ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಪರ ಚುನಾವಣಾ ಸಭೆ
ನಾರ್ತ್ ಕೆರೊಲಿನಾದ ಶಾರ್ಲೆಟ್ನಲ್ಲಿ ನಡೆದ ಭರ್ಜರಿ ಚುನಾವಣಾ ಪ್ರಚಾರ
ಅಮೆರಿಕಾದ ಪ್ರಜಾಪ್ರಭುತ್ವ, ಉತ್ಸಾಹ ನಿಜವಾಗಿಯೂ ಸ್ಪೂರ್ತಿದಾಯಕ- ಡಿಕೆಶಿ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಚುನಾವಣೆ ದಿನಕಳೆದಂತೆ ರಂಗೇರಿದ್ದು, ಘಟಾನುಘಟಿಗಳ ಜಿದ್ದಾಜಿದ್ದಿ ಫೈಟ್ ಮುಗಿಲು ಮುಟ್ಟಿದೆ. ಕಮಲಾ ಹ್ಯಾರಿಸ್, ಡೋನಾಲ್ಡ್ ಟ್ರಂಪ್ ರಾಜಕೀಯದ ಈ ಯುದ್ಧ ಇಡೀ ವಿಶ್ವದ ಗಮನ ಸೆಳೆದಿದೆ. ಈ ಚುನಾವಣೆ ಕಾವೇರಿರುವಾಗಲೇ ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅಮೆರಿಕಾಕ್ಕೆ ತೆರಳಿದ್ದು, ವಿಡಿಯೋ ಬಿಡುಗಡೆಯಾಗಿದೆ.
ಇದನ್ನೂ ಓದಿ: ಅಮೆರಿಕಾ ಎಲೆಕ್ಷನ್‌ಗೂ ಡಿಕೆಶಿ ಯಾಕೆ ಬೇಕು? ಕಮಲಾ ಹ್ಯಾರಿಸ್ ಆಹ್ವಾನ ಕೊಟ್ಟಿದ್ದೇಕೆ? ಅಸಲಿ ಕಾರಣ ಇಲ್ಲಿದೆ!
ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದು, ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದಾರೆ. ಕುಟುಂಬ ಸಮೇತ ಅಮೆರಿಕ ಪ್ರವಾಸದಲ್ಲಿರುವ ಡಿ.ಕೆ ಶಿವಕುಮಾರ್ ಅವರು ಕಮಲಾ ಹ್ಯಾರಿಸ್ ಚುನಾವಣಾ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಕಮಲಾ ಹ್ಯಾರಿಸ್ ಅವರು ನಾರ್ತ್ ಕೆರೊಲಿನಾದ ಶಾರ್ಲೆಟ್ನಲ್ಲಿ ಪ್ರಚಾರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಕಮಲಾ ಹ್ಯಾರಿಸ್ 25 ನಿಮಿಷಗಳ ಕಾಲ ಭಾಷಣ ಮಾಡಿದರು. ಈ ವೇಳೆ ಗರ್ಭಪಾತದ ಬಗ್ಗೆ ಮಹಿಳೆಯರ ಆಯ್ಕೆಯ ಹಕ್ಕಿಗಾಗಿ ತನ್ನ ಬೆಂಬಲವನ್ನು ಒತ್ತಿ ಹೇಳಿದ್ದಾರೆ. ಮಹಿಳೆಯರ ಮೂಲಭೂತ ಸ್ವಾತಂತ್ರ್ಯ, ಕೈಗೆಟುಕುವ ಆರೋಗ್ಯ ರಕ್ಷಣೆ ಕುರಿತು ತನ್ನ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಸಣ್ಣ ವ್ಯಾಪಾರಿಗಳು ಅಮೆರಿಕದ ಆರ್ಥಿಕತೆಯ ಬೆನ್ನೆಲುಬು ಎಂದು ಹ್ಯಾರಿಸ್ ಹೇಳಿದರು.
View this post on Instagram
ಡಿ.ಕೆ ಶಿವಕುಮಾರ್ ಅವರು ಕಮಲಾ ಹ್ಯಾರಿಸ್ ಪರ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಡಿಕೆಶಿ, ಅಮೆರಿಕಾ ಚುನಾವಣಾ ಱಲಿಯಲ್ಲಿ ಭಾಗಿಯಾಗಿದ್ದು ಅದ್ಭುತ ಕ್ಷಣವಾಗಿತ್ತು. ನನ್ನ ಕುಟುಂಬದ ಪ್ರವಾಸದಲ್ಲಿ ಹೊಸ ಅನುಭವ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಸಾಕಷ್ಟು ಕಲಿತಿದ್ದೇನೆ. ಇಲ್ಲಿನ ಜನರ ಶಕ್ತಿ ಮತ್ತು ಉತ್ಸಾಹ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ