newsfirstkannada.com

ಕಿಚ್ಚ ಸುದೀಪ್​​​ ಅಳಿಯನ ‘ಜಿಮ್ಮಿ’ ಚಿತ್ರದ ಟೀಸರ್​​ಗೆ ಭರ್ಜರಿ ರೆಸ್ಪಾನ್ಸ್​; ಇಲ್ಲಿವೆ ಟಾಪ್​​ 5 ಸಿನಿಮಾ ಸುದ್ದಿ!

Share :

26-06-2023

  ಕಿಚ್ಚ ಸುದೀಪ್ ಸೋದರಳಿಯ 'ಜಿಮ್ಮಿ' ಚಿತ್ರಕ್ಕೆ ಅಭಿಮಾನಿಗಳ ಕಡೆಯಿಂದ ಸಖತ್​ ರೆಸ್ಪಾನ್ಸ್​​​

  ಪ್ರಾಜೆಕ್ಟ್​ ಕೆ' ಚಿತ್ರೀಕರಣಕ್ಕಾಗಿ ಹೈದರಾಬಾದ್​ಗೆ ಹಾರಿದ ನಟಿ ದೀಪಿಕಾ ಪಡುಕೋಣೆ

  ಆ್ಯಕ್ಷನ್​ ಸೀನ್ ಶೂಟಿಂಗ್​ ವೇಳೆ ನಿಯಂತ್ರಣ ತಪ್ಪಿ ಬಸ್​ನಿಂದ ಜಾರಿ ಬಿದ್ದ ನಟ

‘ಜಿಮ್ಮಿ’ ಕ್ಯಾರೆಕ್ಟರ್​ ಟೀಸರ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಜಿಮ್ಮಿ’ ಚಿತ್ರದ ಕ್ಯಾರೆಕ್ಟರ್ ಟೀಸರ್​ ಬಿಡುಗಡೆಯಾಗಿದೆ. ಜಿಮ್ಮಿ ಟೀಸರ್​ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಿಚ್ಚನ​ ಫ್ಯಾನ್ಸ್​ ಉಘೇ ಉಘೇ ಅಂತಿದ್ದಾರೆ. ಈ ಚಿತ್ರವನ್ನ ಲಹರಿ ಸಂಸ್ಥೆ ಜೊತೆಗೂಡಿ ಪ್ರಿಯಾ ಸುದೀಪ್ ನಿರ್ಮಾಣ ಮಾಡುತ್ತಿದ್ದು, ಸಂಚಿತ್ ಸಂಜೀವ್ ಅವರ ಚೊಚ್ಚಲ ಚಿತ್ರಕ್ಕೆ ಶಿವರಾಜ್ ಕುಮಾರ್, ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ಸಾಥ್ ಕೊಟ್ಟಿದ್ದು ವಿಶೇಷ.

ಸಲಾರ್ ನಟನಿಗೆ ಅಪಘಾತ!

ಸಲಾರ್ ಚಿತ್ರದಲ್ಲಿ ನಟಿಸಿರುವ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್​ಗೆ ತೀವ್ರ ಪೆಟ್ಟಾಗಿದೆ. ಮಲಯಾಳಂನ ‘ವಿಳಯಾಟ್ಟು ಬುದ್ಧ’ ಚಿತ್ರದ ಆ್ಯಕ್ಷನ್ ದೃಶ್ಯದ ಶೂಟಿಂಗ್ ವೇಳೆ ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದು, ವೈದ್ಯರು ಸರ್ಜರಿ ಮಾಡಬೇಕು ಎಂದು ಸೂಚಿಸಿದ್ದಾರಂತೆ. ಭಾನುವಾರ ಈ ಘಟನೆ ನಡೆದಿದ್ದು, ಸದ್ಯ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಚಿತ್ರದಲ್ಲಿ ಪೃಥ್ವಿರಾಜ್ ಕಾಣಿಸಿಕೊಂಡಿದ್ದು, ಶೂಟಿಂಗ್ ಪೂರ್ಣಗೊಳಿಸಿದ್ದಾರೆ.

ರಿಷಬ್ ಶೆಟ್ಟಿ ಮನೆಯಲ್ಲಿ ಸಂಭ್ರಮ

ಕಾಂತಾರ ಚಿತ್ರದೊಂದಿಗೆ ಪ್ಯಾನ್ ಇಂಡಿಯಾ ಸ್ಟಾರ್​ ಪಟ್ಟಕ್ಕೇರಿದ ನಟ-ನಿರ್ದೇಶಕ ರಿಷಬ್​​ ಶೆಟ್ಟಿ ಇತ್ತೀಚೆಗಷ್ಟೆ ತಮ್ಮ ಪುತ್ರಿಯ ಕಿವಿ ಚುಚ್ಚುವ ಶಾಸ್ತ್ರ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ರಿಷಬ್, ”ನಾ ಹುಟ್ಟಿ ಬೆಳೆದ ಮನೆ ನನ್ನ ಬಾಲ್ಯದ ನೆನಪುಗಳ ಖಜಾನೆ. ಅದಕ್ಕೀಗ ರಾಧ್ಯಾಳ ಕಿವಿ ಚುಚ್ಚಿಸಿದ ಸಂಭ್ರಮದ ನೆನಪೊಂದು ಹೊಸದಾಗಿ ಜೊತೆ ಸೇರಿದೆ” ಎಂದು ಸಂತಸ ಹಂಚಿಕೊಂಡಿದ್ದಾರೆ.

ಪ್ರಾಜೆಕ್ಟ್​ ಕೆಗಾಗಿ ಹೈದರಾಬಾದ್​ಗೆ ಹಾರಿದ ದೀಪಿಕಾ!

ಪ್ರಭಾಸ್​ ನಟಿಸುತ್ತಿರುವ ‘ಪ್ರಾಜೆಕ್ಟ್​ ಕೆ’ ಚಿತ್ರೀಕರಣಕ್ಕಾಗಿ ಮುಂಬೈನಿಂದ ಹೈದರಾಬಾದ್​ಗೆ ಹಾರಿದ್ದಾರೆ ನಟಿ ದೀಪಿಕಾ ಪಡುಕೋಣೆ. ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್​ ಫಿಕ್ಷನ್​ ಚಿತ್ರದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್ ಜೊತೆ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸ್ತಿದ್ದಾರೆ. ಇದೀಗ ಸೂಪರ್​ಸ್ಟಾರ್​ ಕಮಲ್ ಹಾಸನ್​ ಸಹ ಎಂಟ್ರಿ ಕೊಟ್ಟಿದ್ದು, ಚಿತ್ರೀಕರಣದ ವೇಗ ಹೆಚ್ಚಾಗಿದೆ.

ಆದಿಪುರುಷ್​ಗೆ ಟಕ್ಕರ್ ಕೊಟ್ಟ ಸೆಹ್ವಾಗ್!

ಪ್ರಭಾಸ್​ ನಟನೆಯ ಆದಿಪುರುಷ್ ಚಿತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಇದೀಗ ಭಾರತೀಯ ಮಾಜಿ ಕ್ರಿಕೆಟ್​ ವೀರೇಂದ್ರ ಸೆಹ್ವಾಗ್ ಆದಿಪುರುಷ್ ಸಿನಿಮಾ ನೋಡಿ ಬಾಹುಬಲಿ ಚಿತ್ರಕ್ಕೆ ಹೋಲಿಸಿ ಕಾಲೆಳೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್, ‘ಆದಿಪುರುಷನನ್ನು ನೋಡಿದ ಮೇಲೆ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಅಂತ ತಿಳಿಯಿತು’ ಎಂದು ಟ್ರೋಲ್ ಮಾಡಿದ್ದಾರೆ. ಈ ಪೋಸ್ಟ್​ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕಿಚ್ಚ ಸುದೀಪ್​​​ ಅಳಿಯನ ‘ಜಿಮ್ಮಿ’ ಚಿತ್ರದ ಟೀಸರ್​​ಗೆ ಭರ್ಜರಿ ರೆಸ್ಪಾನ್ಸ್​; ಇಲ್ಲಿವೆ ಟಾಪ್​​ 5 ಸಿನಿಮಾ ಸುದ್ದಿ!

https://newsfirstlive.com/wp-content/uploads/2023/06/kiccha-19.jpg

Load More