newsfirstkannada.com

ಮಳೆರಾಯನ ರುದ್ರ ನರ್ತನಕ್ಕೆ ನಲುಗಿದ ಹಿಮಚಲ ಪ್ರದೇಶ, ಅಸ್ಸಾಂ, ಉತ್ತರಾಖಂಡ್.. ಸಂಕಷ್ಟದಲ್ಲಿ ಜನರು

Share :

26-06-2023

    ಉತ್ತರ ಭಾರತವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ವರುಣದೇವ

    ಕುಲುವಿನ ಮೊಹಲ್‌ನಲ್ಲಿ ಕೊಚ್ಚಿಹೋದ ವಾಹನಗಳು

    ಮಳೆ ನೀರಿನ ಕಾರಿನಲ್ಲಿ ಕೊಚ್ಚಿ ಹೋಗ್ತಿದ್ದ ಮಹಿಳೆಯ ರಕ್ಷಣೆ

ದೇಶದಾದ್ಯಂತ ಮಳೆರಾಯನ ಆಟ ಶುರುವಾಗಿದ್ದು ಹರಿಯಾಣದಲ್ಲಿ ರೌದ್ರನರ್ತನ, ಮುಂಬೈನಲ್ಲಿ ಆರ್ಭಟ ಜೋರಾಗಿದೆ. ಹಿಮಾಚಲ ಪ್ರದೇಶದಲ್ಲಿ ಅಟ್ಟಹಾಸ, ಜಮ್ಮು ಕಾಶ್ಮೀರದಲ್ಲಿ ಕಾಲಿಗೆ ಬಿದ್ದವ್ರನ್ನ ತುಳಿಯುತ್ತಾ ನಾನಾಡಿದ್ದೇ ಆಟ ಎಂದು ವರುಣ ಮೆರೆಯೋದಕ್ಕೆ ಶುರು ಮಾಡಿದ್ದಾನೆ. ಸಾಕಷ್ಟು ಅವಾಂತರಗಳನ್ನೂ ಆಗಸದಿಂದ ಹೊತ್ತು ತಂದಿದ್ದಾನೆ.

ಉತ್ತರ ಭಾರತವನ್ನ ಹಿಂಡಿ ಹಿಪ್ಪೆ ಮಾಡಿರೋ ವರುಣದೇವ ಹಿಮಾಚಲ ಪ್ರದೇಶದಲ್ಲಿ ಪ್ರವಾಹ ಸೃಷ್ಟಿಸಿದ್ದಾನೆ. ಹಿಮಾಚಲ ಪ್ರದೇಶದ ಮಂಡಿಯ ಹನೋಗಿ ದೇವಸ್ಥಾನದ ಬಳಿ ಹಠಾತ್ ಪ್ರವಾಹ ಉಂಟಾಗಿದ್ದು, NH-3 ಮುಚ್ಚಿದ್ದರಿಂದ ವಾಹನ ಸವಾರರು, ಪ್ರವಾಸಿಗರು ತೊಂದರೆಯಲ್ಲಿ ಸಿಲುಕಿದ್ದರು.

ಉತ್ತರದಲ್ಲಿ ಭಾರೀ ಮಳೆಗೆ ಬಹುತೇಕ ರಸ್ತೆಗಳು ಜಲಾವೃತ

ನಿನ್ನೆ ರಾತ್ರಿ ಕುಲುವಿನ ಮೊಹಲ್‌ನಲ್ಲಿ ಭಾರೀ ಮಳೆಗೆ ಹಲವಾರು ವಾಹನಗಳು ಕೊಚ್ಚಿಹೋಗಿ ಹಾನಿಗೀಡಾಗಿವೆ. ಜೆಸಿಬಿ ವಾಹನದ ಸಹಾಯದಿಂದ ವಾಹನಗಳನ್ನು ಹೊರತೆಗೆಯಲಾಯಿತು. ಅತ್ತ ಸೆರಾಜ್ ಕಣಿವೆಯಲ್ಲೂ ಭಾರಿ ಹಾನಿಯಾಗಿದೆ. ಉತ್ತರಾಖಂಡ್​ನ ಹರಿದ್ವಾರದಲ್ಲಿ ಧಾರಾಕಾರ ಮಳೆಯಿಂದಾಗಿ ಬಹುತೇಕ ರಸ್ತೆಗಳು ಜಲಾವೃತವಾಗಿವೆ. ಮನೆಗಳು ಕೂಡ ನೀರಿನಿಂದ ತುಂಬಿವೆ. ಸಂಚರಿಸಲು ಜನರು ಪರದಾಡುವಂತಾಗಿದೆ. ಉತ್ತರಾಖಂಡ್​ದ ಗೌರಿಕುಂಡ್​ನಿಂದ ಕೇದಾರನಾಥ ನಡಿಗೆ ಮಾರ್ಗವನ್ನು ಮುಚ್ಚಲಾಗಿದೆ. ಸಿಕ್ಕಿಬಿದ್ದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ.

ಅಸ್ಸಾಂನ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ ನೀರಿನ ಮಟ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಇದು ಪ್ರವಾಹ ಪರಿಸ್ಥಿತಿಯನ್ನು ತುಸು ತಗ್ಗಿಸಿದೆ. ಮಳೆ ಮುಂದುವರಿದರೆ ಮತ್ತೆ ನೀರಿನ ಪ್ರಮಾಣ ಹೆಚ್ಚಾಗುವ ಆತಂಕ ಸ್ಥಳೀಯರದ್ದಾಗಿದೆ.

ಕೊಚ್ಚಿ ಹೋಗುತ್ತಿದ್ದ ಕಾರಿನಲ್ಲಿದ್ದ ಮಹಿಳೆಯ ರಕ್ಷಣೆ

ಹರಿಯಾಣ ವ್ಯಾಪ್ತಿಯ ಪಂಚಕುಲದ ಖರಕ್ ಮಂಗೋಳಿ ಎಂಬಲ್ಲಿ ಮಳೆಯಿಂದಾಗಿ ನದಿಯಲ್ಲಿ ಏಕಾಏಕಿ ವಿಪರೀತ ನೀರು ಹರಿದಿದೆ. ಪರಿಣಾಮ ಕಾರೊಂದು ಕೊಚ್ಚಿ ಹೋಗಿದೆ. ಕೊಚ್ಚಿ ಹೋದ ಕಾರಿನಲ್ಲಿ ಓರ್ವ ಮಹಿಳೆ ಸಿಲುಕಿದ್ದರು. ಸ್ಥಳದಲ್ಲೇ ಇದ್ದ ಜನ ಆಕೆಯನ್ನ ರಕ್ಷಣೆ ಮಾಡಿದ್ದು, ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ್​ದ ಪೂಂಚ್‌ನ ಮೆಂಧಾರ್‌ನಲ್ಲಿ ಭಾರೀ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಹರಿಣಿ ನಾಲಾಹ್‌ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ವೇಳೆ ಸಿಕ್ಕಿಬಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದೇ ರೋಚಕ.

ಕೆರೆಯಂತಾದ ಮುಂಬೈಯ ರೈಲ್ವೆ ನಿಲ್ದಾಣಗಳು

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗ್ತಿದ್ದು, ಮುಂಬೈನ ರಸ್ತೆಗಳು ಹೊಳೆಯಂತಾಗಿವೆ. ಮಳೆಯಿಂದಾಗಿ ಮುಂಬೈನಲ್ಲಿ ಮನೆಯ ಬಾಲ್ಕನಿಯೊಂದು ಕುಸಿದು ಬಿದ್ದಿದೆ. ಮೆರವಣಿಗೆ ವೀಕ್ಷಿಸುವ ವೇಳೆ ಅವಘಡ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಇನ್ನುಳಿದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನು, ಮುಂಬೈನ ರೈಲ್ವೇ ನಿಲ್ದಾಣಗಳು ಕೆರೆಯಂತಾಗಿವೆ. ಎಲ್ಲೆಲ್ಲೂ ನೀರು ಕಂಡು ಬರ್ತತಿದೆ. ರೈಲ್ವೇ ನಿಲ್ದಾಣದ ಹೊರಗೆ ಮಾತ್ರವಲ್ಲ, ರೈಲಿನ ಒಳಗೂ ಸೋರುವಂತಾಗಿತ್ತು. ಅವಂತಿಕಾ ಎಕ್ಸ್​ಪ್ರೆಸ್​ನ ಎಸಿ ಕೋಚ್​ ಸಂಪೂರ್ಣ ಸೋರುತ್ತಿದೆ. ರೈಲು ಮಾತ್ರವಲ್ಲ, ಮುಂಬೈನ ಬಸ್​ನ ಒಳಗೂ ನೀರು ಪ್ರವೇಶಿಸಿದೆ. ಬಸ್​ನೊಳಗೂ ಛತ್ರಿ ಹಿಡಿದು ನಿಲ್ಲಬೇಕಾಗಿತ್ತು.

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮುಂಬೈನ ವರ್ಲಿಯಲ್ಲಿ ಮಳೆ ಹಾನಿ ಪರಿಶೀಲಿಸಿದ್ರು. ನೀರು ನಿಲ್ಲದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ರು. ಮುಂಬೈನ ಜೋರು ಮಳೆಯಲ್ಲಿ ಶ್ವಾನ ಕುಣಿದು ಕುಪ್ಪಳಿಸಿ. ಆನಂದಿಸುತ್ತಿರುವ ವಿಡಿಯೋ ಸದ್ಯ ವೈರಲ್​ ಆಗಿದೆ.

ಇನ್ನು ಮಧ್ಯಪ್ರದೇಶದ ಇಂದೋರ್​ನಲ್ಲಿ ಪ್ರೇಮಿಗಳಿಬ್ಬರು ಸುರುಯುತ್ತಿರೋ ಮಳೆಯಲ್ಲೇ ನಡು ರಸ್ತೆಯಲ್ಲೇ ಡುಯೆಟ್ ಡ್ಯಾನ್ಸ್​ ಮಾಡಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುರುವಾದ ಮಳೆ ರಗಳೆ

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯೂ ಮಳೆರಾಯ ಎಂಟ್ರಿ ಕೊಟ್ಟಿದ್ದ. ಬನಶಂಕರಿ, ನಾಗರಭಾವಿ, ವಿಜಯನಗರ, ರಾಜಾಜಿನಗರ, ‌ಮಲ್ಲೇಶ್ವರಂ, ಕಾರ್ಪೋರೇಷನ್, ಜಿಸಿ ರೋಡ್ ಸೇರಿ ನಗರದ‌ ಹಲವು ಭಾಗಗಳಲ್ಲಿ‌ ಮಳೆಯಾಗಿದೆ.

ಇನ್ನು ದೆಹಲಿಯಲ್ಲೂ ವರುಣ ಆರ್ಭಟಿಸ್ತಿದ್ದು ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಘೋಷಿಸಿದೆ. ಹೀಗೆ ಪ್ಯಾನ್ ಇಂಡಿಯಾ ವರುಣ ತೆರೆಗೆ ಅಪ್ಪಳಿಸಿದ್ದಾನೆ. ಕಾಟ ಕೊಡಲು ಶುರು ಮಾಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆರಾಯನ ರುದ್ರ ನರ್ತನಕ್ಕೆ ನಲುಗಿದ ಹಿಮಚಲ ಪ್ರದೇಶ, ಅಸ್ಸಾಂ, ಉತ್ತರಾಖಂಡ್.. ಸಂಕಷ್ಟದಲ್ಲಿ ಜನರು

https://newsfirstlive.com/wp-content/uploads/2023/06/Panchkula_Floods.jpg

Load More