ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಮಹಾಘಟಬಂಧನ್ ಸಭೆ
ಸಭೆಯ ಹಿನ್ನೆಲೆ ಬೆಂಗಳೂರಿನ ಕೆಲ ರಸ್ತೆ ಮಾರ್ಗಗಳಲ್ಲಿ ಬದಲಾವಣೆ
ವಾಹನ ಸವಾರರಿಗೆ ಬೇರೆ ಮಾರ್ಗಗಳನ್ನ ಬಳಸಲು ಸೂಚಿಸಲಾಗಿದೆ
ಇಂದು ಮತ್ತು ನಾಳೆ ಬೆಂಗಳೂರಿನ ತಾಜ್‌ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಮಹಾಘಟಬಂಧನ್ ಸಭೆ ನಡೆಯುತ್ತಿರುವ ಹಿನ್ನಲೆ ಬೆಂಗಳೂರಿನ ಕೆಲ ರಸ್ತೆ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ನಗರದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಕಬ್ದನ್ ಪಾರ್ಕ್ ರಸ್ತೆ , ರಾಜಭವನ ರಸ್ತೆ , ರೇಸ್ ಕೋರ್ಸ್ ರಸ್ತೆ , ಹಾಗೂ ಬಳ್ಳಾರಿ ರಸ್ತೆಗಳನ್ನ ಬಳಸದಂತೆ ಸೂಚಿಸಲಾಗಿದೆ. ಎರಡು ದಿನಗಳ ಕಾಲ ಈ ರಸ್ತೆಗಳನ್ನ ಬಳಸುವ ವಾಹನ ಸವಾರರಿಗೆ ಬೇರೆ ಮಾರ್ಗಗಳನ್ನ ಬಳಸಲು ಸೂಚಿಸಲಾಗಿದೆ. ಇನ್ನು ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಬಳ್ಳಾರಿ ರಸ್ತೆ, ರೇಸ್ ಕೋರ್ಸ್ ರಸ್ತೆಗಳಲ್ಲಿ ವಾಹನಗಳನ್ನ ನಿಲ್ಲಿಸುವುದನ್ನ ನಿರ್ಬಂಧಿಸಲಾಗಿದೆ.
ಇನ್ನು ಮಹಾಘಟಬಂಧನ್ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷಗಳ ಹಲವು ನಾಯಕರು ಭಾಗಿಯಾಗಲಿದ್ದಾರೆ. ಗಣ್ಯ ವ್ಯಕ್ತಿಗಳ ಸಂಚಾರ ಇರುವ ಹಿನ್ನಲೆಯಲ್ಲಿ ರಸ್ತೆ ಬದಲಾವಣೆಗೆ ಸೂಚನೆ ನೀಡಲಾಗಿದೆ.
ವಾಹನ ಸವಾರರಿಗೆ ಈ ಕೆಳಕಂಡ ರಸ್ತೆಗಳ ಬದಲಿಗೆ ಬೇರೆ ಮಾರ್ಗಗಳನ್ನು ಬಳಸಲು ಸೂಚನೆ ನೀಡಲಾಗಿದೆ
ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆ
ಕಬ್ದನ್ ರಸ್ತೆ
ರಾಜಭವನ ರಸ್ತೆ
ರೇಸ್ ಕೋರ್ಸ್ ರಸ್ತೆ
ಶೇಷಾದ್ರಿ ರಸ್ತೆ
ಬಳ್ಳಾರಿ ರಸ್ತೆ
ಈ ಕೆಳಕಂಡ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧ
ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆ
ಬಳ್ಳಾರಿ ರಸ್ತೆ
ರೇಸ್ ಕೋರ್ಸ್ ರಸ್ತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ