newsfirstkannada.com

ಪಾಪಿ ಪಾಕಿಸ್ತಾನ್! ರಾಕೆಟ್​​​​ ಉಡಾಯಿಸಿ ಹಿಂದೂ ದೇಗುಲ ಧ್ವಂಸ; ಎರಡು ದಿನಗಳ ಅಂತರದಲ್ಲಿ ಇದು ಎರಡನೇ ಪ್ರಕರಣ

Share :

17-07-2023

  ಶುಕ್ರವಾರ 150 ವರ್ಷಗಳ ಇತಿಹಾಸವಿರುವ ದೇಗುಲದ ಮೇಲೆ ದಾಳಿ

  ನಿನ್ನೆ ದಕ್ಷಿಣ ಪ್ರಾಂತ​ದಲ್ಲಿರುವ ದೇಗುಲದ ಮೇಲೆ ರಾಕೆಟ್ ದಾಳಿ

  ಪಾಕ್​ನಲ್ಲಿ ಅಲ್ಪಸಂಖ್ಯಾತರ ಮೇಲೆ ಮುಂದುವರಿದ ದಬ್ಬಾಳಿಕೆ

ಪಾಪಿ ಪಾಕಿಸ್ತಾನ ಅಲ್ಲಿರುವ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ಮುಂದುವರಿಸಿದೆ. ಮತ್ತೊಮ್ಮೆ ಪಾಕ್ ನೆಲದಲ್ಲಿರುವ ಐತಿಹಾಸಿಕ ಹಿಂದೂ ದೇವಾಲಯಗಳನ್ನು ಟಾರ್ಗೆಟ್​ ಮಾಡಿರುವ, ಡಕಾಯಿತರ ಗ್ಯಾಂಗ್, ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿರುವ ಹಿಂದೂ ದೇಗುಲದ ಮೇಲೆ ರಾಕೆಟ್ ದಾಳಿ ಮಾಡಿ ಉರುಳಿಸಿದೆ.

ಕೇವಲ ಎರಡು ದಿನಗಳ ಅಂತರದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ ಮಾಡಿರುವ ಎರಡನೇ ಪ್ರಕರಣ ಇದಾಗಿದೆ. ಸಿಂಧ್ ಪ್ರಾಂತದ ಕಶ್ಮೋರ್​​​ನಲ್ಲಿರುವ ಅಲ್ಪಸಂಖ್ಯಾತರು ದೇಗುಲವನ್ನು ನಿರ್ಮಿಸಿಕೊಂಡಿದ್ದರು. ಈ ದೇಗುಲವನ್ನು ರಾಕೆಟ್ ದಾಳಿ ಮೂಲಕ ಉರುಳಿಸಿದ್ದಾರೆ. ರಾಕೆಟ್ ದಾಳಿಗೆ ಒಳಗಾದ ದೇಗುಲವನ್ನು ಬಗ್ರಿ ಸಮುದಾಯ ನೋಡಿಕೊಳ್ಳುತ್ತಿತ್ತು.

ನಿನ್ನೆ ಬೆಳಗ್ಗೆ ದೇಗುಲದ ಮೇಲೆ ದಾಳಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಅಲ್ಲಿಗೆ ಆಗಮಿಸಿದ್ದಾರೆ. ಈ ಬಗ್ಗೆ ತನಿಖೆ ಶುರುವಾಗಿದೆ. ಸುಮಾರು 8 ರಿಂದ 9 ಮಂದಿ ಶಸ್ತ್ರಸಜ್ಜಿತವಾಗಿ ಬಂದು ರಾಕೆಟ್ ದಾಳಿ ನಡೆಸಿ ಪರಾರಿ ಆಗಿದ್ದಾರೆ. ರಾಕೆಟ್ ದಾಳಿಗೆ ಡೆಟೊನೆಟ್ ಬಳಸಿದ್ದಾರೆ. ಯಾವುದೇ ಪ್ರಾಣಪಾಯ ಆಗಿಲ್ಲ ಎಂದು ಬಗ್ರಿ ಸಮುದಾಯದ ಸದಸ್ಯ ಡಾ.ಸುರೇಶ್ ತಿಳಿಸಿದ್ದಾರೆ.

ಕಳೆದ ಶುಕ್ರವಾರ ರಾತ್ರಿ ಕರಾಚಿಯಲ್ಲಿದ್ದ ‘ಮಾರಿ ಮಾತಾ’ ದೇಗುಲದ ಮೇಲೆ ದಾಳಿ ಮಾಡಿದ್ದರು. ಬುಲ್ಡೋಜರ್​ ಮೂಲಕ ದೇಗುಲ ಧ್ವಂಸಕ್ಕೆ ಮುಂದಾಗಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಅಲ್ಲಿನ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು. ಮಾತ್ರವಲ್ಲ, ಈ ದೇಗುಲಕ್ಕೆ ಸರಿಸುಮಾರು 150 ವರ್ಷಗಳ ಇತಿಹಾಸ ಇದೆ. ಆದರೆ, ದೇಗುಲವು ಕೆಲ ವಿಕೃತಿ ಮನಸ್ಸುಗಳಿಂದಾಗಿ ಅಪಾಯಕ್ಕೆ ಸಿಲುಕಿದೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಪಿ ಪಾಕಿಸ್ತಾನ್! ರಾಕೆಟ್​​​​ ಉಡಾಯಿಸಿ ಹಿಂದೂ ದೇಗುಲ ಧ್ವಂಸ; ಎರಡು ದಿನಗಳ ಅಂತರದಲ್ಲಿ ಇದು ಎರಡನೇ ಪ್ರಕರಣ

https://newsfirstlive.com/wp-content/uploads/2023/07/PHDEXAM.jpg

Load More