newsfirstkannada.com

Nipah Virus: ಕೇರಳದಲ್ಲಿ ನಿಫಾ ವೈರಸ್​ಗೆ ಎರಡು ಬಲಿ; ಬೆಂಗಳೂರಲ್ಲಿ ಹೈ-ಅಲರ್ಟ್​ ಘೋಷಣೆ

Share :

13-09-2023

    ಬೆಂಗಳೂರಲ್ಲಿ ಈಗಾಗಲೇ ಡೆಂಘೀ ಜ್ವರ ಆರ್ಭಟ

    ಏರ್​ಪೋರ್ಟ್​​ನಲ್ಲೂ ನಿಗಾ ಇಟ್ಟಿರುವ ಅಧಿಕಾರಿಗಳು

    ವಾರ್ಡ್​​ಗಳ ಕ್ಲೀನಿಂಗ್​ಗೆ ಒತ್ತು ನೀಡಲು ಸೂಚನೆ

ಕೇರಳದಲ್ಲಿ ನಿಫಾ ವೈರಸ್​​ಗೆ ಇಬ್ಬರು ಬಲಿಯಾಗಿದ್ದಾರೆ. ಹೀಗಾಗಿ ಎಚ್ಚರ ವಹಿಸುವಂತೆ ಬೆಂಗಳೂರು ಮಹಾನಗರ ಪಾಲಿಕೆಯಿಂದ ಸೂಚನೆ ನೀಡಲಾಗಿದೆ. ನಗರದಲ್ಲಿ ಈಗಾಗಲೇ ಒಂದ್ಕಡೆ ಡೆಂಘೀ ಪ್ರಕರಣಗಳು ಜಾಸ್ತಿಯಾಗ್ತಿದ್ದು, ವಾರ್ಡ್ ಕ್ಲೀನಿಂಗ್​ಗೆ ಒತ್ತು ಕೊಡಲಾಗಿದೆ.

ಏರ್​ಪೋರ್ಟ್​ನಲ್ಲೂ ಕೂಡ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಬಾವಲಿಗಳಿಂದ ಹುಟ್ಟಿಕೊಳ್ಳುವ ಈ ನಿಫಾ ವೈರಸ್​ಗೆ ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿ ಆಗಸ್ಟ್ 30 ಹಾಗೂ ಸೆಪ್ಟೆಂಬರ್ 11ರಂದು ಇಬ್ಬರು ಸಾವನ್ನಪ್ಪಿದ್ದಾರೆ. ಇದು ಎರಡನೇ ಬಾರಿಗೆ ನಿಫಾ ವೈರಸ್ ಸೋಂಕು ಕೇರಳದಲ್ಲಿ ಪತ್ತೆಯಾಗಿದ್ದು, ಆತಂಕ ಮನೆ ಮಾಡಿದೆ.

ನಿಫಾ ವೈರಸ್​ನಿಂದಾಗಿಯೇ ಇಬ್ಬರು ಸಾವನ್ನಪ್ಪಿರೋದು ಖಚಿತ ಎಂದು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ. 2018ರಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿತ್ತು.

ಬೆಂಗಳೂರಲ್ಲಿ ಹೈ-ಅಲರ್ಟ್..!

  • ನಗರದಲ್ಲಿ ಮತ್ತೆ ಎಚ್ಚರಿಕೆ ಇರುವಂತೆ ಸೂಚನೆ
  • ಬಿಬಿಎಂಪಿ ವ್ಯಾಪ್ತಿಯಲ್ಲಿ ಎಚ್ಚರಿಕೆ ಇರುವಂತೆ ಸೂಚನೆ
  • ವಾರ್ಡ್ ಟು ವಾರ್ಡ್ ಕ್ಲೀನಿಂಗ್ ಒತ್ತು ನೀಡಲು ಆದೇಶ
  • ಏರ್​ಪೋರ್ಟ್​​ನಲ್ಲೂ ನಿಗಾ ಇಟ್ಟಿರುವ ಅಧಿಕಾರಿಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nipah Virus: ಕೇರಳದಲ್ಲಿ ನಿಫಾ ವೈರಸ್​ಗೆ ಎರಡು ಬಲಿ; ಬೆಂಗಳೂರಲ್ಲಿ ಹೈ-ಅಲರ್ಟ್​ ಘೋಷಣೆ

https://newsfirstlive.com/wp-content/uploads/2023/09/nipah-virus.jpg

Load More