newsfirstkannada.com

Video: ನೂತನ ಸಂಸತ್ ಭವನದ ಫಸ್ಟ್​ ಲುಕ್ ಔಟ್ -ಹೆಂಗಿದೆ ಗೊತ್ತಾ?

Share :

26-05-2023

    ಮೇ 28 ರಂದು ಉದ್ಘಾಟನೆ ಆಗಲಿರುವ ಸಂಸತ್ ಭವನ

    ಪ್ರಧಾನಿ ಮಂತ್ರಿ ಉದ್ಘಾಟನೆ ಮಾಡ್ತಿರೋದಕ್ಕೆ ವಿಪಕ್ಷಗಳಿಂದ ವಿರೋಧ

    ನೂತನ ಸಂಸತ್ ಭವನದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

New Parliament Building: ವಿಪಕ್ಷಗಳ ಒಂದಷ್ಟು ವಿರೋಧಗಳ ಮಧ್ಯೆಯೂ ನೂತನ ಸಂಸತ್ ಭವನ ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ. ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಭವ್ಯ ಮಂದಿರದ ಉದ್ದ ಮತ್ತು ಅಗಲವನ್ನು ತೋರಿಸುವ ವಿಡಿಯೋ ಒಂದು ರಿಲೀಸ್ ಆಗಿದೆ.

ಹೊಸ ಸಂಸತ್ ಭವನವು ತ್ರಿಕೋನ ಆಕಾರದಲ್ಲಿದ್ದು, ಹಳೆಯ ಸಂಸತ್ ಭವನದ ಪಕ್ಕದಲ್ಲಿಯೇ ನಿರ್ಮಾಣ ಮಾಡಲಾಗಿದೆ. ಜೊತೆಗೆ ಹಳೆಯ ಕಟ್ಟಡಕ್ಕೆ ಸಮಾನವಾಗಿಯೇ ಸಂಸತ್ ನಿರ್ಮಾಣಗೊಂಡಿದೆ.

ಹೊಸ ಸಂಸತ್ ಭವನದ ಲೋಕಸಭೆ ಛೇಂಬರ್​ನಲ್ಲಿ 888 ಸೀಟ್​ಗಳ ವ್ಯವಸ್ಥೆ ಇದೆ. ರಾಜ್ಯಸಭೆಯ ಛೇಂಬರ್​​ನಲ್ಲಿ 384 ಸೀಟ್​ಗಳು ಇವೆ. ಇದು ಸೆಂಟ್ರಲ್ ಸಭಾಂಗಣವನ್ನು ಹೊಂದಿಲ್ಲ. ಜಂಟಿ ಅಧಿವೇಶನ ಸಂದರ್ಭದಲ್ಲಿ ಲೋಕಸಭೆ ಛೇಂಬರ್​ನಲ್ಲಿಯೇ 1,272 ಆಸನಗಳ ವ್ಯವಸ್ಥೆ ಮಾಡುವ ಸಾಮರ್ಥ್ಯ ಹೊಂದಿದೆ. ಇನ್ನುಳಿದ ನಾಲ್ಕು ಮಹಡಿಗಳಲ್ಲಿ ಸಚಿವರ ಕೊಠಡಿಗಳು ಮತ್ತು ಸಮಿತಿ ಕೊಠಡಿಗಳನ್ನು ಹೊಂದಿರುತ್ತದೆ.

ಹೊಸ ಬಿಲ್ಡಿಂಗ್​ನಲ್ಲಿ ಸೆಂಗೊಲ್ ಕೂಡ ಪ್ರತಿಷ್ಠಾಪನೆಯಾಗಲಿದೆ. ಐತಿಹಾಸಿಕ ರಾಜದಂಡವಾದ ‘ಸೆಂಗೊಲ್’ ಅನ್ನು ಅಲಹಾಬಾದ್‌ನ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಮೇ 28 ರಂದು ಪ್ರಧಾನಿ ಮೋದಿ ನೂತನ ಸಂಸತ್ ಭವನ ಉದ್ಘಾಟಿಸ್ತಿದ್ದಾರೆ. ಈ ವೇಳೆ ಈ ರಾಜದಂಡವನ್ನು ಸ್ಥಾಪಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ನೂತನ ಸಂಸತ್ ಭವನದ ಫಸ್ಟ್​ ಲುಕ್ ಔಟ್ -ಹೆಂಗಿದೆ ಗೊತ್ತಾ?

https://newsfirstlive.com/wp-content/uploads/2023/05/NEW_PRALIMENT.jpg

Load More