ಹೊಳೆನರಸೀಪುರ ಶಾಸಕ ಹೆಚ್.ಡಿ ರೇವಣ್ಣಗೆ ಹೊಸ ಸಂಕಷ್ಟ
ವಿಧಾನಸಭೆ ಕಾರ್ಯದರ್ಶಿ ಮೂಲಕ ಹೈಕೋರ್ಟ್ ಸಮನ್ಸ್ ಜಾರಿ
ರೇವಣ್ಣ ನಡೆ ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 123ಕ್ಕೆ ವಿರುದ್ಧ
ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬಕ್ಕೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಹೈಕೋರ್ಟ್ ಸಮನ್ಸ್ ಜಾರಿಯಾಗಿದ್ದು, ಸೆಪ್ಟೆಂಬರ್ 25ಕ್ಕೆ ಮುಂದಿನ ವಿಚಾರಣೆ ನಿಗಧಿಯಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಪ್ರಜ್ವಲ್ ರೇವಣ್ಣ ಅವರನ್ನು ಹಾಸನ ಸಂಸದ ಸ್ಥಾನದಿಂದ ಹೈಕೋರ್ಟ್ ಅನರ್ಹಗೊಳಿಸಿತ್ತು. ಈ ಶಾಕ್‌ನಿಂದ ಹೊರ ಬರುವ ಮೊದಲೇ ಹೆಚ್.ಡಿ ರೇವಣ್ಣ ಅವರಿಗೆ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: ದೇವೇಗೌಡರ ಕುಟುಂಬಕ್ಕೆ ಆಘಾತದ ಮೇಲೆ ಆಘಾತ; ಪ್ರಜ್ವಲ್ 6 ವರ್ಷ ಚುನಾವಣೆಗೆ ಸ್ಪರ್ಧಿಸೋಕೆ ಆಗಲ್ವಾ?
ಹೆಚ್.ಡಿ ರೇವಣ್ಣ ಅವರು ಹೊಳೆನರಸೀಪುರ ಜೆಡಿಎಸ್ ಶಾಸಕರು. ವಿಧಾನಸಭಾ ಚುನಾವಣೆಯಲ್ಲಿ ರೇವಣ್ಣ ಅವರು ಹಣ, ಕೋಳಿ, ಮಾಂಸ ಹಂಚಿ ಚುನಾವಣೆ ಗೆದ್ದಿರುವ ಆರೋಪ ಕೇಳಿ ಬಂದಿತ್ತು. ದೇವರಾಜೇಗೌಡ ಎಂಬುವವರಿಂದ ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಕೆಯಾಗಿದ್ದು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕಳೆದ ತಿಂಗಳೇ ಸಮನ್ಸ್ ಜಾರಿ ಮಾಡಿತ್ತು.
ವಿಧಾನಸಭೆ ಕಾರ್ಯದರ್ಶಿ ಮೂಲಕ ಸಮನ್ಸ್ ಜಾರಿ
ಕಳೆದ ತಿಂಗಳು ಹೈಕೋರ್ಟ್ ಜಾರಿಗೊಳಿಸಿದ್ದ ಸಮನ್ಸ್ ಅನ್ನು ಹೆಚ್.ಡಿ ರೇವಣ್ಣ ಅವರು ಸ್ವೀಕರಿಸಿರಲಿಲ್ಲ. ಹೀಗಾಗಿ ವಿಧಾನಸಭೆ ಕಾರ್ಯದರ್ಶಿ ಮೂಲಕ ರೇವಣ್ಣ ಅವರಿಗೆ ಸಮನ್ಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ. ಇದೇ ಸೆಪ್ಟೆಂಬರ್ 25ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಹೆಚ್.ಡಿ ರೇವಣ್ಣ ಅವರ ವಿರುದ್ಧ ದೇವರಾಜೇಗೌಡ ಎಂಬುವವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿರು ಪ್ರಮುಖಾಂಶಗಳು ಇಲ್ಲಿವೆ.
ತಕರಾರು ಅರ್ಜಿಯಲ್ಲಿ ಏನಿದೆ?
ಮತದಾನಕ್ಕೂ ಒಂದು ದಿನ ಮುನ್ನ ಮಾಂಸ ಹಂಚಿದ್ದಾರೆ
ಹೆಚ್.ಡಿ ರೇವಣ್ಣ ಸಹಚರರ ಮೂಲಕ ಮತದಾರರಿಗೆ ಹಂಚಿಕೆ
ಅನಹಳ್ಳಿ, ದಂಡಿಗನ ಹಳ್ಳಿಯಲ್ಲಿ ಪ್ರತಿ ಮನೆಗೆ ಮಾಂಸ ಹಂಚಿದ್ದಾರೆ
ಎರಡು ಜೀವಂತ ಕೋಳಿ ಹಾಗೂ 3 ಸಾವಿರ ಹಂಚಿಕೆ ಮಾಡಿದ್ದಾರೆ
ಮತದಾರರು ಇದನ್ನೆಲ್ಲಾ ಸ್ವೀಕರಿಸಿ ಮತ ಹಾಕುವ ಭರವಸೆ ನೀಡಿದ್ದರು
ಇದು ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 123ಕ್ಕೆ ವಿರುದ್ಧವಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ