newsfirstkannada.com

ಲೈಂಗಿಕ ದೌರ್ಜನ್ಯ ಕೇಸ್​​; ರಿಲೀಸ್​​ ಬೆನ್ನಲ್ಲೇ ಮಾತಾಡಿದ ಮುರುಘಾ ಶ್ರೀ ಏನಂದ್ರು?

Share :

Published November 20, 2023 at 9:23pm

Update November 21, 2023 at 7:43am

    ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಬದಲಿಸಿದ ಮುರುಘಾ ಸ್ವಾಮಿಜಿ

    ಹೈ ಕೋರ್ಟ್​ನಿಂದ ಮುರುಘಾ ಶ್ರೀ ನ್ಯಾಯಂಗ ಬಂಧನ ರದ್ದು

    ಮುಂದಿನ ದಿನದಲ್ಲಿ ನಾನು ಮಾತನಾಡ್ತೀನಿ ಎಂದ ಮುರುಘಾ ಶ್ರೀ!

ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬರೋಬ್ಬರಿ 14 ತಿಂಗಳ ಹಿಂದೆ ಜೈಲು ಪಾಲಾಗಿದ್ದ ಮುರುಘಾ ಶ್ರೀಗಳು ನಾಲ್ಕು ದಿನಗಳ ಹಿಂದೆಯಷ್ಟೇ ಜಾಮೀನು ಮೇಲೆ ಹೊರ ಬಂದಿದ್ದರು. ಈ ಬೆನ್ನಲ್ಲೇ ಚಿತ್ರದುರ್ಗದ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯವೂ ಮುರುಘಾ ಶ್ರೀ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿತ್ತು. ಹೀಗಾಗಿ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಮಧ್ಯೆಯೇ ಹೈಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ.

ಚಿತ್ರದುರ್ಗದ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದ ಆದೇಶ ರದ್ದುಗೊಳಿಸಿ ಮುರುಘಾ ಶ್ರೀಗಳ ರಿಲೀಸ್​ ಮಾಡಿ ಎಂದು ಹೈಕೋರ್ಟ್​​ ಆದೇಶಿಸಿದೆ. ಜತೆಗೆ ಮುರುಘಾ ಶ್ರೀಗಳಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ.

ಸದ್ಯ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಮುರುಘಾ ಶ್ರೀ ಸುದ್ದಿಗಾರರೊಂದಿಗೆ ಮಾತಾಡಿದ್ದಾರೆ. ಈ ಬಗ್ಗೆ ಮುಂದಿನ ದಿನದಲ್ಲಿ ನಾನು ಮಾತನಾಡುತ್ತೇನೆ. ಸದ್ಯಕ್ಕೆ ನಾನು ಮೌನಕ್ಕೆ ಶರಣಾಗಿದ್ದೇನೆ ಎಂದಿದ್ದಾರೆ.

ಇನ್ನು, ಕೆಂಪು ಬಣ್ಣದ ಬ್ರಿಜಾ ಕಾರಿನಲ್ಲಿ ಹೊರಟ ಮುರುಘಾ ಶ್ರೀ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರನ್ನು ಬದಲಿಸಿದ್ದಾರೆ. ಬ್ರಿಜಾ ಕಾರು ಬದಲಿಸಿ ಬಿಳಿ ಬಣ್ಣದ ಬೆಂಜ್ ಕಾರನ್ನು ಹತ್ತಿ ಎಂಎಲ್​​ಎ ವೀರೇಂದ್ರ ಪಪ್ಪಿ ಬೆಂಬಲಿಗರ ಎಸ್ಕಾರ್ಟ್ ವಾಹನದಲ್ಲಿ ಪ್ರಯಾಣ ಬೆಳೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೈಂಗಿಕ ದೌರ್ಜನ್ಯ ಕೇಸ್​​; ರಿಲೀಸ್​​ ಬೆನ್ನಲ್ಲೇ ಮಾತಾಡಿದ ಮುರುಘಾ ಶ್ರೀ ಏನಂದ್ರು?

https://newsfirstlive.com/wp-content/uploads/2023/11/shree-4.jpg

Load More