ರೇಣುಕಾಸ್ವಾಮಿ ಕೇಸಲ್ಲಿ ಜೈಲು ಕಂಬಿ ಎಣಿಸುತ್ತಿರೋ ನಟ ದರ್ಶನ್
ಕಳೆದ 25 ವರ್ಷದಲ್ಲಿ ನಟ ದರ್ಶನ್ ಮಾಡಿರೋ ಆಸ್ತಿ ಎಷ್ಟು ಗೊತ್ತಾ?
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಬಳಿ ಇದೆ ಕೋಟಿ ಕೋಟಿ ಆಸ್ತಿ!
ಬೆಂಗಳೂರು: ರೇಣುಕಾಸ್ವಾಮಿ ಕೇಸಲ್ಲಿ ನಟ ದರ್ಶನ್ ಮತ್ತಾತನ ಗ್ಯಾಂಗ್ ಜೈಲು ಸೇರಿದೆ. ಇತ್ತೀಚೆಗೆ ಪೊಲೀಸ್ರು ಕೋರ್ಟ್ಗೆ ಸಲ್ಲಿಸಿರೋ ಚಾರ್ಜ್ಶೀಟ್ನಲ್ಲಿ ರೇಣುಕಾಸ್ವಾಮಿ ಜೀವ ತೆಗೆದ ದಿನ ನಿಜವಾಗ್ಲೂ ನಡೆದಿದ್ದೇನು? ಅನ್ನೋದರ ಬಗ್ಗೆ ಸವಿವರವಾಗಿ ಬರೆಯಲಾಗಿದೆ. ಅಷ್ಟೇ ಅಲ್ಲ ನಟ ದರ್ಶನ್ ಬಳಿಯಿರೋ ಆಸ್ತಿ ಎಷ್ಟು? ಎಂಬ ಬಗ್ಗೆ ಕೂಡ ಕಂಪ್ಲೀಟ್ ಡೀಟೈಲ್ಸ್ ಇದೆ.
ನಟ ದರ್ಶನ್ ಬಳಿಯಿರೋ ಆಸ್ತಿ ಎಷ್ಟು?
ಕನ್ನಡ ಚಿತ್ರರಂಗದ ಶ್ರೀಮಂತ ನಟ ದರ್ಶನ್ ಅವರು ಕೋಟಿಗಟ್ಟಲೇ ಆಸ್ತಿ ಹೊಂದಿದ್ದಾರೆ. ಸೆಲೆಬ್ರಿಟಿಗಳ ಏರಿಯಾ ಎಂದು ಖ್ಯಾತಿಯಾಗಿರೋ ಆರ್.ಆರ್ ನಗರದಲ್ಲಿ 7 ಕೋಟಿ ಬೆಲೆಬಾಳುವ 2 ಐಷಾರಾಮಿ ಮನೆಗಳನ್ನು ಮಾಡಿಕೊಂಡಿದ್ದಾರೆ. ಚಂದ್ರಲೇಔಟ್ನಲ್ಲಿ 6 ಕೋಟಿ ಬೆಲೆಯ ಕಾಂಪ್ಲೆಕ್ಸ್ ಮತ್ತು 5 ಕೋಟಿಗೂ ಹೆಚ್ಚು ಬೆಲೆ ಬಾಳುವ 4 ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ.
ಸ್ನೇಹಿತೆ ಪವಿತ್ರ ಗೌಡಗೆ 1.75 ಕೋಟಿ ಬೆಲೆಯ ಐಷಾರಾಮಿ ಮನೆ ಕೊಡಿಸಿದ್ದಾರೆ. ಜತೆಗೆ 1 ಕೋಟಿ ಮೌಲ್ಯದ ರೇಂಜ್ ರೋವರ್ ಕಾರು ಕೂಡ ನೀಡಿದ್ದಾರೆ. ದರ್ಶನ್ ಬಳಿ ಕೋಟಿಗೂ ಹೆಚ್ಚು ಬೆಲೆ ಬಾಳುವ ವಾಚುಗಳು, 5 ಕೋಟಿ ಮೌಲ್ಯದ 4 ಎಕರೆ ಫಾರ್ಮ್ ಹೌಸ್, ಮೈಸೂರಲ್ಲಿ ಐದಾರು ಎಕರೆ ಜಮೀನು ಕೂಡ ಹೊಂದಿದ್ದಾರೆ. 25 ವರ್ಷಗಳಲ್ಲಿ ನೂರಾರು ಕೋಟಿ ಆಸ್ತಿ ಮಾಡಿರೋ ದರ್ಶನ್ ತೂಗುದೀಪ ಪ್ರೊಡಕ್ಷನ್ ಹೌಸ್ ಮಾಲೀಕರು ಕೂಡ ಹೌದು.
ಇದನ್ನೂ ಓದಿ: ‘ಬರೋಬ್ಬರಿ 1.75 ಕೋಟಿ ಸಾಲ ಮಾಡಿ ಪವಿತ್ರಾ ಗೌಡಗೆ ಮನೆ ಕೊಡಿಸಿದ್ದೆ’- ನಟ ದರ್ಶನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ