ನಾನು ಕೊಲೆ ಮಾಡಲಿಕ್ಕೆ ಮನೆಗೆ ಹೋಗಿರಲಿಲ್ಲ ಎಂದ ಆರೋಪಿ ಪತಿ
ಸಂಜೆ 7ಗಂಟೆಯಿಂದ ರಾತ್ರಿಯವರೆಗೂ ದೇವರ ಮನೆಯಲ್ಲಿ ಅಡಗಿದ್ದ!
ವಿಡಿಯೋ ಕಾಲ್‌ನಲ್ಲಿ ನವ್ಯಾಗೆ ಚಿನ್ನ ಅನ್ನೋದನ್ನ ಕೇಳಿಸಿಕೊಂಡ ಪತಿ
ಬೆಂಗಳೂರು: ಕೆಂಗೇರಿಯ ಕೊರಿಯೋಗ್ರಾಫರ್ ನವ್ಯಾ ಭೀಕರ ಹತ್ಯೆ ಹೇಗಾಯ್ತು? 3 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಡ್ರೈವರ್ ಕಿರಣ್ ಕೊಲೆ ಮಾಡಲು ಕಾರಣವೇನು? ರಾತ್ರಿ ಪಾರ್ಟಿ ಮಾಡಿ ಬಂದ ಹೆಂಡತಿಯನ್ನು ಗಂಡ ಕೊಲೆ ಮಾಡಿದ್ದೇಕೆ ಅನ್ನೋ ಹಲವು ಅನುಮಾನಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಪೊಲೀಸರ ವಶದಲ್ಲಿರುವ ನವ್ಯಾ ಪತಿ ಕಿರಣ್ ಅವರು ಕೊಲೆಯ ಇಂಚಿಂಚೂ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ: ಮುದ್ದಾದ ಹೆಂಡತಿ ಮುಗಿಸಲು ಮನೆಯೊಳಗೆ ಅಡಗಿ ಕೂತಿದ್ದ.. ಕೊರಿಯೋಗ್ರಾಫರ್ ಸಾವಿಗೆ ಅಸಲಿ ಕಾರಣ ಬಯಲು
ಪೊಲೀಸ್ ವಿಚಾರಣೆಯಲ್ಲಿ ಆರೋಪಿ ಪತಿ ಕಿರಣ್ ಕೊಲೆಯ ಸ್ಫೋಟಕ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಸಾರ್.. ನನಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ನಾನು ಕೊಲೆ ಮಾಡಲಿಕ್ಕೂ ಹೋಗಿರಲಿಲ್ಲ ಎಂದು ಆಗಸ್ಟ್ 28ರ ರಾತ್ರಿ ಮನೆಯಲ್ಲಿ ನಡೆದಿದ್ದೇನು ಅನ್ನೋ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.
ನವ್ಯಾ ಮೇಲೆ ಅನುಮಾನ ಯಾಕೆ?
ಕೊಲೆಯಾದ ನವ್ಯಾ ಇತ್ತೀಚೆಗೆ ಗಂಡನನ್ನು ದೂರ ಮಾಡಲು ಶುರು ಮಾಡಿದ್ದಳಂತೆ. ನನ್ನ ಹೆಂಡತಿ ಬೇರೊಬ್ಬರ ಜೊತೆ ಸಲುಗೆಯಿಂದ ಮಾತಾಡೋದನ್ನು ಗಮನಿಸಿದ್ದೆ. ಈ ಬಗ್ಗೆ ಹಲವು ಬಾರಿ ನಮ್ಮಿಬ್ಬರ ಮಧ್ಯೆ ಜಗಳವಾಗಿತ್ತು.
ಇದನ್ನೂ ಓದಿ: ಡ್ಯಾನ್ಸ್ ಕೊರಿಯೋಗ್ರಾಫರ್ ಸಾವಿಗೆ ಹೊಸ ಟ್ವಿಸ್ಟ್.. ಗೆಳತಿ ಜೊತೆ ಮಲಗಿದ್ದ ಹೆಂಡ್ತಿಗೆ ಡ್ರೈವರ್ ಮಾಡಿದ್ದೇನು?
ಆಗಸ್ಟ್ 28ರ ರಾತ್ರಿ ಕೂಡ ನನಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ. ನವ್ಯಾ ನನಗೆ ಚಾಕು ತೋರಿಸಿ ಬೆದರಿಸಿದ್ದಳು. ಮನೆಯಿಂದ ಹೋಗ್ತಾ ಇರು. ನಿನ್ನ ಸಹವಾಸ ಸಾಕು ನನಗೆ ಡಿವೋರ್ಸ್ ಕೊಡು ಅಂತ ಹೇಳಿದಳು. ನಾನು ಏನು ಮಾಡಬೇಕಂತ ಗೊತ್ತಾಗದೆ, ನವ್ಯಾ ನನಗೆ ಚಾಕು ಹಾಕಿಬಿಡುತ್ತಾಳೆಂದು ಕೆಲ ನಿಮಿಷ ಮನೆಯಿಂದ ಹೊರ ಬಂದೆ.
ಇದಾದ ನಂತರ ನವ್ಯಾ ಜೊತೆ ಮಾತನಾಡಲು ಬೆಡ್ ರೂಂಗೆ ಹೋದೆ. ಈ ವೇಳೆ ತಲೆದಿಂಬಿನ ಕೆಳಗೆ ಚಾಕು ಇಟ್ಟುಕೊಂಡಿದ್ದಳು. ಅದನ್ನು ನೋಡಿ ಕಬ್ಬಿಣದ ರಾಡ್‌ನಿಂದ ನವ್ಯಾ ಮೇಲೆ ಹಲ್ಲೆ ಮಾಡಿದೆ. ಅದೇ ಚಾಕುವಿನಿಂದ ಕುತ್ತಿಗೆ ಕೂಯ್ದು ಕೊಲೆ ಮಾಡಿದ್ದೇನೆ ಎಂದು ಆರೋಪಿ ಕಿರಣ್ ಹೇಳಿದ್ದಾನೆ.
ಇದನ್ನೂ ಓದಿ: ಡ್ಯಾನ್ಸ್ ಕೊರಿಯೋಗ್ರಾಫರ್ ಕೊ*ಲೆ ಕೇಸ್‌ಗೆ ಹೊಸ ಟ್ವಿಸ್ಟ್.. ರಾತ್ರಿ ಪಕ್ಕದಲ್ಲೇ ಮಲಗಿದ್ದ ಗೆಳತಿ ಬೆಳಗ್ಗೆ ಶಾಕ್!
ಕೊಲೆಯಾದ ದಿನ ಸಂಜೆ 7ರ ಸುಮಾರಿಗೆ ಆರೋಪಿ ಕಿರಣ್ ಮನೆಗೆ ಬಂದಿದ್ದ. ನವ್ಯಾ ತನ್ನ ಗೆಳತಿ ಐಶ್ವರ್ಯಾ ಹಾಗೂ ಅನಿಲ್ ಎಂಬುವವರ ಜೊತೆ ಪಾರ್ಟಿ ಮುಗಿಸಿ ಮನೆಗೆ ಬಂದಿದ್ದರು. ಗೆಳತಿ ಐಶ್ವರ್ಯಾ ನವ್ಯಾಳ ಬೆಡ್ ರೂಂನಲ್ಲೇ ನಿದ್ರೆಗೆ ಜಾರಿದ್ದರು. ರಾತ್ರಿ 11ಗಂಟೆಗೆ ಮನೆಗೆ ಬಂದ ನವ್ಯಾ ಸೀದಾ ಬೆಡ್ ರೂಂಗೆ ಹೋಗಿ ಮಲಗಿದ್ದಳು. ನವ್ಯಾ ಹಾಗೂ ಆಕೆಯ ಗೆಳತಿ ಐಶ್ವರ್ಯಾ ಪಾರ್ಟಿ ಮುಗಿಸಿ ಬಂದು ಗಾಢ ನಿದ್ರೆಯಲ್ಲಿದ್ದರು. ನಮ್ಮ ಮಧ್ಯೆ ಇಷ್ಟು ದೊಡ್ಡ ಜಗಳವಾದರು ಆಕೆ ನಿದ್ರೆಯಿಂದ ಎದ್ದೇಳಲಿಲ್ಲ.
ತಡರಾತ್ರಿ ಗೆಳೆಯನ ವಿಡಿಯೋ ಕಾಲ್!
ಅಂದು ರಾತ್ರಿ ಆರೋಪಿ ಕಿರಣ್ ಸಂಜೆ 7ರಿಂದ ತಡರಾತ್ರಿವರೆಗೂ ದೇವರ ಮನೆಯಲ್ಲಿ ಅವಿತು ಕುಳಿತಿದ್ದ. ದೇವರ ಮನೆಯಲ್ಲಿದ್ದ ಪತಿ, ಪತ್ನಿ ನವ್ಯಾ ಯಾರ ಜೊತೆ ಮನೆಗೆ ಬರ್ತಾಳೆ. ಮನೆಗೆ ಬಂದ ಮೇಲೆ ಯಾರ ಜೊತೆ ಮಾತಾಡ್ತಾಳೆ ಅನ್ನೋದನ್ನ ದೇವರ ಮನೆಯಲ್ಲೇ ಕೂತು ಕೇಳುತ್ತಿದ್ದ. ನವ್ಯಾ ಮನೆಗೆ ಬಂದು ನಿದ್ರೆಗೆ ಜಾರಿದ ನಂತರ ಸುಮ್ಮನಾಗಿದ್ದ.
ವಿಡಿಯೋ ಕಾಲ್‌ನಲ್ಲಿ ಚಿನ್ನ ಎಂದಾಗ ಎದ್ದು ಬಂದ!
ಹೆಂಡತಿ ನಿದ್ರೆಗೆ ಜಾರಿದ ಕೆಲ ನಿಮಿಷಗಳ ನಂತರ ನವ್ಯಾಗೆ ಒಂದು ವಿಡಿಯೋ ಕಾಲ್ ಬಂದಿತ್ತು. ವಿಡಿಯೋ ಕಾಲ್‌ನಲ್ಲಿ ಮಾತನಾಡಲು ನವ್ಯಾ ಬೆಡ್ ರೂಂನಿಂದ ಹಾಲ್‌ಗೆ ಬಂದಿದ್ದಳು. ವಿಡಿಯೋ ಕಾಲ್‌ನಲ್ಲಿ ನವ್ಯಾಗೆ ಚಿನ್ನ ಅನ್ನೋದನ್ನ ಕೇಳಿಸಿಕೊಂಡ ಪತಿ ಕಿರಣ್ ದೇವರ ಮನೆಯಿಂದ ಎದ್ದು ಬಂದಿದ್ದಾನೆ. ಈ ವೇಳೆ ಮನೆಯ ಹಾಲ್‌ನಲ್ಲಿ ಇಬ್ಬರಿಗೂ ಜಗಳವಾಗಿದೆ.
ನವ್ಯಾ ಕಿಚನ್‌ನಲ್ಲಿದ್ದ ಚಾಕು ತಂದು ಪತಿಗೆ ಬೆದರಿಸಿದ್ದಾಳೆ. ನಿನ್ನ ಸಹವಾಸ ಸಾಕು ಹೋಗ್ತಿರು ಡಿವೋರ್ಸ್ ಕೊಡು ಎಂದಿದ್ದಾಳೆ. ನಂತರ ಬೆಡ್ ರೂಂಗೆ ತೆರಳಿ ತಲೆದಿಂಬಿನ ಕೆಳಗೆ ಚಾಕು ಇಟ್ಕೊಂಡಿದ್ದ ನವ್ಯಾ ರೂಂ ಲಾಕ್ ಹಾಕೋದನ್ನ ಮರೆತಿದ್ದಾಳೆ. ಬೆಡ್ ರೂಂ ಲಾಕ್ ಮಾಡದೇ ಇರೋದನ್ನು ಗಮನಿಸಿದ್ದ ಪತಿ ಕಿರಣ್, ಮತ್ತೆ ಬೆಡ್ ರೂಂಗೆ ಹೋಗಿ ಕಬ್ಬಿಣದ ರಾಡ್ ತೆಗೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾನೆ.
ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನ!
ತಲೆದಿಂಬಿನ ಕೆಳಗಿನ ಚಾಕುವನ್ನು ನವ್ಯಾ ತೆಗೆಯೋ ವೇಳೆ ಕಿರಣ್ ಅದೇ ಚಾಕುವನ್ನ ಕಿತ್ತುಕೊಂಡು ಪತ್ನಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾನೆ. ಹತ್ಯೆ ನಂತರ ಪತ್ನಿ ನವ್ಯಾ ಪಕ್ಕದಲ್ಲಿದ್ದ ಐಶ್ವರ್ಯಾಳನ್ನು ಎದ್ದೇಳಿಸಲು ಪ್ರಯತ್ನ ಮಾಡಿದ. ಇಷ್ಟೆಲ್ಲ ಆದ್ರೂ ಪಾರ್ಟಿ ಮತ್ತಿನ ಪರಿಣಾಮ ಐಶ್ವರ್ಯಾ ಗಾಢನಿದ್ರೆಯಲ್ಲಿ ಎಚ್ಚರವೇ ಆಗಲ್ಲ.
ಪತ್ನಿಯ ಕೊಲೆಯ ನಂತರ ಪತಿ ತಾನು ಕಿರಣ್ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಚಾಕುವಿನಲ್ಲಿ ಕುತ್ತಿಗೆ ಕೊಯ್ದುಕೊಳ್ಳುವ ನಿರ್ಧಾರ ಮಾಡ್ತಾನೆ. ಧೈರ್ಯ ಸಾಲದ್ದಕ್ಕೆ ಮನೆಯ ಬಾತ್ ರೂಂನಲ್ಲಿ ರಿನ್ ಲಿಕ್ವೆಡ್ ಕುಡಿದಿದ್ದಾನೆ. ನಂತರ ಇವಳಿಗಾಗಿ ನಾನು ಸಾಯಬಾರದೆಂಬ ನಿರ್ಧಾರಕ್ಕೆ ಬರ್ತಾನೆ. ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಫುಡ್ ಪಾಯಿಸನ್ ಅಂತ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾನೆ.
ಕೊಲೆ ಮಾಡಿದ ಮರುದಿನ ಮುಂಜಾನೆ ಮನೆಯ ಸುತ್ತಾಮುತ್ತ ಆರೋಪಿ ಓಡಾಡಿದ್ದ. ಮುಂಜಾನೆ ನವ್ಯಾ ಪಕ್ಕ ನಿದ್ರೆಗೆ ಜಾರಿದ್ದ ಐಶ್ವರ್ಯಾ ಎಚ್ಚರಗೊಂಡು ಕೂಗಿದಾಗ ಸ್ಥಳಕ್ಕೆ ಅಕ್ಕಪಕ್ಕದ ಮನೆಯವರು ಧಾವಿಸಿದ್ದಾರೆ. ನಂತರ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೊಲೆಯಾದ ಸ್ಥಳಕ್ಕೆ ಪೊಲೀಸರು ಬರೋವರೆಗೂ ಸುತ್ತಮುತ್ತಲೇ ಓಡಾಡ್ತಿದ್ದ ಆರೋಪಿಯು ಪೊಲೀಸರು ಬರ್ತಿದ್ದಂತೆ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.
ಮೃತಳ ಗಂಡ ಕಿರಣ್ ಸಂಜೆ ಮನೆಗೆ ಬಂದು ತಡರಾತ್ರಿ ಹೊರಗೆ ಹೋಗೋದು ಗೊತ್ತಾಗ್ತಿದ್ದಂತೆ ಆತನ ಮೊಬೈಲ್ ಸಿಡಿಆರ್ ಆಧರಿಸಿ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ