ಮಳೆಯಿಂದಾಗಿ ಅಮರನಾಥದಲ್ಲಿ ರಸ್ತೆ ಸಂಪರ್ಕ ಕಡಿತ
ಪಂಚತರಣಿ ಬೇಸ್ ಕ್ಯಾಂಪ್ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು
ಅತಿಯಾದ ಚಳಿ ಇರುವ ಕಾರಣ ರಕ್ಷಣೆ ಮಾಡುವಂತೆ ಮನವಿ
ಹವಾಮಾನ ವೈಪರೀತ್ಯದಿಂದ ಪವಿತ್ರ ಕ್ಷೇತ್ರವಾದ ಅಮರನಾಥಕ್ಕೆ ಪ್ರವಾಸ ಕೈಗೊಂಡ 49 ಸಾವಿರ ಯಾತಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲಿ ಕರ್ನಾಟಕದಿಂದ ಯಾತ್ರೆ ಕೈಗೊಂಡಿದ್ದ 80 ಜನರು ಅಮರನಾಥದಲ್ಲಿ ಸಿಲುಕಿಕೊಂಡಿದ್ದಾರೆ. ಸದ್ಯ ಪಂಚತರಣಿ ಬೇಸ್ ಕ್ಯಾಂಪ್ ನಲ್ಲಿ ಕನ್ನಡಿಗರು ಆಶ್ರಯ ಪಡೆಯುತ್ತಿದ್ದಾರೆ.
ಜುಲೈ 3ರಂದು ಪ್ರವಾಸಿಗರು ಯಾತ್ರೆ ಕೈಗೊಂಡಿದ್ದಾರೆ. ಇದರಲ್ಲಿ ಗದಗ ಮೂಲದ 23 ಮಂದಿ, ರಾಯಚೂರಿನಿಂದ 7, ಧಾರವಾಡದಿಂದ 5 ಮಂದಿ, ಬೆಂಗಳೂರು 17 ಮತ್ತು ಚಿತ್ರದುರ್ಗದಿಂದ 8 ಜನರು ಪಂಚತರಣಿಯಲ್ಲಿ ಸಿಲುಕಿಕೊಂಡಿದ್ದಾರೆ.
ಹೆಲಿಕಾಪ್ಟರ್ ಸೇವೆ ಕೂಡ ಇಲ್ಲ
ಇನ್ನು ಧಾರವಾಡ ಮೂಲದ ರಾಕೇಶ್ ನಾಝರೆ, ವಿಠ್ಠಲ ಬಾಚಗುಂಡೆ, ನಾಗರಾಜ ಹಳಕಟ್ಟಿ, ಹರೀಶ್ ಸಾಳುಂಕೆ, ಮಡಿವಾಳಪ್ಪ ಕೊಟಬಾಗಿ ಎನ್ನುವವರು ಪವಿತ್ರ ಯಾತ್ರೆಯಿಂದ ಅಲ್ಲೇ ಸಿಲುಕಿಕೊಂಡು ಸಮಸ್ಯೆ ಎದುರಿಸುತ್ತಿದ್ದಾರೆ. ಇವರು ಜುಲೈ 6ರಂದು ದರ್ಶನ ಪಡೆದು ಮರಳಿ ಬರುವಾಗ ಎದುರಿಸಿದ ವಿಪರೀತ ಮಳೆಯಿಂದಾಗಿ ಅಲ್ಲೇ ಬಾಕಿಯಾಗಿದಿದ್ದಾರೆ. ಮಳೆ ಇರುವ ಹಿನ್ನೆಲೆ ಹೆಲಿಕಾಪ್ಟರ್ ಸೇವೆ ಕೂಡ ಇಲ್ಲದೇ ಪರದಾಟದಾಡುತ್ತಿದ್ದಾರೆ.
ರಸ್ತೆ ಸಂಪರ್ಕ ಕಡಿತ
ಸದ್ಯ ಮಳೆಯಿಂದಾಗಿ ಅಮರನಾಥದಲ್ಲಿ ರಸ್ತೆ ಸಂಪರ್ಕ ಕಡಿತವಾಗಿದೆ. ಹೀಗಾಗಿ ಕನ್ನಡಿಗರ ಸೇರಿದಂತೆ ಪ್ರವಾಸಿಗರನ್ನ ಸೇನಾ ಪಡೆಯು ಖಾಸಗಿ ಟೆಂಟ್ ನಲ್ಲಿ ಉಳಿಸಿಕೊಳ್ಳುವ ಮೂಲಕ ಎಲ್ಲರ ರಕ್ಷಣೆ ಮಾಡಿದೆ.
ಅತಿಯಾದ ಚಳಿ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಪ್ರವಾಸಿಗರನ್ನು ಕರೆತರಲು ಯತ್ನಿಸುತ್ತಿದೆ. ಮತ್ತೊಂದೆಡೆ ಕಳೆದ 4 ದಿನಗಳಿಂದ ಹೆಚ್ಚಿನವರು ಒಂದೇ ಕಡೆ ಇದ್ದಾರೆ. ಆದರೆ ಅತಿಯಾದ ಚಳಿ ಇರುವ ಕಾರಣ ಇವರ ರಕ್ಷಣೆ ಮಾಡುವಂತೆ ಮನವಿ ಮಾಡಲಾಗಿದೆ.
ಫೋನ್ ಸಂಪರ್ಕದಲ್ಲಿ ಹೆಚ್.ಕೆ.ಪಾಟೀಲ್
ಇನ್ನು ಅಮರನಾಥದಲ್ಲೇ ಸಿಲುಕಿಕೊಂಡಿರೋ ಗದಗನ ಯಾತ್ರಾರ್ಥಿಗಳ ಜೊತೆಗೆ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿದ್ದಾರೆ. ಪಂಚತರಣಿ ಬೇಸ್ ಕ್ಯಾಂಪ್ ನಲ್ಲಿ ಆಶ್ರಯ ಪಡೆದಿರೋ ಯಾತ್ರಾರ್ಥಿಗಳ ಜೊತೆ ಫೋನ್ ಸಂಪರ್ಕ ಮಾಡಿ ಅಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಯಾತ್ರಾರ್ಥಿಗಳು ಯಾರೂ ಸಹ ಆತಂಕ ಪಡೋ ಅವಶ್ಯಕತೆಯಿಲ್ಲ. ಸರ್ಕಾರ ನಿಮ್ಮನ್ನ ಕರೆತರೋಕೆ ಎಲ್ಲ ರೀತಿಯ ಸಿದ್ಧತೆ ನಡೆಸಿದೆ ಎಂದು ಹೆಚ್.ಕೆ.ಪಾಟೀಲ್ ಧೈರ್ಯ ತುಂಬಿದ್ದಾರೆ.
ಸಚಿವ ಹೆಚ್.ಕೆ.ಪಾಟೀಲ್ ಟ್ವೀಟ್ ಕೂಡ ಮಾಡಿದ್ದಾರೆ. ಟ್ವೀಟ್ನಲ್ಲಿ ‘‘ಅಮರನಾಥ ಯಾತ್ರೆಯಲ್ಲಿರುವ ಕನ್ನಡಿಗರ ರಕ್ಷಣಾ ಕಾರ್ಯ ಈಗಾಗಲೇ ಭರದಿಂದ ಸಾಗಿದೆ. ಮಾನ್ಯ @CMofKarnataka ಸೂಚನೆಯಂತೆ ಈಗಾಗಲೇ ಇಬ್ಬರು ಅಧಿಕಾರಿಗಳನ್ನು ಮೇಲ್ವಿಚಾರಣೆಗಾಗಿ ನಿಯೋಜಿಸಲಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಕೂಡ ಅಲ್ಲಿಗೆ ತೆರಳಲು ಸೂಚಿಸಲಾಗಿದೆ. ಯಾತ್ರಾರ್ಥಿಗಳ ಕೋರಿಕೆಯಂತೆ ಕೂಡಲೇ ಅವರೆಲ್ಲರಿಗೆ ಚಳಿಯಿಂದ ರಕ್ಷಿಸಿಕೊಳ್ಳಲು ಬಿಸಿ ನೀರು, ಹೊದಿಕೆ ಹಾಗೂ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’’ ಎಂದು ಬರೆದಿದ್ದಾರೆ.
ಅಮರನಾಥದಲ್ಲಿ ಸಿಲುಕಿರುವ ಸಮಸ್ತ ಕನ್ನಡಿಗ ಪ್ರವಾಸಿಗರ ರಕ್ಷಣೆಗೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲಾಗುವುದು.#AmaranathYatra2023 pic.twitter.com/Zyd0xSctDY
— HK Patil (@HKPatilINC) July 9, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ