥಿಗಳಿಗೆ ಒಂದು ರೀತಿ ತಾಳ್ಮೆ ಪರೀಕ್ಷಿಸುವ ದಿನ
- ಇದು ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ನಿಮ್ಮನ್ನ ಪ್ರಶಂಶಿಸುತ್ತಾರೆ
- ಬೇರೆಯವರ ನಿರ್ಲಕ್ಷದಿಂದ ನಿಮ್ಮ ಕೆಲಸಕ್ಕೆ ಹಿನ್ನಡೆ
- ಜವಾಬ್ದಾರಿಯ ಬಗ್ಗೆ ನಿಗಾಸಬೇಕಾಗಿದ್ದು ನಿಮಗೆ ಅನಿವಾರ್ಯವಾಗುತ್ತದೆ
- ಅತಿ ಮುಖ್ಯವಾದ ವಿಚಾರಗಳಲ್ಲಿ ಗೊಂದಲ ಆರ್ಥಿಕ ಸಮಸ್ಯೆ
- ಸಾಯಂಕಾಲ ಸ್ವಲ್ಪ ಮಾನಸಿಕ ಒತ್ತಡ ಕಡಿಮೆ ನೆಮ್ಮದಿ
- ಆಂಜನೇಯ ನನ್ನ ಪ್ರಾರ್ಥಿಸಿ
ಮೀನ
- ನಿರುದ್ಯೋಗಿಗಳಿಗೆ ತುಂಬಾ ಬೇಸರವಾಗುವ ದಿನ
- ಕೈಯಲ್ಲಿ ಹಣದ ಸಮಸ್ಯೆ ಉದ್ಯೋಗಿ ಸಮಸ್ಯೆ ಆರೋಗ್ಯ ಕೈ ಕೊಡಬಹುದು
- ಅತಿಯಾದ ಆತ್ಮವಿಶ್ವಾಸ ನಿಮಗೆ ತೊಂದರೆ ಮಾಡುತ್ತದೆ
- ಉನ್ನತ ಹುದ್ದೆಯಲ್ಲಿರುವವರಿಗೂ ನಿರಾಶೆ ಅಧಿಕಾರಿದ ಭಯ ಸ್ಥಾನಕ್ಕೆ ಹಿನ್ನಡೆ
- ಪ್ರೇಮಿಗಳಿಗೆ ಹಿನ್ನಡೆ – ಉದ್ವಿಗ್ನತೆ ಕಾಡಬಹುದು
- ಕುಟುಂಬದ ಹಿರಿಯರ ಪ್ರೀತಿ ವಿಶ್ವಾಸ ಗಳಿಸಿ ಅದು ನಿಮ್ಮನ್ನು ಕಾಪಾಡುತ್ತದೆ
- ಇಷ್ಟ ದೇವತಾ ಆರಾಧನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ