ರಾಮಾಚಾರಿ ಸೀರಿಯಲ್ಗೆ ವೀಕ್ಷಕರಿಂದ ಬರ್ತಿದೆ ಅದ್ಭುತ ರೆಸ್ಪಾನ್ಸ್
ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ ರಾಮಾಚಾರಿ ಧಾರಾವಾಹಿ
ರಾಮಾಚಾರಿ ಹಾಗೂ ಕೃಷ್ಣ ಎರಡು ಪಾತ್ರಕ್ಕೆ ಫ್ಯಾನ್ಸ್ ಆಗಿದ್ದಾರೆ ಫಿದಾ
ರಾಮಾಚಾರಿ ಸೀರಿಯಲ್ ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಫೇವರೆಟ್ ಆಗಿ ಉಳಿದುಕೊಂಡಿದೆ. ಇದೇ ಧಾರಾವಾಹಿಯಲ್ಲಿ ಇತ್ತೀಚೆಗೆ ಶುರುವಾಗಿದ್ದ ರಾಮಾಚಾರಿ ಹಾಗೂ ಚಾರು ಮದುವೆಯ ರೋಚಕ ತಿರುವು ಕೊನೆಗೂ ಅಂತ್ಯ ಕಂಡಿದೆ.
ಇದನ್ನೂ ಓದಿ: ಪಡ್ಡೆ ಹುಡುಗರ ನಿದ್ದೆಗೆಡಿಸಿದ ರಾಮಾಚಾರಿ ಬೆಡಗಿ.. ಚಾರು ಹಾಟ್ ಫೋಟೋಸ್ಗೆ ಫ್ಯಾನ್ಸ್ ಫಿದಾ!
ರಾಮಾಚಾರಿಗೆ ಕೆಟ್ಟ ಹೆಸರು ತಂದು ಸಂಸಾರವನ್ನು ಹಾಳು ಮಾಡಬೇಕು ಅಂತಾ ಅಂದುಕೊಂಡಿದ್ದ ಮಾನ್ಯತಾ ಪ್ಲ್ಯಾನ್ ಪ್ಲಾಫ್ ಆಗಿದೆ. ಅಲ್ಲದೇ ಮುದ್ದಾದ ಮಗಳಿಗೆ ರಾಮಾಚಾರಿಯನ್ನು ಬಿಟ್ಟು ಬೇರೆ ಹುಡುಗನ ಜೊತೆಗೆ ಮದುವೆ ಮಾಡಿಸಬೇಕು ಅಂತ ಅಂದುಕೊಂಡಿದ್ದ ಮಾನ್ಯತಾ ಪ್ಲಾನ್ ವರ್ಕ್ ಆಗಿಲ್ಲ. ಪರಿಸ್ಥಿತಿ ಬದಲಾಗಿದ್ದು ಅಣ್ಣ-ತಮ್ಮ ಒಂದಾಗುವಂತೆ ಮಾಡಿದೆ. ಈ ಧಾರಾವಾಹಿ ಸಂಚಿಕೆಗಳು ರೋಚಕವಾಗಿ ಮೂಡಿಬರುತ್ತಿದ್ದು, ಕೊನೆಗೂ ಕುಟುಂಬಸ್ಥರ ಸಮ್ಮುಖದಲ್ಲಿ ಅದರಲ್ಲೂ ಪ್ರೀತಿಯ ತಮ್ಮ ಕೃಷ್ಣನ ಸಮ್ಮುಖದಲ್ಲಿ ರಾಮಾಚಾರಿ ಹಾಗೂ ಚಾರು ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಮೂಡಿಬರುವ ‘ರಾಮಾಚಾರಿ’ ಸೀರಿಯಲ್ ರೋಚಕ ಟ್ವಿಸ್ಟ್ ಮೂಲಕ ವೀಕ್ಷಕರನ್ನು ಹಾಗೇ ಹಿಡಿದಿಟ್ಟುಕೊಂಡಿದೆ. ಅಂದ್ಹಾಗೆ ಸಿನಿಮಾ ರೇಂಜ್ನಲ್ಲಿ ಲಾಂಚ್ ಆಗಿದ್ದ ಈ ಧಾರಾವಾಹಿಗೆ ಸಿಕ್ಕಾಪಟ್ಟೆ ಅಭಿಮಾನಿಗಳ ಬಳಗ ಇದೆ. ಇನ್ನೂ, ರಾಮಾಚಾರಿ ಸೀರಿಯಲ್ ಸೆಟ್ನಲ್ಲಿ ಕಿರುತೆರೆ ನಟ ನಟಿಯರು ಹೇಗೆ ಏಂಜಾಯ್ ಮಾಡಿದ್ದಾರೆ ಎಂಬ ಪೋಮೋವನ್ನು ರಿಲೀಸ್ ಮಾಡಲಾಗಿದೆ. ಎಷ್ಟು ಖುಷಿ ಖುಷಿಯಾಗಿ ಸೀರಿಯಲ್ ಸೆಟ್ನಲ್ಲಿ ಮದುವೆ ಮಾಡಲಾಗಿದೆ ಎಂದು ನೋಡಬಹುದಾಗಿದೆ.
View this post on Instagram
ಹಲವು ರೋಚಕ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡು ಮುನ್ನುಗ್ಗುತ್ತಿರುವ ರಾಮಚಾರಿ ಬದುಕಲ್ಲಿ ಮತ್ತೊಂದು ತಿರುವು ಸಿಕ್ಕಿದೆ. ಸತ್ತು ಮತ್ತೆ ಬದುಕಿ ಬಂದಿರುವ ಕೃಷ್ಣ ತನ್ನ ಅಸಲಿ ಆಟ ಶುರು ಮಾಡಿದ್ದಾರೆ. ತನಗಾಗಿ ಹಾಗೂ ತನ್ನ ಕುಟುಂಬದವರಿಗೆ ಕೆಟ್ಟದನ್ನು ಬಯಸುತ್ತಿದ್ದ ಪಾಪಿಯನ್ನು ಸಂಹಾರ ಮಾಡಲು ಪಣ ತೊಟ್ಟಿದ್ದಾರೆ. ಮುಂದಿನ ಎಪಿಸೋಡ್ನಲ್ಲಿ ಕೃಷ್ಣ ಯಾವ ರೀತಿ ದುಷ್ಟರನ್ನು ಮಟ್ಟ ಹಾಕಲಿದ್ದಾನೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ