newsfirstkannada.com

×

ವರುಣ್ ಆರಾಧ್ಯ ಖಾಸಗಿ ರಹಸ್ಯ ಗೊತ್ತಾಗಿದ್ಹೇಗೆ? ಮಾಜಿ ಪ್ರೇಯಸಿ ಬಿಚ್ಚಿಟ್ಟ ಇಂಚಿಂಚೂ ಮಾಹಿತಿ ಇಲ್ಲಿದೆ

Share :

Published September 11, 2024 at 6:24pm

    ಖಾಸಗಿ ಫೋಟೋ ಪ್ರಶ್ನೆ ಮಾಡಿದ್ದಕ್ಕೆ ನಮ್ಮಿಬ್ಬರ ಲವ್‌ ಬ್ರೇಕಪ್!

    ‘ಬೇರೆ ಯುವತಿ ಜೊತೆಗಿರೋ ಖಾಸಗಿ ‌ಫೋಟೋಗಳು ನೋಡಿದೆ’

    ಅದೊಂದು ಕಾಲ್ ಬರ್ಲಿಲ್ಲ ಅಂದಿದ್ರೆ ನಾನಿವತ್ತು ಏನ್ ಆಗ್ತಿದ್ನೋ?

ಬೃಂದಾವನ ಸೀರಿಯಲ್ ನಟ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಹಾಗೂ ರೀಲ್ಸ್ ಸ್ಟಾರ್‌ ಗಂಭೀರ ಆರೋಪಗಳನ್ನ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ FIR ಕೂಡ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ವರುಣ್ ಆರಾಧ್ಯ ಮತ್ತು ಅವಳು.. ಬೆತ್ತಲೆ ಫೋಟೋಗಳನ್ನು ನೋಡಿ ಬೆಚ್ಚಿ ಬಿದ್ದ ರೀಲ್ಸ್‌ ಸ್ಟಾರ್‌! 

4 ವರ್ಷಗಳ ಹಿಂದೆ ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾಗಿದ್ದ ವರುಣ್ ಆರಾಧ್ಯ ತನ್ನ ಜೊತೆ ಪ್ರೀತಿಸಿ ವಂಚನೆ ಮಾಡಿದ್ದಾರೆ. ಕಿರುತೆರೆ ನಟ ತನ್ನ ಜೊತೆಗಿರೋ ಖಾಸಗಿ ವಿಡಿಯೋ ಲೀಕ್ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಯುವತಿ ದೂರು ನೀಡಿದ್ದಾರೆ.

ನಾನು ವರುಣ್ ಆರಾಧ್ಯ ಫೋನ್​ನಲ್ಲಿ ಆತ ಬೇರೆ ಯುವತಿ ಜೊತೆಗಿರೋ ಖಾಸಗಿ ‌ಫೋಟೋಗಳನ್ನು ನೋಡಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನಮ್ಮಿಬ್ಬರ ಲವ್‌ ಬ್ರೇಕಪ್ ಆಗಿತ್ತು. ಲವ್‌ ಬ್ರೇಕಪ್‌ ಆಗುತ್ತಿದ್ದಂತೆ ವರುಣ್ ಆರಾಧ್ಯ ಅವರ ಬ್ಲ್ಯಾಕ್ ಮೇಲ್ ನಾಟಕ ಆರಂಭವಾಗಿದೆ. ಖಾಸಗಿ ಫೋಟೋಗಳ ಬಾಯ್ಬಿಡದಂತೆ‌ ಮಾಜಿ‌ ಪ್ರಿಯತಮೆಗೆ ಧಮ್ಕಿ ಹಾಕಿದ್ದಾರೆ.

ಇದನ್ನೂ ಓದಿ: ಖಾಸಗಿ ಫೋಟೋ, ಧಮ್ಕಿ, ಪ್ರೀತಿಸಿ ವಂಚನೆ.. ಸೀರಿಯಲ್‌ ನಟ ವರುಣ್ ಆರಾಧ್ಯ ವಿರುದ್ಧ ಕೇಸ್ ದಾಖಲು 

ಖಾಸಗಿ ‌ಫೋಟೋಗಳನ್ನು ಕಳುಹಿಸಿ‌ ನನ್ನ ವಿಚಾರ ಬಾಯ್ಬಿಟ್ಟರೆ‌ ವಿಡಿಯೋ ಅಪ್​ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬ್ರೇಕ್ ಅಪ್ ಬಳಿಕ ಏನಾಯ್ತು?
ಇನ್ನು, ಲವ್ ಬ್ರೇಕ್ ಅಪ್‌ ಬಗ್ಗೆ ಮಾತನಾಡಿರುವ ಮಾಜಿ ಪ್ರೇಯಸಿ ವರುಣ್ ಬಗ್ಗೆ ಗೊತ್ತಾದಾಗ ನಾನು ಕೇರಳದ ವಯನಾಡಲ್ಲಿದ್ದೆ. ಆಗ ನನಗೆ ಏನ್ ಮಾಡ್ಬೇಕು ಅಂತಾನೇ ಗೊತ್ತಾಗಲಿಲ್ಲ. ನನ್ನ ಮನೆಯವರು, ನನ್ನ ಸ್ನೇಹಿತೆ ಫೋನ್ ಮಾಡಿ ಸಮಾಧಾನ ಮಾಡಿದ್ದರು. ಆವತ್ತು ಅದೊಂದು ಕಾಲ್ ಬರ್ಲಿಲ್ಲ ಅಂದಿದ್ರೆ ನಾನಿವತ್ತು ಏನ್ ಆಗ್ತಿದ್ನೋ? ನನ್ನ ಸ್ನೇಹಿತೆ ಹೀಗೆಲ್ಲಾ ಇರಬೇಡ. ನೀನು ನಮ್ಮನ್ನೆಲ್ಲಾ ನೋಡಿಕೊಳ್ಳೋದು ನೀನೆ ಎಂದು ಹೇಳಿದರು. ಆಗ ನಾನು ನನ್ನ ನಿರ್ಧಾರದಿಂದ ಹೊರ ಬಂದೆ ಎಂದು ಯುವತಿ ಭಾವುಕರಾಗಿ ಮಾತನಾಡಿದ್ದಾರೆ. ಲವ್ ಬ್ರೇಕ್ ಅಪ್‌ ಆದ ಬಳಿಕ ಇಬ್ಬರು ಬೇರೆ, ಬೇರೆಯಾಗಿದ್ದು, ಇದೀಗ ಈ ರೀಲ್ಸ್‌ ಸ್ಟಾರ್‌ಗಳ ಲವ್ ಸ್ಟೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ವರುಣ್ ಆರಾಧ್ಯ ವಿರುದ್ಧದ ದೂರೇನು?
ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಂನಲ್ಲಿ ನಾನು ಅಡ್ವಟೈಸಿಂಗ್ ಕೆಲಸವನ್ನು ಮಾಡಿಕೊಂಡಿದ್ದು, 2019, ಮಾರ್ಚ್​ 31ರಂದು ಸೀರಿಯಲ್ ನಟ, ಯೂಟ್ಯೂಬರ್‌ ವರುಣ್ ಆರಾಧ್ಯ ಎಂಬ ವ್ಯಕ್ತಿ instagram ನಲ್ಲಿ ಪರಿಚಯವಾಗಿದ್ದರು. ಅವರೊಂದಿಗೆ ಸ್ನೇಹಿತರಾಗಿ ನಂತರ ಈ ಸ್ನೇಹ ಪ್ರೀತಿಯಾಗಿ ಬದಲಾಗಿ 4 ವರ್ಷಗಳಿಂದ ಪ್ರೀತಿಸುತ್ತಿದ್ದವರು. 4-5 ತಿಂಗಳ ನಂತರ ನಾನು ಹಾಗೂ ವರುಣ್ ಆರಾಧ್ಯ, ಪರಸ್ಪರ ಭೇಟಿಯಾದಾಗ ತಿಳಿದು ಅಥವಾ ತಿಳಿಯದೆ ನನ್ನ ವೈಯಕ್ತಿಕ (ಖಾಸಗಿ) ಫೋಟೋ ಮತ್ತು ವಿಡಿಯೋಗಳನ್ನು ತನ್ನ ಮೊಬೈಲ್​ನಲ್ಲಿ ತೆಗೆದುಕೊಂಡಿದ್ದ. ನಂತರ 2023ರ ಜುಲೈನಲ್ಲಿ ನಾನು ವರುಣ್​ ಆರಾಧ್ಯ ಫೋನ್ ನೋಡಿದಾಗ, ಆತ ಮತ್ತೊಂದು ಹುಡುಗಿಯ ಜೊತೆಗಿದ್ದ ಖಾಸಗಿ ಫೋಟೋ & ವಿಡಿಯೋ ನೋಡಿದ್ದೆ. ವರುಣ್​ ಅಫೇರ್ ಬಗ್ಗೆ ತಿಳಿದು ಪ್ರಶ್ನೆ ಮಾಡಿದಾಗ, ಅಫೇರ್ ವಿಷಯವನ್ನು ಎಲ್ಲಿಯೂ ಹೇಳಬಾರದು, ಹೇಳಿದರೆ ನಿನ್ನ ವೈಯಕ್ತಿಕ (ಖಾಸಗಿ) ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆಂದು ಬೆದರಿಕೆ ಹಾಕಿದ್ದಾನೆ.

2023ರ ಸೆಪ್ಟೆಂಬರ್ 10 ರಂದು ವರುಣ್​ ವಾಟ್ಸ್​ಆ್ಯಪ್ ನಂಬರ್ *ನಿಂದ ನನ್ನ ವಾಟ್ಸ್​ಆ್ಯಪ್ ನಂಬರ್​ಗೆ ನನ್ನ ಖಾಸಗಿ, ಅಶ್ಲೀಲ ಫೋಟೋವನ್ನು ಕಳುಹಿಸಿದ್ದಾನೆ. ಇದನ್ನು ನೋಡಿ ಶಾಕ್ ಆಗಿ, ಈ ರೀತಿ ಯಾಕೆ ಕಳುಹಿಸುತ್ತಿದ್ದೀಯಾ ಅಂತ ನಾನು ಕೇಳಿದ್ದೆ. ತನ್ನ ಹತ್ತಿರ ಇನ್ನೂ ಹೆಚ್ಚಿನ ಖಾಸಗಿ ಫೋಟೋ ಮತ್ತು ವಿಡಿಯೋಗಳಿವೆ. ಅವುಗಳನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತೇನೆಂದು ನನಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದು, ಅಶ್ಲೀಲ ನನ್ನ ದೇಹದ ಅಂಗಾಂಗಳ ಬಗ್ಗೆ ನಿಂದಿಸಿದ್ದಾನೆ. ಮುಂದೆ ಮದುವೆಯಾದಲ್ಲಿ, ಆತನನ್ನು ಸೇರಿ ನಿನ್ನನ್ನು ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದಾನೆ. 2019ರ ಮೇಯಿಂದ 2023ರ ಸೆಪ್ಟೆಂಬರ್​ವರೆಗೆ ಈ ಎಲ್ಲಾ ಘಟನೆ ನಡೆದಿದ್ದು ವರುಣ್ ಆರಾಧ್ಯನ ಪ್ರಾಣ ಬೆದರಿಕೆಗೆ ಹೆದರಿ ಇಲ್ಲಿವರೆಗೆ ದೂರು ನೀಡದೆ ಈಗ ತಡವಾಗಿ ದೂರನ್ನು ನೀಡಿದ್ದೇನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರುಣ್ ಆರಾಧ್ಯ ಖಾಸಗಿ ರಹಸ್ಯ ಗೊತ್ತಾಗಿದ್ಹೇಗೆ? ಮಾಜಿ ಪ್ರೇಯಸಿ ಬಿಚ್ಚಿಟ್ಟ ಇಂಚಿಂಚೂ ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2024/09/Varun-Aradya-Varsha-Kaveri-2.jpg

Load More