ಹಿಮಾಚಲದಲ್ಲಿ 9,600 ಮನೆಗಳು ಧರಾಶಾಹಿ
ಹಿಮಾಚಲ, ಉತ್ತರಾಖಂಡ್ನಲ್ಲಿ ಇನ್ನೂ 2 ದಿನ ಮಳೆ
ಉತ್ತರಾಖಂಡ್ನಲ್ಲಿ ಮತ್ತೆ 6 ಜನರ ಬಲಿಪಡೆದ ವರುಣ
ಹಿಮಾಚಲ ಪ್ರದೇಶದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ಮಳೆರಾಯ ನಿಂತ ನೆಲವನ್ನೇ ಕುಸಿಯುವಂತೆ ಮಾಡ್ತಿದ್ದಾನೆ. ಭೂಕುಸಿತದ ಒಂದೊಂದು ದೃಶ್ಯಗಳು ಎದೆ ನಡುಗಿಸುವಂತಿವೆ. ಜೀವ ಭಯದಲ್ಲಿ ಜನರು ದಿನಕಳೆವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಎರಡು ದಿನ ಹಿಮಾಚಲ ಹಾಗೂ ಉತ್ತರಾಖಂಡದಲ್ಲಿ ವರುಣ ರೌದ್ರನರ್ತನ ಮೆರೆಯಲಿದ್ದಾನೆ ಅನ್ನೂ ಸುದ್ದಿ ಜನರ ನಿದ್ದೆಗೆಡಿಸಿದೆ.
ಹೌದು.. ಹಿಮಾಚಲ ಪ್ರದೇಶದಲ್ಲಿ ಉಂಟಾಗಿರೋ ಮೇಘಸ್ಫೋಟ ಅಕ್ಷರಶಃ ನರಕ ದೃಶ್ಯಗಳನ್ನು ನಿರ್ಮಾಣ ಮಾಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಮಳೆ ಅಬ್ಬರಕ್ಕೆ ಇಡೀ ರಾಜ್ಯವೇ ಬೆಚ್ಚಿಬಿದ್ದಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಯಾವಾಗ ಏನಾಗುತ್ತೋ, ಎಲ್ಲಿ ಭೂಮಿ ಬಾಯ್ಬಿಡುತ್ತೋ ಅನ್ನೋ ಭಯದಲ್ಲೇ ಜನರು ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ.
ಹಿಮಾಚಲದಲ್ಲಿ 9,600 ಮನೆಗಳು ಧರಾಶಾಹಿ
ಹಿಮಾಚಲ ಪ್ರದೇಶದಲ್ಲಿ ನಿಂತ ನೆಲವೇ ಕುಸಿಯುತ್ತಿದೆ.. ಕಷ್ಟ ಪಟ್ಟು ಕಟ್ಟಿಕೊಂಡಿದ್ದ ಕನಸಿನ ಮನೆಗಳು ಕುಸಿತವಾಗ್ತಿವೆ. ರಣಭೀಕರ ಪ್ರವಾಹಕ್ಕೆ ಈವರೆಗೂ ಹಿಮಾಚಲದಲ್ಲಿ 9,600 ಮನೆಗಳು ಕುಸಿತ ಕಂಡಿವೆ. ಶಿಮ್ಲಾದ ಸಮ್ಮರ್ ಹಿಲ್ಸ್‌ನಲ್ಲಿ ಭಾರೀ ಭೂಕುಸಿತವಾಗಿದ್ದು. ಸಂತ್ರಸ್ತರನ್ನು ಏರ್‌ಲಿಫ್ಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. ಅಲ್ಲದೇ ಭೂಕುಸಿತದಿಂದ ಈವರೆಗೂ 60ಕ್ಕೂ ಅಧಿಕ ಜನರು ಪ್ರಾಣಕಳೆದುಕೊಂಡಿದ್ದಾರೆ.
ಭೂಕುಸಿತದ ಭೀತಿಗೆ ಜನತೆ ತತ್ತರ
ಹಿಮಾಚಲ ಪ್ರದೇಶದ ಶಿಮ್ಲಾ ಸೇರಿ ಹಲವೆಡೆ ಭೂಕುಸಿತ ಸಂಭವಿಸಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.. ಶಿಮ್ಲಾದ ಕೃಷ್ಣನಗರ ಪ್ರದೇಶದಲ್ಲಿ ಉಂಟಾದ ಭೂಕುಸಿತದ ಬಳಿಕ ಇಲ್ಲಿಯವರೆಗೆ ಒಟ್ಟು 19 ಮೃತದೇಹಗಳು ಹಾಗೂ ಸಮ್ಮರ್ ಹಿಲ್‌ನ ಶಿವ ದೇವಾಲಯದ ಸ್ಥಳದಲ್ಲಿ 12 ಮೃತದೇಹಗಳು, ಫಾಗ್ಲಿಯಲ್ಲಿ ಐದು ಮತ್ತು ಕೃಷ್ಣಾನಗರದಲ್ಲಿ ಎರಡು ಶವಗಳನ್ನು ಹೊರತೆಗೆಯಲಾಗಿದೆ. ಶಿವ ದೇವಾಲಯದಲ್ಲಿ ಇನ್ನೂ 10ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ಇದೆ.. ಜನರ ರಕ್ಷಣೆಗೆ ಮುಂದಾಗಿರೋ ಎನ್ಡಿಆರ್ಎಫ್ ಸಿಬ್ಬಂದಿ ಹಲವರನ್ನ ರಕ್ಷಣೆ ಮಾಡಿದ್ದಾರೆ. ಹಲವರ ರಕ್ಷಣಾ ಕಾರ್ಯಾಚಾರಣೆ ಮುಂದುವರೆದಿದೆ.
ಹಿಮಾಚಲ ಮತ್ತು ಉತ್ತರಾಖಂಡ್ನಲ್ಲಿ ಇನ್ನೂ 2 ದಿನ ಮಳೆ
ಹವಾಮಾನ ವೈಪರೀತ್ಯದ ಹಿನ್ನೆಲೆ ಹಿಮಾಚಲ ಪ್ರದೇಶದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಅಲ್ಲದೇ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ನಾದ್ಯಂತ ಇನ್ನೂ ಎರಡು ದಿನ ಭಾರೀ ಮಳೆಯಾಗಲಿದೇ ಅನ್ನೋ ಸುದ್ದಿ ಜನರ ನಿದ್ದೆಗೆಡಿಸಿದೆ.
ಉತ್ತರಾಖಂಡ್ನಲ್ಲಿ 6 ಜನರ ಬಲಿಪಡೆದ ವರುಣ
ಉತ್ತರಾಖಂಡದಲ್ಲಿ ಮಳೆಯಿಂದ ಉಂಟಾದ ಅವಾಂತರಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೇರಿದೆ. ಅಲ್ಲದೇ 7 ಮಂದಿ ನಾಪತ್ತೆಯಾಗಿದ್ದಾರೆ. ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಉಂಟಾದ ಭೂಕುಸಿತದಲ್ಲಿ ಮೂವರನ್ನು ರಕ್ಷಿಸಲಾಗಿದ್ದು, ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ಮದ್ಮಹೇಶ್ವರ ಕಣಿವೆಯಲ್ಲಿ ಸಿಲುಕಿದ್ದ 220 ಮಂದಿ ಯಾತ್ರಿಕರ ಪೈಕಿ 122 ಜನರನ್ನ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ನಾನೂದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಿ, ರಾನ್ಸಿ ಗ್ರಾಮಕ್ಕೆ ಜನರ ಸ್ಥಳಾಂತರ ಮಾಡಲಾಗಿದೆ. ಇನ್ನುಳಿದವರ ರಕ್ಷಣೆಗೆ ರಕ್ಷಣಾ ಕಾರ್ಯ ಮುಂದುವರೆದಿದೆ. ಮುಂದಿನ ನಾಲ್ಕು ದಿನಗಳ ಕಾಲ ಉತ್ತರಾಖಂಡದಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಒಟ್ನಲ್ಲಿ ವರುಣಾರ್ಭಟಕ್ಕೆ ದೇವಭೂಮಿ ಉತ್ತರಾಖಂಡ ಹಾಗೂ ಪ್ರವಾಸಿಗರ ಸ್ವರ್ಗ ಹಿಮಾಚಲ ಪ್ರದೇಶ ತತ್ತರಿಸಿದೆ. ಮಳೆರಾಯನ ಆರ್ಭಟ ಇನ್ನೂ ಮುಂದುವರೆದರೆ ಜನರಿಗೆ ಮತ್ತಷ್ಟು ಸಂಕಷ್ಟಗಳು ಎದುರಾಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ