36 ವರ್ಷದ ವ್ಯಕ್ತಿಯಿಂದ ಸೌಹಾರ್ದ ಕದಡುವ ಕೆಲಸ
ಆರೋಪಿಯನ್ನು ಚೇಸ್ ಮಾಡಿ ಹಿಡಿದ ಪೊಲೀಸರು
ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿ ಏನು..?
ಬಾಂಗ್ಲಾದೇಶದ ಬ್ರಹ್ಮನ್ಬರಿಯಾ ಜಿಲ್ಲೆಯ ಹಿಂದೂ ದೇಗುಲದಲ್ಲಿದ್ದ ದೇವತೆಯ ವಿಗ್ರಹಗಳನ್ನು ಧ್ವಂಸ ಮಾಡಲಾಗಿದೆ. 36 ವರ್ಷದ ವ್ಯಕ್ತಿ ಈ ಕೃತ್ಯ ಮಾಡಿದ್ದು ಸದ್ಯ ಆತನನ್ನು ಹೆಡೆಮುರಿ ಕಟ್ಟಲಾಗಿದೆ.
ಕಳೆದ ಗುರುವಾರ ರಾತ್ರಿ ದೇವಾಲಯದ ಮೇಲೆ ದಾಳಿ ಮಾಡಿ, ದೇವರ ವಿಗ್ರಹಗಳನ್ನು ಒಡೆದು ಹಾಕಿದ್ದಾನೆ. ನಿಯಮತ್ ಪುರ್ ದುರ್ಗಾ ದೇವಾಲಯ ದಾಳಿಗೆ ಒಳಗಾಗಿದ್ದು, ಅಲ್ಲಿದ್ದ ಕಾಳಿ ಮಾತೆಯ ವಿಗ್ರಹವನ್ನು ವಿರೂಪಗೊಳಿಸಿದ್ದಾನೆ.
ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಕೆಲವರು, ಆರೋಪಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಆರೋಪಿಯನ್ನು ಚೇಸ್ ಮಾಡಿ ಹಿಡಿದಿದ್ದಾರೆ. ಪೊಲೀಸ್ ಅಧಿಕಾರಿ ಮೊಹಮ್ಮದ್ ಶೇಖವಾತ್ ಹುಸೈನ್ ನೀಡಿರುವ ಮಾಹಿತಿ ಪ್ರಕಾರ, ಕಾಳೆ ಮಾತೆಯ ವಿಗ್ರಹವನ್ನು ವಿರೂಪಗೊಳಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಇದರ ಹಿಂದೆ ಯಾರೆಲ್ಲ ಇದ್ದಾರೆ, ಯಾಕೆ ಆತ ಹಾಗೆ ಮಾಡಿದ ಅನ್ನೋದನ್ನು ನಾವು ಬಹಿರಂಗ ಪಡಿಸಲು ಆಗಲ್ಲ. ಎಲ್ಲವೂ ತನಿಖಾ ಹಂತದಲ್ಲಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ