ಗೌರವವನ್ನು ಕೇಳಿ ಪಡೆಯುವುದಲ್ಲ ಎಂದು ಅರಿಯಬೇಕು
ಬುದ್ಧಿವಂತರ ಸಹವಾಸದಿಂದ ಸಂತೋಷವಾಗಬಹುದು
ನಿಮ್ಮ ತಿರುಗಾಟ, ಅಲಂಕಾರ ಇತ್ಯಾದಿಗಳಿಗೆ ಕಡಿವಾಣ ಹಾಕಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ಬುದ್ಧಿವಂತರ ಸಹವಾಸದಿಂದ ಸಂತೋಷವಾಗಬಹುದು
- ನಿಮ್ಮ ನಾಯಕತ್ವದ ಸಾಮರ್ಥ್ಯ ಪರೀಕ್ಷಿಸಿಕೊಳ್ಳಿ
- ಮನೆಯ ನವೀಕರಣ ವಿಚಾರ ಬರಬಹುದು
- ಸಾಮಾಜಿಕ ಕೆಲಸಗಳಲ್ಲಿ ಯಶಸ್ಸಿದೆ
- ಪ್ರಯಾಣದಿಂದ ತೊಂದರೆಯಾಗಬಹುದು ಆದರೆ ಪ್ರಯಾಣ ಅನಿವಾರ್ಯ
- ಅವಿವಾಹಿತರಿಗೆ ಸಿಹಿಸುದ್ದಿ ಆದರೆ ಅನುಮಾನ ಬೇಡ
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ಅನಿರೀಕ್ಷಿತ ಸಿಹಿ ಸುದ್ದಿಯಿಂದ ಉಲ್ಲಾಸವಾಗಬಹುದು
- ನಿಮ್ಮ ಗಮನ ನಿಮ್ಮ ಕರ್ತವ್ಯದ ಮೇಲಿರಲಿ
- ಗೌರವವನ್ನು ಕೇಳಿ ಪಡೆಯುವುದಲ್ಲ ಎಂದು ಅರಿಯಬೇಕು
- ನಿಮ್ಮ ಮನಸ್ಸಿಗೆ ಒಪ್ಪದ ಸ್ಥಳಕ್ಕೆ ಅಥವಾ ಕೆಲಸಕ್ಕೆ ಹೋಗಬೇಡಿ
- ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ
- ಸಮಾಜದಲ್ಲಿ ಜಯ ಸಾಧಿಸುವುದು ಕಷ್ಟ, ಮಾತಿನಲ್ಲಿ ಗೆಲ್ಲಬೇಕು
- ನಾಗದೇವತಾ ಆರಾಧನೆ ಮಾಡಿ
ಮಿಥುನ
- ಆಸೆಗಳಿಗೆ ವಿರುದ್ಧವಾದ ವಾತಾವರಣ ಇರುತ್ತದೆ
- ಪ್ರೀತಿಸಿದವರಿಂದ ವಂಚನೆಯ ಸೂಚನೆಯಿದೆ
- ಮಾನಸಿಕ ಧೈರ್ಯ ನಿಮಗೆ ಮಾರ್ಗಸೂಚಿ
- ವಿದೇಶ ಪ್ರಯಾಣದ ವಿಚಾರದಲ್ಲಿ ಗೊಂದಲವಾಗಬಹುದು
- ನಂಬಿಕೆ, ದ್ರೋಹಕ್ಕೆ ಪಾತ್ರರಾಗಬಹುದು
- ಎಲ್ಲಾ ಕಡೆ ಅಪಮಾನದ ಸಾಧ್ಯತೆಯಿದೆ
- ಮಾರುತಿಯನ್ನು ಪ್ರಾರ್ಥಿಸಿ, ಹನುಮಾನ್ ಚಾಲೀಸ ಪಠಿಸಿ
ಕಟಕ
- ವೃತ್ತಿಯಲ್ಲಿ ದ್ವೇಷ ಸಾಧಿಸುತ್ತೀರಿ
- ಇಂದು ಧೈರ್ಯ ಕಡಿಮೆ ಇರುತ್ತದೆ
- ಮಧ್ಯಾಹ್ನದ ನಂತರ ಸಮಯ ಚೆನ್ನಾಗಿದೆ
- ಆಹಾರದಿಂದ ಸಮಸ್ಯೆ ಉಂಟಾಗಬಹುದು
- ಯಶಸ್ಸಿನ ಬಯಕೆ, ಹಣ ಹೂಡಿಕೆಯ ಚಿಂತನೆ ಮಾಡಬಹುದು
- ಹೊಸ ವಾಹನ ಖರೀದಿ ಸಾಧ್ಯತೆ ಇದೆ
- ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥನೆ ಮಾಡಿ
ಸಿಂಹ
- ಮಾನಸಿಕ ನೋವಿನಿಂದ ಬಳಲುತ್ತೀರಿ
- ನಿಮ್ಮ ಸಮಸ್ಯೆಯನ್ನು ಮನೆ, ಸ್ನೇಹಿತರು ಅಥವಾ ಬಂಧುಗಳಲ್ಲಿ ಹೇಳಿಕೊಳ್ಳಿ
- ವಿದ್ಯಾಭ್ಯಾಸದ ವಿಚಾರದಲ್ಲಿ ಮುನ್ನಡೆ ಇದೆ
- ಸ್ವಾರ್ಥಕ್ಕಾಗಿ ಬೇರೆಯವರನ್ನು ದೂಷಿಸಬೇಡಿ
- ಸಾಯಂಕಾಲದ ಹೊತ್ತಿಗೆ ತಾಯಿಯಿಂದ ಸಮಾಧಾನ, ಗೆಲುವು ಸಿಗಬಹುದು
- ತಾಯಿಯ ಪ್ರೀತಿಗೆ ಪಾತ್ರರಾಗಿರಿ
ಕನ್ಯಾ
- ದುಡ್ಡಿನ ಚಿಂತೆ ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು
- ಮಕ್ಕಳಿಗೆ ನ್ಯಾಯ ಒದಗಿಸಬೇಕು
- ನಿಮ್ಮ ತಿರುಗಾಟ, ಅಲಂಕಾರ ಇತ್ಯಾದಿಗಳಿಗೆ ಕಡಿವಾಣ ಹಾಕಿ
- ಬಂಧುಗಳಲ್ಲಿ ಅವಮಾನವಾಗಬಹುದು
- ನಿಮ್ಮ ಸ್ವಭಾವ, ನಡವಳಿಕೆ ಬದಲು ಮಾಡಿಕೊಳ್ಳಲು ಅವಕಾಶವಿದೆ ಚಿಂತಿಸಿ
- ಎಲ್ಲವೂ ಇದ್ದು ನರಳುತ್ತಿರುತ್ತೀರಿ, ನಿಮ್ಮ ಪೂರ್ವ ಜನ್ಮದ ಕರ್ಮವಿರಬಹುದು
- ಲಕ್ಷ್ಮಿನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ
ತುಲಾ
- ಉತ್ತಮ ಹೆಸರು ಗಳಿಸಲು ಸದಾವಕಾಶ ತಾನಾಗಿಯೇ ಬರುತ್ತದೆ
- ನಿಮ್ಮ ಶ್ರಮ ಸಾರ್ಥಕವಾದ ಭಾವ ಇರುತ್ತದೆ
- ಶಿಸ್ತು ಬದ್ಧವಾದ ಜೀವನ, ಸಮಾಜದ ಹಿತ ನಿಮ್ಮಿಂದ ಆಗಬಹುದು
- ದಾಂಪತ್ಯದಲ್ಲಿ ಬಿರುಕು ಬರದಂತೆ ಗಮನಿಸಿ
- ನಂಬಿದವರು ಸಹಾಯ ಮಾಡದಿರಬಹುದು
- ಬೇರೆಯವರ ಹಿತಕ್ಕಾಗಿ ಬಯಸುತ್ತೀರಿ, ಅದರ ಬೆಲೆ ಅವರಿಗೆ ತಿಳಿಯುವುದಿಲ್ಲ
- ನವಗ್ರಹರ ಪ್ರಾರ್ಥನೆ ಮಾಡಿ
ವೃಶ್ಚಿಕ
- ಕುಟುಂಬದ ಸದಸ್ಯರು ಆತಂಕದಲ್ಲಿ ಇರುತ್ತಾರೆ
- ಅನಗತ್ಯ ಕೆಲಸಗಳಿಂದ ದೂರವಿರಬೇಕು, ದಂಡ ಅಥವಾ ಶಿಕ್ಷೆಗೆ ಅವಕಾಶವಿದೆ
- ತುಂಬಾ ಖರ್ಚು, ಮಾತಿನಿಂದ ತೊಂದರೆಯಾಗಬಹುದು
- ಯಾರ ಸಹಾಯವೂ ಇಂದು ದೊರೆಯುವುದಿಲ್ಲ
- ಸಂಜೆಗೆ ಬೇಸರದಿಂದ ಒಂಟಿತನ ಕಾಡುತ್ತದೆ, ಕೋಪ ಬರಬಹುದು
- ನಿಮ್ಮ ಪರಿಚಯ ಬಂಧುತ್ವ ಎಲ್ಲವೂ ವ್ಯರ್ಥವಾಗಬಹುದು
- ತಿರುಪತಿ ವೆಂಕಟೇಶ್ವರನನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಇಂದು ನಿಮ್ಮ ಆರೋಗ್ಯ ಸುಧಾರಿಸುತ್ತದೆ
- ನಿಮ್ಮ ಆಲಸ್ಯ ದೂರ ಮಾಡಿಕೊಳ್ಳಿ
- ಮಧ್ಯಾಹ್ನದ ನಂತರ ದುಃಖ ಹೆಚ್ಚಾಗಬಹುದು
- ಕೆಲಸದಲ್ಲಿ ಉತ್ಸಾಹವಿಲ್ಲದೆ ಎಡವಟ್ಟು ಮಾಡಿಕೊಳ್ಳಬಹುದು
- ಕುಟುಂಬದಲ್ಲಿ ಹೆಂಗಸರ ವಿಚಾರಕ್ಕೆ ಬೇಜಾರಾಗಬಹುದು
- ಹಣದ ವಿಚಾರಕ್ಕೆ ತೊಂದರೆಯಾಗುವುದರಿಂದ ಬೇಸರವಾಗಬಹುದು
- ಕುಬೇರ ಲಕ್ಷ್ಮಿಯನ್ನು ಅರ್ಚನೆ ಮಾಡಿ
ಮಕರ
- ದಾಂಪತ್ಯದಲ್ಲಿ ಬೇರೆಯವರ ಆಗಮನದಿಂದ ಬೇಸರವಾಗಬಹುದು
- ಇಂದು ನಿಮ್ಮ ಸ್ವಭಾವ ಬದಲಿಸಿಕೊಳ್ಳಿ
- ಲಾಭ ಅಥವಾ ಹಣ ತಾತ್ಕಾಲಿಕ, ಹಿಂದಿನ ಪರಿಸ್ಥಿತಿ ಜ್ಞಾಪಿಸಿಕೊಳ್ಳಿ
- ಬಂಧುಗಳಿಂದಲೇ ನಿಮ್ಮ ವೃತ್ತಿಗೆ ಪೆಟ್ಟು ಬೀಳಬಹುದು
- ಇಂದು ವ್ಯವಹಾರ ಛಿದ್ರ, ನಷ್ಟ, ಅವಮಾನ ಎಲ್ಲವೂ ಆಗಬಹುದು
- ಆಸ್ತಿಯ ವಿಚಾರ ಮುಂದೆ ಮಾರಕವಾಗಬಹುದು
- ಕುಟುಂಬದ ಮೂಲ ದೇವರನ್ನು ಪ್ರಾರ್ಥನೆ ಮಾಡಿ
ಕುಂಭ
- ಮನೆಯ ಅಗತ್ಯತೆಗಳನ್ನು ಗಮನಿಸಿ
- ಇಂದು ಸಾಲದ ವಿಚಾರ ಬೇಡ
- ವಿನಾಕಾರಣ ತಿರುಗಾಟ ಮಾಡದಿದ್ದರೆ ಯಶಸ್ಸಿದೆ
- ಗೌರವ ಇರುವಲ್ಲಿ ಭಾಗಿಗಳಾಗಿ
- ಪ್ರೇಮ ವಿಚಾರದಲ್ಲಿ ಸಮಾಧಾನ ಇರಬಹುದು
- ವಿವಾಹ ವಿಚಾರದ ಪ್ರಸ್ತಾಪ ಬೇಡ ನಿರಾಸೆಯಾಗಬಹುದು
- ಲಕ್ಷ್ಮಿನಾರಾಯಣರ ಅನುಗ್ರಹ ಪಡೆಯಿರಿ
ಮೀನ
- ಓದು-ಕೆಲಸ ಎರಡೂ ಇರುವವರಿಗೆ ಸವಾಲಿನ ದಿನ
- ಮನೆ, ಮನ ಸಂತಸದಿಂದ ಇರುವುದಿಲ್ಲ
- ಹಳೆಯ ತಪ್ಪು ಪುನರಾವರ್ತನೆ ಆಗಬಹುದು
- ಇಂದು ನಿಮಗೆ ಅಜೀರ್ಣ ಸಮಸ್ಯೆ ಕಾಡಬಹುದು
- ಒಬ್ಬರೇ ಇದ್ದು ಕೆಟ್ಟ ಅಭ್ಯಾಸಗಳಿಗೆ ದಾಸರಾಗುವುದನ್ನು ತಪ್ಪಿಸಿ
- ಆತ್ಮವಿಶ್ವಾಸ ಹೆಚ್ಚಿದರೆ ಗುರಿ ಮುಟ್ಟಬಹುದು, ಆತ್ಮವಿಶ್ವಾಸ ಬೆಳಸಿಕೊಳ್ಳಿ
- ಧ್ಯಾನ ಮಾಡಿ ಮನಸ್ಸನ್ನು ತಿಳಿಗೊಳಿಸಿಕೊಳ್ಳಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ