ಮೂರು ತಲೆಮಾರಿನ ಕುಟುಂಬ ಬಲಿಪಡೆದ ಭೂ-ಕುಸಿತ
ಕರುಳು ಚುರುಕ್ ಎನಿಸುತ್ತೆ ಭೂಕುಸಿತದ ಭೀಕರ ದೃಶ್ಯಗಳು
ಇನ್ನೂ ಮಳೆ ಸುರಿಯುವ ಮುನ್ಸೂಚನೆ, ಹೆಚ್ಚಿದ ಆತಂಕ
ಹಿಮಾಚಲ ಪ್ರದೇಶದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ಮಳೆರಾಯ ಸಾವಿನ ಸರಮಾಲೆಯನ್ನೇ ಸೃಷ್ಟಿಸಿದ್ದಾನೆ.. ಭೂಕುಸಿತದ ಭೂತ ಜನರ ನಿದ್ದಗೆಡ್ಡಿಸಿದ್ದು ಸಾಲು ಸಾಲು ಕಟ್ಟಡಗಳು ನೆಲ ಕಚ್ಚುತ್ತಿವೆ. ಮೂರು ತಲೆಮಾರಿನ ಕುಟುಂಬವೊಂದನ್ನೂ ಬಲಿಪಡೆದ ಭೂಕುಸಿತ, ಹಿಮಾಚಲವನ್ನ ಸ್ಮಶಾಣ ಮಾಡಲು ಹೊರಟಿದೆ.
ಜೂನ್ 24 ರಿಂದ ಸುರಿಯುತ್ತಿರುವ ಭಾರೀ ಮಳೆ ಮತ್ತು ಭೀಕರ ಭೂ-ಕುಸಿತಕ್ಕೆ ಹಿಮಾಚಲ ಪ್ರದೇಶ ತೊಯ್ದು ತೊಪ್ಪೆಯಾಗಿದ್ದಲ್ಲದೇ ತತ್ತರಿಸಿದೆ. ರಣ ಮಳೆ ಜೊತೆ ಭೀಕರ ಭೂಕುಸಿತವೂ ಕೈಜೋಡಿಸಿ ಜನರನ್ನ ಸಾವಿನ ದವಡೆಗೆ ನೂಕುತ್ತಿವೆ.
ಮಳೆ ಅಬ್ಬರಕ್ಕೆ 327 ಮಂದಿ ಸಾವು
ಹಿಮಾಚಲದ ಮಳೆ ಅಬ್ಬರಕ್ಕೆ ಈ ವರೆಗೆ 327 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ 318 ಮಂದಿ ಗಾಯಗೊಂಡಿದ್ದಾರೆ. 41 ವರ್ಷಗಳ ನಂತರ ಹಿಮಾಚಲದಲ್ಲಿ ಸುರಿದ ಭಾರೀ ಮಳೆ ಅನಾಹುತಗಳ ಸರಮಾಲೆಯನ್ನೇ ಸೃಷ್ಟಿಸಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ 133 ಭೂಕುಸಿತಗಳು ಸಂಭವಿಸಿದ್ದು, 58 ಕಡೆಗಳಲ್ಲಿ ಪ್ರವಾಹ ಸಂಭವಿಸಿವೆ.
ಮೂರು ತಲೆಮಾರಿನ ಕುಟುಂಬ ಬಲಿಪಡೆದ ಭೂಕುಸಿತ
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಸಂಭವಿಸಿದ ಭೂಕುಸಿತ ಒಂದೇ ಕುಟುಂಬದ ಮೂರು ತಲೆಮಾರಿನ ಜನರನ್ನ ಬಲಿ ಪಡೆದಿದೆ. ಭೂಕುಸಿತದಲ್ಲಿ ಒಟ್ಟು 8 ಮಂದಿ ಬಲಿಯಾಗಿದ್ದು, ಮೃತದೇಹಗಳ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಹಿಮಾಚಲದಲ್ಲಿ ಮುಂದುವರೆದ ರಕ್ಷಣಾ ಕಾರ್ಯ
ಹಿಮಾಚಲದಲ್ಲಿ ರಕ್ಷಣಾ ಸಿಬ್ಬಂದಿ ಇದುವರೆಗೆ 1 ಸಾವಿರದ 731 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಈ ಪೈಕಿ ಹೆಲಿಕಾಪ್ಟರ್ ಮೂಲಕ 739 ಜನರನ್ನು ಸ್ಥಳಾಂತರಿಸಲಾಗಿದ್ದು, ದೋಣಿ ಮೂಲಕ 780 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. 212 ಜನರನ್ನು ಟ್ರ್ಯಾಕ್ಟರ್ ಮತ್ತು ಟ್ರಾಲಿ ಮೂಲಕ ಸ್ಥಳಾಂತರಿಸಲಾಗಿದೆ. ರಾಜ್ಯದಾದ್ಯಂತ 60 ಸೇನಾ ಸಿಬ್ಬಂದಿ ಮತ್ತು 180 ಎನ್‌ಡಿಆರ್‌ಎಫ್ ಸಿಬ್ಬಂದಿ ಹಗಲಿರುಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿಪತ್ತಿಗೆ ಒಳಗಾದವರಿಗಾಗಿ ಸರ್ಕಾರ ಐದು ಶಿಬಿರಗಳನ್ನು ಸ್ಥಾಪಿಸಿದೆ. ನೂರ್‌ಪುರ, ಫತೇಪುರ್‌ನಲ್ಲಿ ಒಂದು ಶಿಬಿರ ಮತ್ತು ಇಂದೋರಾದಲ್ಲಿ ಎರಡು ಶಿಬಿರಗಳನ್ನು ಸ್ಥಾಪಿಸಲಾಗಿದೆ.
ಬಿಹಾರಿ ಆರ್ಕಿಟೆಕ್ಟ್ ಬಗ್ಗೆ ಹಿಮಾಚಲ ಸಿಎಂ ಅಸಮಾಧಾನ
ಹಿಮಾಚಲದ ಭೀಕರ ಭೂಕಸಿತಕ್ಕೆ ಸಾಲು ಸಾಲು ಕಟ್ಟಡಗಳು ನೆಲಕಚ್ಚುತ್ತಿವೆ. ಈ ಹಿನ್ನಲೆ ಸಿಎಂ ಸುಖ್ವಿಂದರ್ ಸಿಂಗ್ ಸುಖು ಬಿಹಾರಿ ಮಾದರಿಯ ಕಟ್ಟಡ ನಿರ್ಮಾಣದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಬಿಹಾರದ ಕಾರ್ಮಿಕರು ಬಿಹಾರ ಮಾದರಿಯ ಕಟ್ಟಡಗಳನ್ನ ಹಿಮಾಚಲದಲ್ಲಿ ನಿರ್ಮಾಣಮಾಡಿದ್ದಾರೆ. ಈ ಕಟ್ಟಡಗಳಿಗೆ ಹಿಮಾಚಲದ ಪ್ರಕೃತಿ ವಿಕೋಪವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ ಎಂದು ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಉತ್ತರಾಖಂಡದಲ್ಲಿ ಮಳೆ ಅಬ್ಬರಕ್ಕೆ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಉತ್ತರಾಖಂಡದ ಲಕ್ಷ್ಮಣ್ ಜುಲಾದಲ್ಲಿನ ರೆಸಾರ್ಟ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ದಂಪತಿ ಮತ್ತು ಅವರ ಮಗ ಸೇರಿದಂತೆ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಅಮ್ಸೌರ್‌ನಲ್ಲಿ ಭೂಕುಸಿವಾದ ಪರಿಣಾಮ ಪೌರಿ-ಕೋಟ್‌ದ್ವಾರ-ದುಗಡ್ಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ರಿಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ ಸಹ ಕೊಚ್ಚಿಹೋಗಿದೆ.
ಒಟ್ನಲ್ಲಿ ವರುಣಾರ್ಭಟಕ್ಕೆ ದೇವಭೂಮಿ ಉತ್ತರಾಖಂಡ ಹಾಗೂ ಪ್ರವಾಸಿಗರ ಸ್ವರ್ಗ ಹಿಮಾಚಲ ಪ್ರದೇಶ ತತ್ತರಿಸಿದೆ. ಮಳೆರಾಯನ ಆರ್ಭಟ ಇನ್ನೂ ಮುಂದುವರೆದರೆ ಜನರಿಗೆ ಮತ್ತಷ್ಟು ಸಂಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ಇನ್ನು ಮುಂದಿನ ನಾಲ್ಕು ದಿನಗಳ ಕಾಲ ದೆಹಲಿಯಲ್ಲಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ