ರಾಜಕೀಯಕ್ಕೆ ಮತ್ತೊಬ್ಬ ಸ್ಟಾರ್ ಹೀರೋ ಎಂಟ್ರಿ
ತೆಲುಗು ಸ್ಟಾರ್ ಹೀರೋ ನಿತಿನ್ ರಾಜಕೀಯಕ್ಕೆ..!
ಕಾಂಗ್ರೆಸ್ಸಾ? ಬಿಜೆಪಿನಾ? ಯಾವ ಪಕ್ಷ ಸೇರೋದು?
ಹೈದರಾಬಾದ್: ತೆಲುಗು ಸಿನಿಮಾ ಇಂಡಸ್ಟ್ರೀಗೂ ರಾಜಕೀಯಕ್ಕೂ ಅನಾದಿಕಾಲದ ನಂಟು. ಅನ್ನಗಾರು ಎಂದೇ ಖ್ಯಾತಿ ಹೊಂದಿರೋ ಮಹಾನ್ ನಟ ನಂದಮೂರಿ ತಾರಕ ರಾಮಾರಾವ್, ತೆಲುಗು ದೇಶಂ ಪಕ್ಷ ಸ್ಥಾಪಿಸಿ ಕೇವಲ 8 ತಿಂಗಳಲ್ಲಿ ಅಧಿಕಾರಕ್ಕೆ ಬಂದರು. ಕೇವಲ ನಟನೆ ಮಾತ್ರವಲ್ಲದೆ ಆಂಧ್ರಪ್ರದೇಶದ ಸಿಎಂ ಆಗಿ ಅಪಾರ ಸೇವೆ ಸಲ್ಲಿಸಿದರು. ಇವರದ್ದೇ ಹಾದಿಯಲ್ಲಿ ಇಡೀ ತೆಲುಗು ಸಿನಿಮಾ ಇಂಡಸ್ಟ್ರೀ ಸಾಗುತ್ತಿದೆ. ಹಲವು ಕಲಾವಿದರು ಸಿನಿಮಾದ ಜತೆಗೆ ಒಂದಲ್ಲ, ಮತ್ತೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಸೀನಿಯರ್ ಎನ್ಟಿಆರ್, ಬಾಲಕೃಷ್ಣಾ, ಚಿರಂಜೀವಿ, ಪವನ್ ಕಲ್ಯಾಣ್, ಮೋಹನ್ ಬಾಬು ಹೀಗೆ ಹಲವರು ರಾಜಕೀಯದಿಂದ ಬೆಳೆದವರೇ. ಈಗ ತೆಲುಗಿನ ಮತ್ತೊಬ್ಬ ನಾಯಕ ನಟನ ಸರದಿ.
ಯೆಸ್, ತೆಲುಗಿನ ಮತ್ತೊಬ್ಬ ನಟ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಅದು ಸಿನಿಮಾ ಇಂಡಸ್ಟ್ರಿಯಲ್ಲಿ ಭಾರೀ ಡಿಮ್ಯಾಂಡ್ ಇರುವಾಗಲೇ ಈ ನಿರ್ಧಾರಕ್ಕೆ ಬಂದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸದ್ಯ ರಾಜಕೀಯ ಬರಲು ಸಜ್ಜಾಗಿರೋ ನಟ ಮತ್ಯಾರು ಅಲ್ಲ, ಬದಲಿಗೆ ಜಯಂ ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ್ದ ನಿತಿನ್.
ಸದ್ಯದಲ್ಲೇ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ವರ್ಷಾಂತ್ಯಕ್ಕೆ ನಡೆಯಲಿರೋ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿತಿನ್ ಮುಂದಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಕದವನ್ನು ನಿತಿನ್ ತಟ್ಟಿದ್ದಾರೆ ಎನ್ನಲಾಗಿದೆ. ನಿಜಾಮಾಬಾದ್ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ನಿತಿನ್ ಬೇಡಿಕೆ ಇಟ್ಟಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ನಿತಿನ್ ಕುಟುಂಬಕ್ಕೂ ಕಾಂಗ್ರೆಸ್ಗೂ ಹಳೇ ನಂಟು
ನಟ ನಿತಿನ್ ಕುಟುಂಬಸ್ಥರು ಹಲವು ವರ್ಷಗಳಿಂದ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದಾರೆ. ಇವರದ್ದು ಸಿನಿಮಾ, ರಾಜಕೀಯ ಎರಡು ರಂಗಗಳಲ್ಲೂ ತೊಡಗಿಸಿಕೊಂಡ ಕುಟುಂಬ. ಹೀಗಾಗಿ ಮೊದಲಿನಿಂದಲೂ ರಾಜಕೀಯಕ್ಕೆ ಬರಬೇಕು ಎಂಬ ಒತ್ತಡವಿದ್ದರೂ ನಿತಿನ್ ಮನಸ್ಸು ಮಾಡಿರಲಿಲ್ಲ. ಈಗ ರಾಜಕೀಯಕ್ಕೆ ಬರಲು ನಿತಿನ್ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ