ಅಮೆರಿಕಾದ ನ್ಯೂಯಾರ್ಕ್ನಲ್ಲಿ ಶ್ರೀ ಸ್ವಾಮಿ ನಾರಾಯಣ ಮಂದಿರ ಧ್ವಂಸ
ಕಿಡಿಗೇಡಿಗಳ ಕೃತ್ಯದ ವಿರುದ್ಧ ಸಿಡಿದೆದ್ದ ಅಮೆರಿಕಾ ನಿವಾಸಿ ಹಿಂದೂಗಳು
ಕೂಡಲೇ ಕಠಿಣ ಕ್ರಮಕ್ಕೆ ಆಗ್ರಹ,ಕೃತ್ಯದಲ್ಲಿ ಖಲಿಸ್ತಾನಿ ಉಗ್ರರ ಕೈವಾಡದ ಶಂಕೆ
ನ್ಯೂಯಾರ್ಕ್ನ ಮೆಲ್ವಿಲ್ಲೆನಲ್ಲಿರುವ ಬಾಪ್ಸ್ ಶ್ರೀ ಸ್ವಾಮಿ ನಾರಾಯಣ ಮಂದಿರದ ಮೇಲೆ ಕಿಡಿಗೇಡಿಗಳು ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಇಂಡಿಯನ್ ನ್ಯೂಯಾರ್ಕ್ ಇದೊಂದು ಅತ್ಯಂತ ಹೀನವಾದ ಕೃತ್ಯ. ಬಾಪ್ಸ್ ಶ್ರೀಸ್ವಾಮಿ ನಾರಾಯಣ ಮಂದಿರ ಧ್ವಂಸವನ್ನು ಯಾರೂ ಕೂಡ ಒಪ್ಪಲಾರರು. ಹಿಂದೂ ಸಮುದಾಯದೊಂದಿಗೆ ಇಂಡಿಯನ್ ನ್ಯೂಯಾರ್ಕ್ ಈಗಾಗಲೇ ಸಂಪರ್ಕವನ್ನು ಹೊಂದಿದೆ. ನಡೆದ ದುರ್ಘಟನೆಯನ್ನು ಅಮೆರಿಕಾದ ಕಾನೂನು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: Modi birthday: ಮೋದಿಗೆ ಸಿಕ್ಕ ಉಡುಗೊರೆಗಳ ಹರಾಜು ಇಂದು; ಬಂದ ಹಣವನ್ನು ಏನು ಮಾಡ್ತಾರೆ ಗೊತ್ತಾ?
The @TheJusticeDept & @DHSgov must investigate this attack on the @BAPS Hindu temple in Melville, NY shared by @OnTheNewsBeat after recent threats to Hindu institutions as a large Indian community gathering is planned in nearby Nassau County this weekend.
pic.twitter.com/S52x8yPNs8— Hindu American Foundation (@HinduAmerican) September 16, 2024
ಇನ್ನು ಬಾಪ್ಸ್ ಸ್ವಾಮಿ ನಾರಾಯಣ ಸಂಸ್ಥೆಯೂ ಕೂಡ ಮಂದಿರ ಧ್ವಂಸದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಒಂದು ಘಟನೆಯಿಂದ ಅತ್ಯಂತ ನೋವಾಗಿದೆ. ಇದು ಹಿಂದೂಗಳ ಮೇಲಿ ದ್ವೇಷವನ್ನು ಸಾರಿ ಹೇಳುತ್ತಿದೆ. ಇಂದು ಸ್ಥಳೀಯರು, ರಾಜ್ಯ ಹಾಗೂ ದೇಶದಲ್ಲಿರುವ ಸಮುದಾಯದವರೆಲ್ಲಾ ಸೇರಿ ಶಾಂತಿ ಗೌರವ ಹಾಗೂ ಒಗ್ಗಟ್ಟುತನದ ಸಂದೇಶವನ್ನ ಸಾರಿದ್ದೇವೆ ಎಂದು ಹೇಳಿದೆ.
ನ್ಯೂಯಾರ್ಕ್ನಲ್ಲಿ ಬಾಪ್ಸ್ ಶ್ರಿಸ್ವಾಮಿ ನಾರಾಯಣ ಮಂದಿರ ಧ್ವಂಸವನ್ನು ಇಡೀ ಅಮೆರಿಕಾದಲ್ಲಿರುವ ಹಿಂದೂಗಳು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ಹಿಂದೂ ಅಮೆರಿಕನ್ ಫೌಂಡೇಶನ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು. ಟ್ವೀಟ್ನಲ್ಲಿ ಬಾಪ್ಸ್ ಶ್ರೀ ಸ್ವಾಮಿ ನಾರಾಯಣ ಮಂದಿರದ ಗೋಡೆ ಹಾಗೂ ರಸ್ತೆಯ ಮೇಲೆ ಕಿಡಿಗೇಡಿಗಳು ಬರೆದ ಭಾರತೀಯ ವಿರೋಧಿ ಬರಹಗಳ ವಿಡಿಯೋವನ್ನು ಪೋಸ್ಟ್ ಮಾಡಿದೆ.
ಇದನ್ನೂ ಓದಿ: ಶಕೀರಾ ಸೊಂಟ ಬಳಕುವಾಗ ಎಡವಟ್ಟು.. ವೇದಿಕೆ ಮೇಲೆ ಭಾರೀ ಮುಜುಗರ; ವಿಡಿಯೋ ವೈರಲ್!
ಕೆಲವು ದಿನಗಳ ಹಿಂದಷ್ಟೇ ಖಲಿಸ್ತಾನ್ ಉಗ್ರ ಗುರುಪಂತ್ವ ಸಿಂಗ್ ಪನ್ನು ಹಿಂದೂ ದೇವಾಲಯ ಹಾಗೂ ಸಂಸ್ಥೆಗಳಿಗೆ ಇರುವ ಬೆದರಿಕೆಯ ವಿಡಿಯೋಗಳನ್ನು ಹಂಚಿಕೊಂಡಿದ್ದ. ಸದ್ಯ ನ್ಯೂಯಾರ್ಕ್ನಲ್ಲಿ ಸ್ವಾಮಿ ನಾರಾಯಣ ದೇವಾಲಯದ ಮೇಲೆ ನಡೆದ ದಾಳಿಯೂ ಕೂಡ ಕ್ಯಾಲಿಫೋರ್ನಿಯಾ ಹಾಗೂ ಕೆನಡಾದಲ್ಲಿ ನಡೆದ ಮಾದರಿಯಲ್ಲಿಯೇ ನಡೆದಿದೆ. ಇದರ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡವಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ