ಗಿಬ್ಸ್ ನೋಡಿ ಆಸೀಸ್ ಪ್ಲೇಯರ್ ಅಂದುಕೊಂಡಿದ್ದೇ ಬೇರೆ
ಆತ್ಮಕಥೆ ಟು ದಿ ಪಾಯಿಂಟ್ನಲ್ಲಿ ಗಿಬ್ಸ್ ಬರೆದುಕೊಂಡಿದ್ದೇನು?
400ಕ್ಕೂ ಹೆಚ್ಚು ರನ್ಗಳನ್ನ ಟಾರ್ಗೆಟ್ ಮಾಡಿ ಗೆದ್ದಿದ್ದ ಆಫ್ರಿಕಾ
ಏಕದಿನ ಕ್ರಿಕೆಟ್‌ನ ವಿಶ್ವ ದಾಖಲೆಯ ಚೇಸಿಂಗ್ ಇಂದಿಗೂ ಸೌತ್ ಆಫ್ರಿಕಾ ಹೆಸರಿನಲ್ಲಿದೆ. ಈ ಅಸಾಧ್ಯದ ದಾಖಲೆ ಕಾರಣ ಹರ್ಷಲ್ ಗಿಬ್ಸ್. ಇಂಟ್ರೆಸ್ಟಿಗ್ ವಿಚಾರ ಅಂದ್ರೆ, ಹರ್ಷಲ್ ಗಿಬ್ಸ್ರ ಸ್ಫೋಟಕ ಆಟದ ಹಿಂದೆ ಒಂದು ಸಖತ್ ಕಥೆ ಇದೆ. ಅದೇನು ಅನ್ನೋದೇ ಇವತ್ತಿನ ಸಖತ್ ಸ್ಟೋರಿ.
ಹರ್ಷಲ್ ಗಿಬ್ಸ್, ಸೌತ್ ಆಫ್ರಿಕಾದ ಲೆಜೆಂಡರಿ ಬ್ಯಾಟ್ಸ್ಮನ್. ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿ ಆಗಿರುವ ಹರ್ಷಲ್ ಗಿಬ್ಸ್, ತಮ್ಮ ವೃತ್ತಿ ಜೀವನದಲ್ಲಿ ಅದೆಷ್ಟೋ ಮರೆಯಲಾಗದ ಇನ್ನಿಂಗ್ಸ್ಗಳನ್ನ ಕಟ್ಟಿಕೊಟ್ಟಿದ್ದಾರೆ. ಇದ್ರಲ್ಲಿ ಜೋಹನ್ಬರ್ಗ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಟ್ಟಿದ 175 ರನ್ಗಳ ಇನ್ನಿಂಗ್ಸ್ ಒಂದಾಗಿದೆ. ಹರ್ಷಲ್ ಗಿಬ್ಸ್ರ ಈ ಅಮೋಘ ಇನ್ನಿಂಗ್ಸ್ನಿಂದ ಸೌತ್ ಆಫ್ರಿಕಾ, ಇಂದಿಗೂ ಏಕದಿನ ಫಾರ್ಮೆಟ್ನಲ್ಲಿ 400ಕ್ಕೂ ಅಧಿಕ ರನ್ ಚೇಸ್ ಮಾಡಿ ಗೆದ್ದ ಏಕೈಕ ತಂಡ ಎಂದು ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ.
ಹ್ಯಾಂಗ್ ಓವರ್ನಲ್ಲಿ ಬ್ಯಾಟಿಂಗ್ ಮಾಡಿದ್ದ ಗಿಬ್ಸ್
ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ, ಆಸ್ಟ್ರೇಲಿಯಾ ನೀಡಿದ್ದ 435 ರನ್ಗಳ ಗುರಿಯನ್ನ ಬೆನ್ನಟ್ಟಿದ್ದ ಸೌತ್ ಆಫ್ರಿಕಾ ಪರ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದ ಹರ್ಷಲ್ ಗಿಬ್ಸ್, ಅಂದು ಬ್ಯಾಟಿಂಗ್ ಮಾಡಿದ್ದು ಹ್ಯಾಂಗ್ ಓವರ್ನಲ್ಲಿ ಅನ್ನೋದು ವಿಶೇಷ. ಪಂದ್ಯದ ಹಿಂದಿನ ರಾತ್ರಿ 1 ಗಂಟೆಯ ತನಕ ಕಂಟಪೂರ್ತಿ ಕುಡಿದಿದ್ದ ಹರ್ಷಲ್ ಗಿಬ್ಸ್, ಗ್ಲಾಸ್ನ ಕೈಯಲ್ಲಿ ಹಿಡಿದುಕೊಂಡೇ ರೂಮ್ಗೆ ಹೊರಟ್ಟಿದರು. ಇದನ್ನ ನೋಡಿದ್ದ ಮೈಕಲ್ ಹಸ್ಸಿ, ನಾಳೆಯ ಪಂದ್ಯದಲ್ಲಿ ಒಂದು ಫ್ರೀ ವಿಕೆಟ್ ಎಂದೇ ಭಾವಿಸಿದ್ರು.
ಗಿಬ್ಸ್ನಿಂದ ಭರ್ಜರಿ 7 ಸಿಕ್ಸ್, 21 ಬೌಂಡರಿ
ಅಷ್ಟೇ ಅಲ್ಲ, ಆರಂಭಿಕ ವಿಕೆಟ್ ಪತನದ ಬೆನ್ನಲ್ಲೇ ಬ್ಯಾಟ್ ಬೀಸಲು ಬಂದಿದ್ದ ಹರ್ಷಲ್ ಗಿಬ್ಸ್ನ ನೋಡಿ ಬಂದಷ್ಟೇ ಬೇಗ ಪೆವಿಲಿಯನ್ ಸೇರುತ್ತಾರೆ ಎಂದು ನಸು ನಕ್ಕಿದ್ದರು. ಆದರೆ, ಹ್ಯಾಂಗ್ ಓವರ್ನಲ್ಲೇ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿದ್ದ ಹರ್ಷಲ್ ಗಿಬ್ಸ್, 111 ಎಸೆತಗಳಲ್ಲಿ 21 ಬೌಂಡರಿ, 7 ಸಿಕ್ಸರ್ ಒಳಗೊಂಡ ಬರೋಬ್ಬರಿ 175 ರನ್ ಚಚ್ಚಿದರು. ಆ ಮೂಲಕ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನೇ ವಹಿಸಿದ್ದರು. ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಈ ವಿಚಾರವನ್ನ ಹರ್ಷಲ್ ಗಿಬ್ಸ್, ತಮ್ಮ ಅತ್ಮಕಥೆ ಟು ದಿ ಪಾಯಿಂಟ್ನಲ್ಲಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ