ಪ್ರಯಾಣ ಮಾಡುವಾಗ ಜಾಗ್ರತೆಯಿರಲಿ, ತೊಂದರೆಯ ಸೂಚನೆಗಳಿವೆ
ಅಹಂಕಾರ ಬೇಡ, ಹೊಂದಿಕೊಂಡು ಹೋಗುವುದು ಬಹಳ ಮುಖ್ಯ
ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಒಂದು ಹಂತ ಮೇಲೆಕ್ಕೇರುವ ದಿನ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಪುಬ್ಬಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ
ಮೇಷ ರಾಶಿ
- ನೌಕರಿಯಲ್ಲಿರುವ ಮಹಿಳೆಯರಿಗೆ ಶುಭಫಲ
- ನೌಕರಿ ಮಾಡುವ ಕ್ಷೇತ್ರದಲ್ಲಿ ಮಾತನಾಡುವಾಗ ಮನೆಯ ಮಕ್ಕಳ ವಿಚಾರ ಬರಬಹುದು
- ಹಿಂದೆ ಆರ್ಥಿಕವಾಗಿ ನಷ್ಟ ಅನುಭವಿಸಿದ್ದರೆ ಇಂದು ಅದನ್ನು ಸರಿದೂಗಿಸಿಕೊಳ್ಳುವ ಅವಕಾಶವಿದೆ
- ಮನಸ್ಸು ವಿಕಾರವಾಗದೆ ಒಂದೇ ರೀತಿಯಲ್ಲಿರಬೇಕು
- ಚೌಡೇಶ್ವರಿಯನ್ನು ಆರಾಧಿಸಿ
ವೃಷಭ
- ಮಾತಿನ ಭರದಲ್ಲಿ ಅನಗತ್ಯ ವಿಚಾರಗಳಲ್ಲಿ ಸಿಲುಕಿಕೊಳ್ಳಬಹುದು
- ಸಣ್ಣ ಪುಟ್ಟ ವಿಚಾರಗಳಿಗೆ ಹೆಚ್ಚಿನ ಕೋಪ ಬರಲಿದೆ
- ಮಾನಸಿಕ ಸಮಾಧಾನವಿರುವುದಿಲ್ಲ
- ಅನಗತ್ಯ ಖರ್ಚು ಚಿಂತೆಗೀಡು ಮಾಡುತ್ತದೆ
- ಕಾನೂನು ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹಿನ್ನಡೆಯಾಗುವ ಸಾಧ್ಯತೆ
- ಸಂಜೆಯ ಹೊತ್ತಿಗೆ ಸ್ತ್ರೀಯರಿಗೆ ಎದೆನೋವು ಕಾಣಿಸಬಹುದು ಎಚ್ಚರಿಕೆವಹಿಸಿ
- ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಣವನ್ನು ಹೂಡಿಕೆ ಮಾಡಲು ಸಕಾಲ
- ರುದ್ರಮಂತ್ರವನ್ನು ಶ್ರವಣ ಮಾಡಿ, ಕೋಪವನ್ನು ಕಡಿಮೆ ಮಾಡಿಕೊಳ್ಳಿ
ಮಿಥುನ
- ಬಹಳ ದಿನದಿಂದ ಮದುವೆಗೆ ಕಾಯುತ್ತಿದ್ದ ಪ್ರೇಮಿಗಳಿಗೆ ಶುಭದಿನ
- ಖಾಸಗಿ ಉದ್ಯೋಗ ಮಾಡುವವರಿಗೆ ನೌಕರಿಯ ಭಯ ಇದೆ ಆದರೆ ಯಾವುದೇ ತೊಂದರೆಯಿಲ್ಲ
- ಹೊಸ ಕೆಲಸ, ಹೊಸ ಜೀವನವನ್ನು ಪ್ರಾರಂಭ ಮಾಡಲು ಶುಭದಿನ
- ಪ್ರಯಾಣ ಮಾಡುವಾಗ ಜಾಗ್ರತೆಯಿರಲಿ, ತೊಂದರೆಯ ಸೂಚನೆಗಳಿವೆ
- ಗೋಮಾತೆಯನ್ನು ಪೂಜಿಸಿ
ಕಟಕ
- ನಿಮ್ಮ ಕೆಲವು ಸಣ್ಣ ಪುಟ್ಟ ಕೆಲಸಗಳಿಗೂ ಬೇರೆಯವರನ್ನು ಅವಲಂಬಿಸುತ್ತೀರಿ
- ಕಾರ್ಯಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡಲು ಹೋಗಿ ನಷ್ಟವನ್ನು ಅನುಭವಿಸಬೇಕಾಗಲಿದೆ
- ಅಕ್ಕಪಕ್ಕದವರ ಜೊತೆ ಜಗಳದ ಸಾಧ್ಯತೆಯಿದೆ ಜಾಗ್ರತೆವಹಿಸಿ
- ಹಿರಿಯರು ಮತ್ತು ಮಕ್ಕಳಿಗೆ ಮಾನಸಿಕವಾಗಿ ಸಮಾಧಾನವಿಲ್ಲದೆ ಇರುವ ದಿನ
- ಅಹಂಕಾರ ಬೇಡ, ಹೊಂದಿಕೊಂಡು ಹೋಗುವುದು ಬಹಳ ಮುಖ್ಯ
- ಗಣಪತಿಯನ್ನು ಆರಾಧನೆ ಮಾಡಿ
ಸಿಂಹ
- ಮಕ್ಕಳಿಗೆ ಬಹಳ ಸಂತೋಷದ ದಿನ
- ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಒಂದು ಹಂತ ಮೇಲೆಕ್ಕೇರುವ ದಿನ
- ಸ್ಪರ್ಧಾತ್ಮಕ ಪರೀಕ್ಷೆಗಳ ವಿಚಾರದಲ್ಲಿ ಸ್ವಲ್ಪ ಗೊಂದಲವಿರುತ್ತದೆ
- ಒಳ್ಳೆಯ ಕಾರ್ಯಕ್ಕೆ ಸಮಯವನ್ನು ಉಪಯೋಗಿಸಿಕೊಳ್ಳಬೇಕು
- ಆಂಜನೇಯ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿ
ಕನ್ಯಾ
- ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಉಂಟಾಗಲಿದೆ
- ನಿಮ್ಮ ಸ್ವಭಾವದಿಂದ ಸ್ಪರ್ಧಾತ್ಮಕವಾದ ಜೀವನದಲ್ಲಿ ಹಿನ್ನಡೆಯಾಗುವ ಸಾಧ್ಯತೆ
- ಹಳೆಯ ವಿಚಾರಗಳು ಮುನ್ನಲೆಗೆ ಬರುವಂತ ಸೂಚನೆಗಳಿವೆ
- ಇದು ನಿಮ್ಮ ಅಸಮಾಧಾನಕ್ಕೆ ಕಾರಣ ಆಗುತ್ತದೆ
- ಗುರು ದಕ್ಷಿಣ ಮೂರ್ತಿಯನ್ನು ಆರಾಧಿಸಿ
ತುಲಾ
- ಬೆಳಗ್ಗೆ ಎದ್ದ ತಕ್ಷಣ ಮನಸ್ಸಿಗೆ ಹರ್ಷ, ಆನಂದ, ಕೆಲಸಗಳಲ್ಲಿ ಉತ್ಸಾಹವಿರುವ ದಿನ
- ಅಲಂಕಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ
- ಇಡೀ ವರ್ಷದ ಎಲ್ಲಾ ಕೆಲಸಗಳ ಬಗ್ಗೆ ಯೋಜನೆಯನ್ನು ಈ ದಿನ ಮಾಡುವಂತಹುದು
- ಮನೆಯ ಸದಸ್ಯರೆಲ್ಲರ ಜೊತೆಯಲ್ಲಿ ಬಿಡುವಿಲ್ಲದ ಮಾತು ನಡೆಯತ್ತದೆ
- ವಿದ್ಯಾರ್ಥಿಗಳಿಗೆ ಅನಾರೋಗ್ಯದ ಬೇಸರ ಉಂಟಾಗಬಹುದು
- ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವವರು ಸರಳವಾಗಿ ಆಚರಿಸಿಕೊಳ್ಳಿ
- ಕುಲದೇವತಾ ಪ್ರಾರ್ಥನೆ ಮಾಡಿ
ವೃಶ್ಚಿಕ
- ಇಂದು ವ್ಯಾಪಾರ, ವ್ಯವಹಾರಕ್ಕಾಗಿ ಸಾಲ ಮಾಡುವ ಸಾಧ್ಯತೆಯಿದೆ
- ಸುಲಭವಾಗಿ ಸಾಲ ದೊರಕಬಹುದು ಆದರೆ ಮುಂದೆ ತೊಂದರೆಯಾಗುವ ಸಾಧ್ಯತೆ ಹೆಚ್ಚು
- ಇತರರಿಗೆ ಉಪಕಾರ ಮಾಡಲು ಹೋಗಿ ತೊಂದರೆ ಅನುಭವಿಸಬಹುದು
- ಕೆಲಸದಲ್ಲಿ ದೊಡ್ಡ ಜವಾಬ್ದಾರಿಯಿಂದ ಬೇಸರವಾಗಬಹುದು, ಆದರೆ ಅನಿವಾರ್ಯವಾಗಿರುತ್ತದೆ
- ಸಹೋದ್ಯೋಗಿಗಳ ಸಹಾಯ ಪಡೆದು ನಿಮ್ಮ ಕೆಲಸ ಪೂರ್ಣ ಮಾಡಿ
- ಋಣಮೋಚನ ಅಂಗಾರಕ ಸ್ತೋತ್ರ ಪಠಿಸಿ
ಧನುಸ್ಸು
- ಬೇರೆಯವರ ವ್ಯವಹಾರದಲ್ಲಿ ನೀವು ಹಸ್ತಕ್ಷೇಪ ಮಾಡಬೇಡಿ
- ಕಲಿಯುವ ಹಂಬಲವಿರುವವರು ಪ್ರಾಮಾಣಿಕ ಪ್ರಯತ್ನ ಮಾಡಿ ಶುಭವಿದೆ
- ಅಕ್ಕ-ತಂಗಿಯರು ಆಸ್ತಿಯ ವಿಚಾರವಾಗಿ ತಕರಾರು ಮಾಡಬಹುದು
- ಇಂದು ಸದ್ಗುರುಗಳನ್ನು ಪ್ರಾರ್ಥಿಸಿ
ಮಕರ
- ಅನಗತ್ಯ ಖರ್ಚುಗಳಿಂದ ಸ್ವಲ್ಪ ತೊಂದರೆಯಾಗಬಹುದು
- ಮಕ್ಕಳಿಂದ ಹೆಚ್ಚು ಖರ್ಚಾಗುವ ಸಾಧ್ಯತೆಯಿದೆ
- ಕುಟುಂಬದ ಸ್ನೇಹಿತರು ಹಾಗೂ ಬಂಧುಗಳು ನಿಮ್ಮನ್ನು ಟೀಕಿಸಬಹುದು
- ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿರುವುದಿಲ್ಲ
- ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು ಗಮನಿಸಿ, ತಾತ್ಸಾರ ಮಾಡಬೇಡಿ
- ಐಶ್ವರ್ಯ ಲಕ್ಷ್ಮಿಯನ್ನು ಆರಾಧನೆ ಮಾಡಿ
ಕುಂಭ
- ನವದಂಪತಿಗಳಿಗೆ ಶುಭವಾದ ದಿನ
- ಮನೆಯ ಹಿರಿಯರ ಆಶೀರ್ವಾದ, ಪ್ರೀತಿ, ವಿಶ್ವಾಸ ದೊರೆಯುವ ದಿನ
- ಅಲಂಕಾರ ವಸ್ತುಗಳ ಖರೀದಿಗೆ ಮುಂದಾಗಬಹುದು
- ಸ್ನೇಹಿತರು, ಬಂಧುಗಳು ನಿಮ್ಮ ಜೊತೆ ಸಂತೋಷ ಹಂಚಿಕೊಳ್ಳಲು ಇರ್ತಾರೆ
- ಉತ್ತಮವಾದ ಆಹಾರ, ಮನಸ್ಸಿಗೆ ಸಂತೋಷ ಸಿಗುವ ದಿನ
- ಉತ್ತಮರ ಸಂಗ ಆಲೋಚನೆ ಮಾಡಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು
- ಕುಲದೇವತಾ ಪ್ರಾರ್ಥನೆ ಮಾಡಿ
ಮೀನ
- ನಿದ್ದೆಯ ಅಭಾವದಿಂದ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಯ ಕಾಣಬಹುದು
- ಸರಿಯಾದ ವಿಶ್ರಾಂತಿಯ ಅಗತ್ಯವಿರುತ್ತದೆ, ಮಾನಸಿಕವಾದ ಸುಸ್ತು ಕಾಡಬಹುದು
- ಆರ್ಥಿಕ ಸಮಸ್ಯೆಯನ್ನು ಎದುರಿಸಲು ಪರಿಪೂರ್ಣವಾದ ಶಕ್ತಿಯಿರುತ್ತದೆ
- ಆಹಾರ ವಿಚಾರದಲ್ಲಿ ಗಮನವಿರಲಿ, ಹೊಟ್ಟೆಗೆ ಸಂಬಂಧಿಸಿದ ತೊಂದರೆಯಿಂದ ಒದ್ದಾಡಬಹುದು
- ಇಂದು ಎಲ್ಲಾ ಕೆಲಸಗಳಲ್ಲಿ ನಿಮ್ಮ ನಿರ್ಧಾರ ಸ್ಪಷ್ಟವಾಗಿರಲಿ
- ಇಂದು ಅಗ್ನಿ ದೇವತಾ ಶಕ್ತಿಯನ್ನು ಉಪಾಸನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ