newsfirstkannada.com

ಅನಂತ್ ಅಂಬಾನಿ ಭಾವಿ ಪತ್ನಿ ರಾಧಿಕಾ ಮರ್ಚೆಂಟ್‌ ಗೌನ್​ ಶೈಲಿಗೆ ದಂಗಾದ ನೆಟ್ಟಿಗರು; ಕಾರಣವೇನು?

Share :

Published June 14, 2024 at 5:42pm

Update June 14, 2024 at 5:43pm

  ಕ್ರೂಸ್ ಪಾರ್ಟಿಯಲ್ಲಿ ಎಲ್ಲರ ಕಣ್ಣು ಕುಕ್ಕುವಂತಿತ್ತು ರಾಧಿಕಾ ಧರಿಸಿದ್ದ ಗೌನ್

  ಪ್ರೀ-ವೆಡ್ಡಿಂಗ್ ಫೋಟೋಶೂಟ್​ನಲ್ಲಿ ಮಿಂಚಿದ ಅನಂತ್ ಹಾಗೂ ರಾಧಿಕಾ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ರಾಧಿಕಾ ಮರ್ಚೆಂಟ್‌ ಲುಕ್​​

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ 2ನೇ ಪ್ರೀ-ವೆಡ್ಡಿಂಗ್ ನಡೆದಿತ್ತು. ಇಟಲಿಯ ಸಮುದ್ರ ತೀರದ ಮೇಲೆ ಅದರಲ್ಲೂ ಐಷಾರಾಮಿ ಹಡಗಿನಲ್ಲಿ ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿ 2ನೇ ಪ್ರಿ-ವೆಡ್ಡಿಂಗ್ ಸಮಾರಂಭ ಬಹಳ ಅದ್ಧೂರಿಯಾಗಿ ನಡೆದಿತ್ತು.

ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ 2ನೇ ಅದ್ಧೂರಿ ಪ್ರೀ-ವೆಡ್ಡಿಂಗ್; ಹೇಗಿದೆ ತಯಾರಿ ಗೊತ್ತಾ?

ಇದೀಗ ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿ 2ನೇ ಪ್ರಿ-ವೆಡ್ಡಿಂಗ್ ಪಾರ್ಟಿಯಲ್ಲಿ ಕಾಣಿಸಿಕೊಂಡ ಅದ್ಭುತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಮೇ 29ರಂದು ಇಟಲಿಯ ಪೋರ್ಟೋಫಿನೋ ಪಟ್ಟಣದಲ್ಲಿ ಪ್ರಾರಂಭವಾದ ಕ್ರೂಸ್ ಪಾರ್ಟಿಯ ಜೂನ್ 1ರಂದು ಫ್ರಾನ್ಸ್‌ನಲ್ಲಿ ಮುಕ್ತಾಯವಾಯಿತು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ 2ನೇ ಪ್ರಿ-ವೆಡ್ಡಿಂಗ್ ಪಾರ್ಟಿಯಲ್ಲಿ ರಾಧಿಕಾ ಅವರು ಧರಿಸಿದ ಫ್ರಾಕ್ ಡಿಸೈನ್ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಹೌದು, ರಾಧಿಕಾ ಮರ್ಚೆಂಟ್ ಅವರ ಸುಂದರವಾದ ಫೋಟೋ ವೈರಲ್​ ಆಗಿದೆ.

ಕ್ರೂಸ್ ಪಾರ್ಟಿಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಧಿಕಾ ಮರ್ಚೆಂಟ್ ‘ತಮಾರಾ ರಾಲ್ಫ್ ಹಾಟ್ ಕೌಚರ್’ ಗೌನ್‌ನಲ್ಲಿ ಸಖತ್​ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ತಮಾರಾ ರಾಲ್ಫ್ ಹಾಟ್ ಕೌಚರ್ ಗೌನ್‌ನಲ್ಲಿ ಬಿಳಿ ರೇಷ್ಮೆ ಗುಲಾಬಿಗಳು ಮತ್ತು ಕ್ರಿಸ್ಟಲ್ ಗುಲಾಬಿಗಳಿಂದ ಅಲಂಕರಿಸಲ್ಪಟ್ಟಿತ್ತು. ಜೊತೆಗೆ ರಾಧಿಕಾ ಅವರ ತಲೆಯ ಮೇಲೆ  ಗುಲಾಬಿ-ಹೊದಿಕೆಯ ಕಿರೀಟವನ್ನು ತೊಟ್ಟುಕೊಂಡು ಯಾವ ರಾಣಿಗೂ ಕಮ್ಮಿ ಇಲ್ಲ ಅಂತ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಮತ್ತೊಂದೆಡೆ ಅನಂತ್ ಅಂಬಾನಿ ಕಪ್ಪು ಕಸೂತಿಯ ಬಂಧಗಾಲಾ ಜಾಕೆಟ್ ಮತ್ತು ಪ್ಯಾಂಟ್ ಧರಿಸಿಕೊಂಡು ಮಿರ ಮಿರ ಮಿಂಚಿದ್ದಾರೆ.

View this post on Instagram

A post shared by Ambani Family (@ambani_update)

ಇಟಲಿಯಲ್ಲಿ ನಡೆದ 2ನೇ ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಹಾಲಿವುಡ್ ನಟರಾದ ಕೇಟಿ ಪೆರ್ರಿ, ಡೇವಿಡ್ ಗುಟ್ಟಾ, ದ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಮತ್ತು ಆಂಡ್ರಿಯಾ ಬೊಸೆಲ್ಲಿ ಅತಿಥಿಗಳಿಗಾಗಿ ವಿಶೇಷ ಪ್ರದರ್ಶನ ನೀಡಿದ್ದರು. ಐಷಾರಾಮಿ ಕ್ರೂಸಿಯಲ್ಲಿ ನಡೆದ ಈ  2ನೇ ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ರಾಧಿಕಾ ಮರ್ಚೆಂಟ್ ಅವರು ಮೊದಲನೇ ದಿನದಂದು ಬಿಳಿ ಹಾಗೂ ಕಪ್ಪು ಬಣ್ಣದ ಸಂಯೋಜನೆಯ ಚಿಫೋನ್ ಗೌನ್ ಧರಿಸಿದ್ದರು. ಈ ಗೌನ್‌ ಅನ್ನು ಲಂಡನ್ ಮೂಲದ ವಿನ್ಯಾಸಕ ರಾಬರ್ಟ್ ವುನ್ ವಿನ್ಯಾಸಗೊಳಿಸಿದ್ದಾರೆ.

ಇನ್ನು, ಮಾರ್ಚ್​ 1ರಿಂದ 3 ದಿನಗಳ ಕಾಲ ಗುಜರಾತ್​ನ ಜಾಮ್​ನಗರದಲ್ಲಿ ಬಹಳ ಅದ್ಧೂರಿಯಾಗಿ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮೊದಲನೇ ಪ್ರಿ-ವೆಡ್ಡಿಂಗ್ ಕಾರ್ಯಕ್ರಮ ನಡೆದಿತ್ತು. ಆ ಸಮಾರಂಭಕ್ಕೆ ಭಾರತ ಹಾಗೂ ನಾನಾ ದೇಶಗಳ ಗಣ್ಯರನ್ನು ಆಹ್ವಾನಿಸಲಾಗಿತ್ತು. ಮುಂದಿನ ತಿಂಗಳು ಜುಲೈ 12ರಂದು ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನಂತ್ ಅಂಬಾನಿ ಭಾವಿ ಪತ್ನಿ ರಾಧಿಕಾ ಮರ್ಚೆಂಟ್‌ ಗೌನ್​ ಶೈಲಿಗೆ ದಂಗಾದ ನೆಟ್ಟಿಗರು; ಕಾರಣವೇನು?

https://newsfirstlive.com/wp-content/uploads/2024/06/radika1.jpg

Load More