newsfirstkannada.com

ಕೇಂದ್ರ ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಿದ್ದ ಟ್ವಿಟರ್​ಗೆ ಕರ್ನಾಟಕ ಹೈಕೋರ್ಟ್​ ತಪರಾಕಿ; 50 ಲಕ್ಷ ರೂಪಾಯಿ ದಂಡ..!

Share :

30-06-2023

    ಟ್ವಿಟ್ಟರ್​ಗೆ 50 ಲಕ್ಷ ದಂಡ ವಿಧಿಸಿದ ಹೈಕೋರ್ಟ್​​

    ಆಕ್ಷೇಪಾರ್ಹ ಪೋಸ್ಟ್ ವಿಚಾರವಾಗಿ ಟ್ವಿಟ್ಟರ್​​ಗೆ ದಂಡ

    ಕೇಂದ್ರದ ವಿರುದ್ಧ ಕೋರ್ಟ್​ ಮೊರೆ ಹೋದ ಕಂಪನಿಯ ಅರ್ಜಿ ವಜಾ

ಕರ್ನಾಟಕ ಹೈಕೋರ್ಟ್​ ಟ್ವಿಟ್ಟರ್ ಕಂಪನಿಗೆ 50 ಲಕ್ಷ ದಂಡ ವಿಧಿಸಿದೆ. ವ್ಯಕ್ತಿಗತ ಟ್ವಿಟ್ಟರ್ ಖಾತೆಗಳ ನಿಷೇಧಿಸಲು ಕೇಂದ್ರದ ಆದೇಶ ವಿಚಾರವಾಗಿ ತನಿಖೆ ನಡೆಸಿದ್ದ ಹೈಕೋರ್ಟ್​ ಟ್ವಿಟ್ಟರ್​ಗೆ ದಂಡ ಕಟ್ಟುವಂತೆ ಹೇಳಿದೆ.

50 ಲಕ್ಷ ದಂಡ

ವ್ಯಕ್ತಿಗತ ಟ್ವಿಟ್ಟರ್ ಖಾತೆಗಳ ನಿಷೇಧಿಸುವ ವಿಚಾರವಾಗಿ ಕೇಂದ್ರ ಸರ್ಕಾರದ ನಿರ್ಬಂಧ ಪ್ರಶ್ನಿಸಿದ್ದ ಟ್ವಿಟ್ಟರ್ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠ ಟ್ವಿಟ್ಟರ್​ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಟ್ವಿಟ್ಟರ್​ ಸಂಸ್ಥೆಗೆ 50 ಲಕ್ಷ ದಂಡ ವಿಧಿಸಿದೆ.

ದಂಡ ಪಾವತಿಸಲಿ ನಿಗದಿತ ಸಮಯವಕಾಶ

ಹೈಕೋರ್ಟ್​ ಹೊರಡಿಸಿದ ಆದೇಶದ ಪ್ರಕಾರ ಟ್ವಿಟ್ಟರ್​ 45 ದಿನಗಳಲ್ಲಿ 50 ಲಕ್ಷ ದಂಡದ ಮೊತ್ತ ಪಾವತಿಸಬೇಕು ಎಂದಿದೆ. ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಈ ದಂಡದ ಮೊತ್ತವನ್ನು ಪಾವತಿಸಬೇಕು. ತಡವಾದರೆ ಪ್ರತಿದಿನ 5 ಸಾವಿರ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

ಆಕ್ಷೇಪಾರ್ಹ ಪೋಸ್ಟ್

ಕೇಂದ್ರ ಸರ್ಕಾರ ಆಕ್ಷೇಪಾರ್ಹ ಪೋಸ್ಟ್ ತೆಗೆಯಲು ಟ್ವಿಟರ್​ಗೆ ಸೂಚಿಸಿತ್ತು. ಆದರೆ ಕೇಂದ್ರದ ಸೂಚನೆ ಹಿನ್ನೆಲೆ ಪ್ರಶ್ನಿಸಿ ಟ್ವಿಟರ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕ್ರಮದ ಎಚ್ಚರಿಕೆ ನೀಡಿತ್ತು. ಮಾತ್ರವಲ್ಲದೆ, ಸರ್ಕಾರದ ನೋಟಿಸ್ ಟ್ವಿಟರ್ ಸಂಸ್ಥೆ ಪ್ರಶ್ನಿಸಿತ್ತು. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ದ ಉಲ್ಲಂಘನೆ ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಸೆಕ್ಷನ್​ 69 A ಅಡಿ ಕ್ರಮ

ಕೇಂದ್ರ ಸರ್ಕಾರ ಆಕ್ಷೇಪಾರ್ಹ ಪೋಸ್ಟ್ ವಿಚಾರವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆ.69 A ಅಡಿ ಕ್ರಮ ಜರುಗಿಸಿತ್ತು. ಕೆಲ ಅಕೌಂಟ್ ಬ್ಲಾಕ್ ಮಾಡುವಂತೆ ಟ್ವಿಟ್ಟರ್​ಗೆ ಸೂಚನೆ ನೀಡಿತ್ತು.

ಟ್ವಿಟ್ಟರ್​ ಅರ್ಜಿಯನ್ನು ವಜಾ

ಇನ್ನು ಸೆ.69ಎ ಅಡಿ ಈ ರೀತಿಯ ನಿರ್ದೇಶನ ನೀಡುವ ಅಧಿಕಾರ ಸರ್ಕಾರಕ್ಕಿದೆ. ಟ್ವೀಟ್ ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವ ಮತ್ತು ಸುವ್ಯವಸ್ಥೆ ಗೆ ವಿರುದ್ದವಾಗಿದ್ದರೆ ಕ್ರಮ ಕೈಗೊಳ್ಳಬಹುದಾಗಿದೆ. ಆದರೆ ಸರ್ಕಾರದ ಈ ಸೂಚನೆ ಪ್ರಶ್ನಿಸಿದ್ದ ಟ್ವಿಟ್ಟರ್ ಸಂಸ್ಥೆ ಹೈಕೋರ್ಟ್​ ಮೊರೆ ಹೋಗಿತ್ತು, ಆದರೆ ಹೈಕೋರ್ಟ್​ ಇವೆಲ್ಲವನ್ನು ಕೂಲಂಕುಶವಾಗಿ ಪರಿಶೀಲಿಸಿ ಟ್ವಿಟ್ಟರ್​ ಅರ್ಜಿಯನ್ನು ವಜಾಗೊಳಿಸಿದೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಂದ್ರ ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಿದ್ದ ಟ್ವಿಟರ್​ಗೆ ಕರ್ನಾಟಕ ಹೈಕೋರ್ಟ್​ ತಪರಾಕಿ; 50 ಲಕ್ಷ ರೂಪಾಯಿ ದಂಡ..!

https://newsfirstlive.com/wp-content/uploads/2023/06/Twitter-1.jpg

Load More