newsfirstkannada.com

×

ಪವರ್​ ಸ್ಟಾರ್​​​ ಪವನ್​​ ಕಲ್ಯಾಣ್​​ ಆರೋಗ್ಯದಲ್ಲಿ ಏರುಪೇರು; ಇಲ್ಲಿದೆ ಟಾಪ್​​ 5 ಸಿನಿಮಾ ಸುದ್ದಿ

Share :

Published June 27, 2023 at 8:25pm

    ಸಖತ್ ಸ್ಟೈಲಿಶ್​ ಹಾಗೂ ಬೋಲ್ಡ್ ಲುಕ್​​ನಲ್ಲಿ ಕ್ಯಾಮೆರಾಗೆ ಪೋಸ್​​ ಕೊಟ್ಟ ನಟಿ ಶ್ರಿಯಾ ಶರಣ್

    ತಮನ್ನಾ ಭಾಟಿಯಾ ಭಾವಚಿತ್ರವನ್ನು ಕೈ ಮೇಲೆ ಟ್ಯಾಟೂ ಹಾಕಿಕೊಂಡ ಅಭಿಮಾನಿ, ನಟಿ ಭಾವುಕ!

    ಎಲ್ಲೆಡೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರೋ 'ಟೋಬಿ' ಚಿತ್ರ

ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ ‘ಟೋಬಿ’

ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರೋ ‘ಟೋಬಿ’ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಇದೇ ಮೊದಲ ಬಾರಿಗೆ ರಾಜ್ ಬಿ ಶೆಟ್ಟಿ ಔಟ್ ಅಂಡ್ ಔಟ್​ ಮಾಸ್ ಸಿನಿಮಾ ಮಾಡುತ್ತಿದ್ದಾರೆ. ಜೂನ್ 29ಕ್ಕೆ ಚಿತ್ರದ ಫಸ್ಟ್​ ಲುಕ್ ರಿಲೀಸ್ ಆಗ್ತಿದೆ. ಅದಕ್ಕೂ ಮುಂಚೆಯೇ ಟೋಬಿ ಚಿತ್ರದ ಸಣ್ಣ ಮೇಕಿಂಗ್ ಝಲಕ್ ಬಿಟ್ಟಿರುವ ಚಿತ್ರತಂಡ ಕುತೂಹಲ ಹೆಚ್ಚಿಸಿದೆ. ಟೋಬಿ ಸಿನಿಮಾ ಆಗಸ್ಟ್​ 25ಕ್ಕೆ ಬಿಡುಗಡೆಯಾಗಲಿದೆ.

ಶ್ರಿಯಾ ಸೊಬಗಿಗೆ ಪ್ರೇಕ್ಷಕ ಬೆರಗು

‘ಕಬ್ಜ’ ಚಿತ್ರದ ಮೂಲಕ ಗಮನ ಸೆಳೆದ ನಟಿ ಶ್ರಿಯಾ ಶರಣ್​ ಸಖತ್ ಸ್ಟೈಲಿಶ್​ ಹಾಗೂ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಗೋಲ್ಡನ್ ಗ್ಲೋರಿ ಅವಾರ್ಡ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶ್ರಿಯಾ ವಿಭಿನ್ನವಾದ ಗೌನ್ ತೊಟ್ಟಿದ್ದರು. ಶ್ರಿಯಾ ತೊಟ್ಟಿದ್ದ ಗೌನ್ ಈಗ ಸೋಶಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿದ್ದು, ಮದುವೆ ಆಗಿ, ತಾಯಿಯಾಗಿದ್ದರೂ ಇಷ್ಟೊಂದು ಬೋಲ್ಡ್​ ಆಗಿ ಕಾಣಿಸಿಕೊಳ್ಳುತ್ತಾರೆ ಅಂತ ಎಲ್ಲರೂ ಬೆರಗಾಗಿ ನೋಡ್ತಾ ಇದ್ದಾರೆ.

ಕೆಜಿಎಫ್​ನಲ್ಲಿ ನೀವು ನೋಡಿದ್ದ ನಟಿ ಇವರೇನಾ?

ಕೆಜಿಎಫ್ ಖ್ಯಾತಿಯ ರೂಪ ರಾಯಪ್ಪ ಅವರ ಲೇಟೆಸ್ಟ್​ ಫೋಟೋಶೂಟ್​ ವೈರಲ್ ಆಗಿದೆ. ಕೆಜಿಎಫ್ ಚಿತ್ರದಲ್ಲಿ ಕಂಪ್ಲೀಟ್​ ಡಿ-ಗ್ಲಾಮರ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದ ರೂಪಾ, ಈಗ ಫುಲ್ ಗ್ಲಾಮರ್​ ಆಗಿ ಪೋಸ್​ ಕೊಟ್ಟಿದ್ದಾರೆ. ಸದ್ಯ ರವಿಚಂದ್ರನ್ ನಟನೆಯ ‘ಜಡ್ಜ್​ಮೆಂಟ್’​ ಚಿತ್ರದಲ್ಲಿ ರೂಪಾ ರಾಯಪ್ಪ ನಟಿಸ್ತಿದ್ದು, ಈಕೆ ಲೇಟೆಸ್ಟ್​ ಫೋಟೋಗಳನ್ನ ನೋಡಿದ ನೆಟ್ಟಿಗರು, ಕೆಜಿಎಫ್​ನಲ್ಲಿ ನಾವು ನೋಡಿದ್ದ ಶಾಂತಿ ಇವರೇನಾ ಅಂತ ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ. ಅಂದ್ಹಾಗೆ, ಕೆಜಿಎಫ್​​ ಮೊದಲ ಚಾಪ್ಟರ್​ನ ಸೆಕೆಂಡ್​ ಹಾಫ್​ನಲ್ಲಿ ಗರ್ಭಿಣಿ ಹೆಂಗಸಿನ ಪಾತ್ರದಲ್ಲಿ ರೂಪಾ ನಟಿಸಿದ್ದರು.

ಪವನ್ ಕಲ್ಯಾಣ್​ಗೆ ಅನಾರೋಗ್ಯ

ಜನಸೇನಾ ಮುಖ್ಯಸ್ಥ ಪವರ್​ಸ್ಟಾರ್​​ ಪವನ್ ಕಲ್ಯಾಣ್ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಕೆಲವು ದಿನಗಳ ಹಿಂದೆಯಷ್ಟೇ ವಾರಾಹಿ ಯಾತ್ರೆ ಆರಂಭಿಸಿರುವ ಪವನ್ ಕಲ್ಯಾಣ್ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಿರಂತರವಾಗಿ ಜರ್ನಿ ಮಾಡ್ತಿದ್ದು, ಸಭೆ, ಸಮಾರಂಭಗಳನ್ನ ಮಾಡಿದ್ದರು. ಇದರ ಪರಿಣಾಮ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಆಯಾಸಗೊಂಡಿದ್ದು, ಭೀಮಾವರಂ ಪೆದ್ದ ಅಮಿರಾಮ್ ಗ್ರಾಮದಲ್ಲಿ ವಿಶ್ರಾಂತಿ ಪಡೆದಿದ್ದಾರಂತೆ. ಈ ಹಿನ್ನೆಲೆ ಭೀಮಾವರಂ ಕ್ಷೇತ್ರದ ಮುಖಂಡರೊಂದಿಗೆ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

ಅಭಿಮಾನಿ ಕೈ ಮೇಲೆ ತಮನ್ನಾ ಟ್ಯಾಟೂ

ಕೈ ಮೇಲೆ ತನ್ನ ಭಾವಚಿತ್ರವನ್ನ ಟ್ಯಾಟೂ ಹಾಕಿಸಿಕೊಂಡಿರುವ ವಿಶೇಷ ಅಭಿಮಾನಿಯನ್ನ ನಟಿ ತಮನ್ನಾ ಭಾಟಿಯಾ ಭೇಟಿಯಾಗಿದ್ದಾರೆ. ಮುಂಬೈ ಏರ್​ಪೋರ್ಟ್​ಗೆ ಬಂದಿಳಿದ ತಮನ್ನಾಗೆ ಈ ವಿಶೇಷ ಅಭಿಮಾನಿ ಸಿಕ್ಕಿದ್ದು, ಕೈ ಮೇಲೆ ಟ್ಯಾಟೂ ನೋಡಿ ಭಾವುಕರಾದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಪವರ್​ ಸ್ಟಾರ್​​​ ಪವನ್​​ ಕಲ್ಯಾಣ್​​ ಆರೋಗ್ಯದಲ್ಲಿ ಏರುಪೇರು; ಇಲ್ಲಿದೆ ಟಾಪ್​​ 5 ಸಿನಿಮಾ ಸುದ್ದಿ

https://newsfirstlive.com/wp-content/uploads/2023/06/pavan-kalyan.jpg

Load More