ಚಿಕಾಗೋದಲ್ಲಿ ಮಾರ್ದನಿಸಿದ ಸನಾತನ ಧರ್ಮದ ವೇದ ಮಂತ್ರ ಘೋಷ ಪಠಣ
ಬೆಂಗಳೂರಿನ ರಾಕೇಶ್ ಭಟ್ ಮತ್ತು ತಂಡದಿಂದ ಶಾಂತಿ ಮಂತ್ರ ಪಠಣ
ಎಲ್ಲೆಡೆಯೂ ಚರ್ಚೆಯಾಗುತ್ತಿರುವ ರಾಕೇಶ್ ಭಟ್ ತಂಡದ ವೇದಮಂತ್ರ ಘೋಷ
ವಾಷಿಂಗ್ಟನ್: ಜಗತ್ತಿನ ನಾಗರಿಕತೆಯ ತೊಟ್ಟಿಲು ಅಂದ್ರೆ ಅದು ಭಾರತ ಅಂತ ಹೇಳುತ್ತಾನೆ ಖ್ಯಾತ ಇತಿಹಾಸಕಾರ ವಿಲ್ ಡ್ಯುರೆಂಟ್. ಭಾರತ ವೇದ, ಉಪನಿಷತ್ತುಗಳ ಮೂಲಕವೇ ಜಗತ್ತಿಗೆ ಜ್ಞಾನದ ಬೆಳಕು ನೀಡಿದೆ ಅಂತ ಅನೇಕ ಪಂಡಿತರು, ಇತಿಹಾಸಕಾರರು, ತತ್ವಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಅದೇ ರೀತಿ ಸದ್ಯ ಜಗತ್ತಿನ ಎಲ್ಲಾ ಪ್ರತಿ ಮೂಲೆಯಲ್ಲೂ ಸನಾತನ ಧರ್ಮದ ಒಂದಲ್ಲ ಒಂದು ಅಂಶ ಕಾಣ ಸಿಗುತ್ತದೆ. ಅದಕ್ಕೆ ದೊಡ್ಡ ಸಾಕ್ಷಿಯಾಗಿ ನಿಂತಿದೆ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಮೊಳಗಿದ ವೇದ ಮಂತ್ರದ ಘೋಷಣೆ.
ಇದನ್ನೂ ಓದಿ: ಜಗತ್ತಿನಲ್ಲೇ ಅತಿ ಹೆಚ್ಚು ಚಿನ್ನ ಇರೋದು ಯಾವ ದೇಶದಲ್ಲಿ? ಭಾರತಕ್ಕೆ ಎಷ್ಟನೇ ಸ್ಥಾನ?
ಬೆಂಗಳೂರು ಮೂಲದ ಅರ್ಚಕರಾದ ರಾಕೇಶ್ ಭಟ್ ಮತ್ತು ತಂಡದಿಂದ ಅಮೆರಿಕಾದಲ್ಲಿ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಅಸತೋಮ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಓಂ ಶಾಂತಿ.. ಶಾಂತಿ… ಶಾಂತಿಃ ಎಂಬ ಮಂತ್ರವನ್ನು ಹೇಳಿದರು. ರಾಕೇಶ್ ಭಟ್ ಅವರು ಹೇಳಿದ ಮಂತ್ರಘೋಷ ಈಗ ಜಾಗತಿಕ ಸುದ್ದಿಯಾಗಿ ಮಾರ್ಪಟ್ಟಿದೆ. ಎಕ್ಸ್ ಖಾತೆಯಿಂದ ಹಿಡಿದು ಇನ್ಸ್ಟಾಗ್ರಾಮ್ ವರೆಗೂ ಅವರ ಮಂತ್ರಘೋಷಗಳ ವಿಡಿಯೋ ಶೇರ್ ಆಗುತ್ತಿದೆ.
ಇದನ್ನೂ ಓದಿ: 7 ವರ್ಷದಲ್ಲಿ ಬರೋಬ್ಬರಿ 10 ಲಕ್ಷ km ಕಾರ್ ಓಡಿಸಿದ ಟ್ರಾವೆಲರ್; ಈತನ ಮುಂದಿನ ಗುರಿಯೇನು?
ಬೆಂಗಳೂರಿನ ಮೂಲದವರಾದ ರಾಕೇಶ್ ಭಟ್ ಮತ್ತು ತಂಡದಿಂದ ವೇದಮಂತ್ರ ಘೋಷಣೆಯಾಗಿದೆ. ಅಮೆರಿಕಾದ ಮೇರಿಲ್ಯಾಂಡ್ನಲ್ಲಿ ಶ್ರೀ ಶಿವ ವಿಷ್ಣು ದೇವಾಲಯದಲ್ಲಿ ಅರ್ಚಕರಾಗಿರುವ ರಾಕೇಶ್ ಭಟ್, ಉಡುಪಿಯ ಪೇಜಾವರ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ವೇದ ಅಧ್ಯಯನ ಮಾಡಿದವರು. ಮಂತ್ರಾಲಯ, ಉತ್ತರಾಧಿಮಠ, ಉಡುಪಿ ಅಷ್ಟ ಮಠಗಳಿಂದ ಶತಶಾಸ್ತ್ರ ವಿದ್ವಾನ್ ಆಗಿರುವ ರಾಕೇಶ್ ಭಟ್ ಈ ಹಿಂದೆ ಉಡುಪಿ ಅಷ್ಟ ಮಠ, ಬದರಿನಾಥ ದೇವಾಲಯ, ಸೇಲಂನ ರಾಘವೇಂದ್ರ ಸ್ವಾಮಿ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದಿ, ತಮಿಳು ತೆಲಗು, ಕನ್ನಡ, ತುಳು ಇಂಗ್ಲಿಷ್ ಸಂಸ್ಕೃತ ಸೇರಿ ಒಟ್ಟು 7 ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದಾರೆ ರಾಕೇಶ್ ಭಟ್.
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಹೋದ ಸುನೀತಾ ವಿಲಿಯಮ್ಸ್ ಜೀವಕ್ಕಿದೆ ಅಪಾಯ.. ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಕಮಾಂಡರ್!
Hindu prayers to start the #DNC proceedings today by Priest Rakesh Bhat of the Sri Siva Vishnu Temple in Lanham, MD
The Democratic Party stands as a champion of diversity, advocating for the rights and inclusion of all faiths, creeds, and races. It is committed to fostering an… pic.twitter.com/uPjv4Jl1uI— 🇺🇸 Rishi Kumar 🇺🇸 (@rishikumar1) August 22, 2024
ರಾಕೇಶ್ ಭಟ್ರನ್ನು ಹಾಡಿ ಹೊಗಳಿದ ಪೇಜಾವರ ಶ್ರೀಗಳು
ಅಮೆರಿಕಾದ ಚಿಕಾಗೋದಲ್ಲಿ ವೇದಪಠಣ ಮಾಡಿ ವಿಶ್ವದ ಗಮನ ಸೆಳೆದ ರಾಕೇಶ್ ಭಟ್ಗೆ ಗುರುವಿನ ಸ್ಥಾನದಲ್ಲಿ ನಿಂತು ವಿದ್ಯಾರ್ಜನೆ ನೀಡಿದ ಪೇಜವಾರ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಕೇಶ್ ಭಟ್ ನಮ್ಮ ಗುರುಗಳಾದ ವಿಶ್ವೇಶ ತೀರ್ಥರು ಹಾಗೂ ನಮ್ಮ ಶಿಷ್ಯ, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಕಲಿತವರು. ಅಮೆರಿಕಾದ ಚಿಕಾಗೋದಲ್ಲಿ ಮಾಡಿದ ವೇದಪಠಣ ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಅವರನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ. ರಾಕೇಶ್ ಭಟ್ ಅವರ ವಿದ್ವತ್ತು ಸಾರ್ವಜನಿಕರ ಉಪಯೋಗಕ್ಕೆ ಮತ್ತಷ್ಟು ಬಳಕೆಯಾಗಲಿ ಅವರ ಸಾಧನೆಗಳು ಮತ್ತಷ್ಟು ಬೆಳಗಲಿ ಎಂದು ಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ