ಮನೆಯ ವಾತಾವರಣ ಸೌಹಾರ್ದಯುತವಾಗಿರಲಿ
ಮನಸ್ಸಿನಲ್ಲಿ ಹತಾಶೆಯ ಭಾವನೆಗೆ ಅವಕಾಶ ಬೇಡ
ಬೇರೆಯವರು ಆಡುವ ಮಾತಿನ ಬಗ್ಗೆ ಗಮನವಿರಲಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ

- ದಿನದ ಆರಂಭದಲ್ಲೇ ಕಿರಿಕಿರಿ ಇರುತ್ತದೆ
- ಆಂತರಿಕ ಶಕ್ತಿ ಕಡಿಮೆಯಾಗದಂತೆ ಗಮನಿಸಿ
- ಮನೆಯಲ್ಲಿ ಜಗಳದ ಸಾಧ್ಯತೆಯಿದೆ
- ಹೊಗಳುವವರು ನಿಮಗೆ ಮೋಸ ಮಾಡಬಹುದು
- ಬೇರೆಯವರು ಆಡುವ ಮಾತಿನ ಬಗ್ಗೆ ಗಮನವಿರಲಿ
- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಗಬಹುದು
- ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಬೇರೆಯವರ ವಿಚಾರಕ್ಕಾಗಿ ಸಮಯ ವ್ಯರ್ಥ ಮಾಡಬೇಡಿ
- ಮನಸ್ಸಿನಲ್ಲಿ ಹತಾಶೆಯ ಭಾವನೆಗೆ ಅವಕಾಶ ಬೇಡ
- ದಾಂಪತ್ಯ ಜೀವನದಲ್ಲಿ ಅಹಂಕಾರದ ಸಮಸ್ಯೆ
- ಉದ್ಯೋಗದಲ್ಲಿ ಎಚ್ಚರಿಕೆವಹಿಸಿ
- ಅತಿಯಾದ ಆತ್ಮವಿಶ್ವಾಸ ಬೇಡ
- ಅದೃಷ್ಟದ ಸಂಪೂರ್ಣ ಬೆಂಬಲಕ್ಕಾಗಿ ಹೋರಾಟ ಮಾಡಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಕೌಟುಂಬಿಕ ಸಾಮರಸ್ಯ ಚೆನ್ನಾಗಿರುತ್ತದೆ
- ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಿದೆ
- ಇಂದು ಬೇರೆಯವರ ಸಲಹೆಗಿಂತ ನಿಮ್ಮ ಆಲೋಚನೆ ಮುಖ್ಯವಾಗತ್ತೆ
- ಆತ್ಮೀಯರನ್ನು ಭೇಟಿ ಮಾಡುವ ಅವಕಾಶವಿದೆ
- ವ್ಯಾಪಾರದಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಮಾಡಬಹುದು
- ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆಯಿರಲಿ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ

- ನವ ವಿವಾಹಿತರಿಗೆ ಶುಭ ಸುದ್ದಿ ಬರಬಹುದು
- ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ
- ಹೊಸ ಆಸ್ತಿ ಖರೀದಿಗೆ ಅವಕಾಶವಿದೆ
- ನೌಕರಿಯಲ್ಲಿ ಸ್ವಲ್ಪ ಜಾಗ್ರತೆವಹಿಸಿ
- ಸಹೋದರ ವರ್ಗದಿಂದ ಉತ್ತಮ ಸ್ಪಂದನೆ ಸಿಗಬಹುದು
- ಹಿರಿಯ, ಸಂಬಂಧಿಕರ ಆರೋಗ್ಯದ ಬಗ್ಗೆ ಗಮನವಿರಲಿ
- ಶಿವಾರಾಧನೆ ಮಾಡಿ
ಸಿಂಹ

- ವ್ಯಾವಹಾರಿಕವಾಗಿ ತುಂಬಾ ತೊಂದರೆ ಪಟ್ಟು ಕೆಲಸ ಮಾಡಬೇಡಿ
- ಉದ್ಯೋಗದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಿ
- ಸಾಮಾಜಿಕ ಕಾರ್ಯದಲ್ಲಿ ಜನ ನಿಮ್ಮ ಕೊಡುಗೆಯನ್ನು ಮೆಚ್ಚಿಕೊಳ್ಳುತ್ತಾರೆ
- ಚಿಕ್ಕ ಮಕ್ಕಳ ಬಗ್ಗೆ ಹೆಚ್ಚು ಅಭಿಮಾನವಿರಲಿ
- ಮನೆಯ ವಾತಾವರಣ ಸೌಹಾರ್ದಯುತವಾಗಿರಲಿ
- ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ
- ವಿಷ್ಣು ಸಹಸ್ರನಾಮ ಶ್ರವಣ ಮಾಡಿ
ಕನ್ಯಾ

- ನಿಮ್ಮ ವರ್ತನೆಯಿಂದ ಆತ್ಮೀಯರು ದೂರವಾಗಬಹುದು
- ಕುಟುಂಬದಲ್ಲಿ ಇಲ್ಲ ಸಲ್ಲದ ವಿಚಾರಕ್ಕೆ ಕಿರಿಕಿರಿ ಉಂಟಾಗಬಹುದು
- ಮಧ್ಯಾಹ್ನ ವೇಳೆಗೆ ಶುಭ ಸುದ್ದಿ ಕೇಳಬಹುದು
- ಮನೆಯಲ್ಲಿ ಅಭಿಪ್ರಾಯ ಭೇದದಿಂದ ಹಿನ್ನಡೆಯಾಗಬಹುದು
- ಪ್ರಯಾಣದ ವೇಳೆ ತೊಂದರೆಯಾಗುವ ಸೂಚನೆಯಿದೆ ಅನಗತ್ಯ ಪ್ರಯಾಣ ಬೇಡ
- ಮಾತಿನಿಂದ ನಿಮ್ಮ ಕೆಲಸಗಳು ಹಾಳಾಗಬಹುದು
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ತುಲಾ

- ವೃತ್ತಿಗೆ ಸಂಬಂಧಿಸಿದಂತೆ ಶುಭ ಸುದ್ದಿ ಕೇಳಬಹುದು
- ಮನೆಗೆ ಹೊಸ ವಸ್ತುಗಳ ಖರೀದಿ ಬಗ್ಗೆ ಆಲೋಚನೆ ಮಾಡಬಹುದು
- ನಿಮ್ಮ ಪ್ರಗತಿಯಿಂದ ಬೇರೆಯವರು ಉತ್ಸುಕರಾಗುತ್ತಾರೆ
- ಹಿರಿಯರ ಮಾತುಗಳನ್ನು ಎಚ್ಚರಿಕೆಯಿಂದ ಕೇಳಿ
- ಅನೇಕ ಜನರು ನಿಮ್ಮ ವಿಶ್ವಾಸಕ್ಕೆ ಪ್ರಯತ್ನಿಸಬಹುದು
- ಸಾಮಾಜಿಕವಾಗಿ ನೀವು ಎತ್ತರಕ್ಕೆ ಬೆಳೆಯುತ್ತೀರಿ
- ಶರಭೇಶ್ವರನನ್ನ ಪ್ರಾರ್ಥನೆ ಮಾಡಿ
ವೃಶ್ಚಿಕ

- ವ್ಯಾಪಾರಸ್ಥರಿಗೆ ಹಣಕಾಸಿನ ಸಮಸ್ಯೆ ಉಂಟಾಗಬಹುದು
- ಹಣ ಹೂಡಿಕೆಗೆ ಸಮಯ ಒಳ್ಳೆಯದಿದೆ
- ಭವಿಷ್ಯದ ಹಲವು ಯೋಜನೆಗಳು ಸಾಕಾರವಾಗಬಹುದು
- ಮನೆಯಲ್ಲಿ ಶಿಸ್ತು ಕಾಪಾಡಲು ಪ್ರಯತ್ನಿಸಿ
- ಶಾಂತಿಯಿಂದ ಸಮಯ ಕಳೆಯಿರಿ
- ಜನರಿಗೆ ನಿಮ್ಮ ಬಗ್ಗೆ ಅತಿಯಾದ ವಿಶ್ವಾಸ, ನಂಬಿಕೆಯಿರುತ್ತದೆ
- ಕುಲದೇವತಾ ಆರಾಧನೆ ಮಾಡಿ
ಧನುಸ್ಸು

- ಜೀವನ ಮೌಲ್ಯಗಳ ಬಗ್ಗೆ ಹೆಮ್ಮೆ ಪಡುತ್ತೀರಿ
- ಕೈ ಹಿಡಿದ ಕೆಲವು ಕೆಲಸಗಳು ಅರ್ಧಕ್ಕೆ ನಿಲ್ಲಬಹುದು
- ಸಾಯಂಕಾಲ ಆನಂದದ ಸಮಯ
- ಮನೆಯಲ್ಲಿ ವಸ್ತುಗಳ ವಿಚಾರಕ್ಕೆ ಜಗಳವಾಗಬಹುದು
- ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು
- ಮಾನಸಿಕವಾದ ಉದ್ವಿಗ್ನತೆ ಕಡಿಮೆ ಮಾಡಿಕೊಳ್ಳಿ
- ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಮಕರ

- ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು
- ಹೆಚ್ಚಿನ ಲಾಭದ ನಿರೀಕ್ಷೆಗೆ ಇದು ದಿನವಲ್ಲ
- ನಕಾರಾತ್ಮಕ ಸ್ವಭಾವದಿಂದ ಜನರ ಕಣ್ಣಿಗೆ ಗುರಿಯಾಗುತ್ತೀರಿ
- ವ್ಯವಹಾರಿಕವಾಗಿ ದೊಡ್ಡ ಆಲೋಚನೆಗಳು ಕೈಗೂಡುವುದಿಲ್ಲ
- ನಿಮ್ಮ ಹಕ್ಕುಗಳ ಬಗ್ಗೆ ಚಿಂತನೆ ನಡೆಸಿ
- ಪಿತ್ರಾರ್ಜಿತ ವಿಚಾರದಲ್ಲಿ ಜಗಳವಾಗಬಹುದು
- ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ
ಕುಂಭ

- ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಬಹುದು
- ಪ್ರೇಮಿಗಳಿಗೆ ಶುಭವಾದ ಸಮಯ
- ಪ್ರೀತಿಸಿ ಮದುವೆಯಾದವರಿಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು
- ಹೊಸ ವ್ಯವಹಾರದ ಪ್ರಾರಂಭಕ್ಕೆ ಅಡ್ಡಿ ಉಂಟಾಗಬಹುದು
- ನಿರೀಕ್ಷೆಗಿಂತ ಉತ್ತಮ ಫಲಿತಾಂಶ ಪಡೆಯುತ್ತೀರಿ
- ವಿದ್ಯಾರ್ಥಿಗಳಿಗೆ ಸವಾಲುಗಳಿರುತ್ತವೆ
- ವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ಮೀನ

- ವ್ಯಾವಹಾರಿಕವಾಗಿ ದೊಡ್ಡ ನಿರ್ಧಾರಗಳನ್ನು ಮಾಡಬಹುದು
- ಪ್ರೇಮ ಸಂಬಂಧಗಳಲ್ಲಿ ದೊಡ್ಡ ಸಮಸ್ಯೆ ಉಂಟಾಗಬಹುದು
- ಮನೆಯವರ ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತೀರಿ
- ಮನೆಯವರೊಂದಿಗೆ ತಾಳ್ಮೆಯಿಂದ ವರ್ತಿಸಿ
- ರಾಜಕೀಯಕ್ಕೆ ಸಂಬಂಧಿಸಿದವರ ಮೇಲೆ ಒತ್ತಡ ಹೆಚ್ಚಾಗಬಹುದು
- ಹಣಕಾಸು ವಿಚಾರದಲ್ಲಿ ಹೆಚ್ಚು ಲೆಕ್ಕಾಚಾರ ಮಾಡಬಹುದು
- ಶ್ರೀರಾಮಚಂದ್ರನನ್ನ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ