ರಿಯಲ್ ಸ್ಟಾರ್ ಉಪೇಂದ್ರಗೆ ಕೊನೆಗೂ ಬಿಗ್ ರಿಲೀಫ್
ಉಪೇಂದ್ರ ವಿರುದ್ಧದ FIRಗೆ ಹೈಕೋರ್ಟ್ ಮಧ್ಯಂತರ ತಡೆ
ಕೋರ್ಟ್ ಆದೇಶದ ಮೇಲೆ ಬುದ್ಧಿವಂತನ ಮುಂದಿನ ನಡೆ
ಬೆಂಗಳೂರು: ನಟ, ರಿಯಲ್ ಸ್ಟಾರ್ ಉಪೇಂದ್ರಗೆ ಕೊನೆಗೂ ಬಿಗ್ ರಿಲೀಫ್ ಸಿಕ್ಕಿದೆ. ಉಪೇಂದ್ರ ವಿರುದ್ಧದ ಎಫ್ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಚೆನ್ನಮ್ಮನಕೆರೆ ಪೊಲೀಸ್ ಠಾಣೆಯ FIRಗೆ ತಡೆಯಾಜ್ಞೆ ಕೊಟ್ಟು ಹೈಕೋರ್ಟ್ ಆದೇಶಿಸಿದೆ.
ಅಟ್ರಾಸಿಟಿ ಕೇಸ್‌ನಲ್ಲಿ FIR ದಾಖಲಾದ ಮೇಲೆ ಉಪೇಂದ್ರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕನ್ನಡ ಗಾದೆಯನ್ನು ಬಳಸಿದ್ದಕ್ಕಾಗಿ ಅರ್ಜಿದಾರರ ವಿರುದ್ಧ ಸುಳ್ಳು ದೂರು ನೀಡಲಾಗಿದೆ. ಕ್ಷುಲ್ಲಕ ಮತ್ತು ಪ್ರಚಾರಕ್ಕಾಗಿ ದೂರನ್ನು ದಾಖಲಿಸಲಾಗಿದೆ. ಹೀಗಾಗಿ ಅಟ್ರಾಸಿಟಿ ಕೇಸ್‌ನ ತನಿಖೆಗೆ ಮಧ್ಯಂತರ ತಡೆಯಾಜ್ಞೆಗೆ ಮನವಿ ಮಾಡಿದ್ದರು.
ಇದನ್ನೂ ಓದಿ: ಅವಹೇಳನಕಾರಿ ಪದ ಬಳಕೆ; ರಿಯಲ್ ಸ್ಟಾರ್ ಉಪೇಂದ್ರ ವಿರುದ್ಧ ಮತ್ತೊಂದು ಎಫ್ಐಆರ್
ಉಪೇಂದ್ರ ಅವರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಚೆನ್ನಮ್ಮನಕೆರೆ ಪೊಲೀಸರು ಹಾಕಿದ್ದ FIRಗೆ ತಡೆಯಾಜ್ಞೆ ನೀಡಿದೆ. ಆಕ್ಷೇಪಾರ್ಹ ಪದ ಬಳಕೆಗೆ ನಟ ಉಪೇಂದ್ರ ವಿರುದ್ಧ ಇನ್ನೂ ಹಲವು ದೂರು ದಾಖಲಾಗಿದೆ. ಇದರಲ್ಲಿ ಕೇವಲ ಒಂದು ಎಫ್ಐಆರ್‌ಗೆ ಮಾತ್ರ ತಡೆಯಾಜ್ಞೆ ನೀಡಲಾಗಿದೆ. ಇನ್ನೂ ಬೇರೆ, ಬೇರೆ ಪೊಲೀಸ್ ಠಾಣೆಯಲ್ಲೂ ಎಫ್ಐಆರ್‌ಗಳು ದಾಖಲಾಗಿವೆ. ರಾಜ್ಯದ ಹಲವೆಡೆ ಉಪೇಂದ್ರ ವಿರುದ್ಧ ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
ಉಪೇಂದ್ರ ಪರ ವಕೀಲರ ವಾದವೇನು?
ಹೈಕೋರ್ಟ್‌ನಲ್ಲಿ ನಟ ಉಪೇಂದ್ರ ಪರ ಹಿರಿಯ ವಕೀಲ ಉದಯ್ ಹೊಳ್ಳ ಅವರು ವಾದ ಮಂಡಿಸಿದರು. ಈ ಕೇಸ್‌ನಲ್ಲಿ SC, ST ಕಾಯ್ದೆ ಅನ್ವಯಿಸಲ್ಲ. ಉಪೇಂದ್ರ ಅವರು ಕೇವಲ ಗಾದೆ ಮಾತನ್ನ ಉಲ್ಲೇಖ ಮಾಡಿದ್ದಾರೆ. ಅದರಲ್ಲಿ ಯಾವುದೇ ಉದ್ದೇಶ ಇರಲಿಲ್ಲ. ಈ ಬಗ್ಗೆ ಕ್ಷಮೆಯಾಚನೆ ಕೂಡ ಮಾಡಿದ್ದಾರೆ. ಇದೀಗ ಎಫ್ಐಆರ್ ದಾಖಲಿಸಿ ತನಿಖೆ ಮಾಡುತ್ತಿರುವುದು ಸರಿಯಲ್ಲ. ಉದ್ದೇಶವಿದ್ದರೆ ಅವರ ಹೇಳಿಕೆ ಹಿಂದೆ ಮುಂದಿನ ಸಂದರ್ಭ ಗಮನಿಸಿದ್ರೆ ತಿಳಿಯತ್ತೆ. ಬೇರೆ ಯಾವುದೋ ವಿಚಾರಕ್ಕೆ ಸ್ಪಷ್ಟನೆ ನೀಡುವಾಗ ಗಾದೆ ಬಳಕೆ ಮಾಡಲಾಗಿದೆ. ಪೊಲೀಸರು ತಕ್ಷಣ ಮಹಜರ್ ಹೆಸರಲ್ಲಿ ಮನೆಗೆ ಭೇಟಿ ನೀಡಿದ್ದಾರೆ. ಅವರಿಗೆ ಕಿರುಕುಳ ನೀಡುವ ಉದ್ದೇಶ ಕಾಣ್ತಿದೆ. ಹೀಗಾಗಿ ಪ್ರಕರಣದ ತನಿಖೆಗೆ ತಡೆ ನೀಡುವಂತೆ ಮನವಿ ಮಾಡಿದರು.
ನ್ಯಾಯಮೂರ್ತಿಗಳು ಕೇಳಿದ್ದೇನು?
ವಕೀಲ ಉದಯ್ ಹೊಳ್ಳ ಅವರ ವಾದವನ್ನು ಆಲಿಸಿದ ನ್ಯಾ. ಚಂದನ್ ಗೌಡರ್ ಅವರು ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ನಟ ಉಪೇಂದ್ರ ಅವರು ಇದೊಂದೇ ಪದವನ್ನು ಮಾತ್ರ ಬಳಕೆ ಮಾಡಿದ್ದಾರಾ? ಒಂದು ಗಾದೆ ಬಳಸಿದ್ದಕ್ಕೆ ಇಷ್ಟೊಂದು ಎಫ್ಐಆರ್ ಹ್ಹಾ? ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು.
ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ವಕೀಲರು, ಹೌದು ಇದೇ ತಿಳಿಸುತ್ತೆ ಇದರ ಹಿಂದಿನ ಉದ್ದೇಶವೇನು ಅನ್ನೋದು. ನನ್ನ ಕಕ್ಷಿದಾರನಿಗೆ ಕಿರುಕುಳ ನೀಡಲಾಗ್ತಿದೆ. ಹೀಗಾಗಿ ತನಿಖೆಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡದರು. ಈ ವಾದ ಆಲಿಸಿದ ಹೈಕೋರ್ಟ್ ಜಡ್ಜ್ ವಕೀಲ ಉದಯ್ ಹೊಳ್ಳ ಅವರ ಮನವಿಯನ್ನು ಪುರಸ್ಕರಿಸಿ ಮಧ್ಯಂತರ ತಡೆಯಾಜ್ಞೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ