newsfirstkannada.com

‘ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು, ಮೊದಲು ಮುಸ್ಲಿಮರು ಹಿಂದೂಗಳಾಗಿದ್ದರು’; ಗುಲಾಂ ನಬಿ ಆಜಾದ್

Share :

18-08-2023

    ಭಾರತದ ಮುಸ್ಲಿಮರು ಮೂಲತಃ ಹಿಂದೂಗಳು-ಆಜಾದ್

    ಕಾಶ್ಮೀರದಲ್ಲಿ 600 ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರು ಮಾತ್ರ ಇದ್ದರು

    ಇಸ್ಲಾಂ ಹುಟ್ಟಿದ್ದು 1500 ವರ್ಷಗಳ ಹಿಂದೆ, ಎಲ್ಲರೂ ಭಾರತದವರೇ

ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು, ಮೊದಲು ಮುಸ್ಲಿಮರು ಹಿಂದೂಗಳಾಗಿದ್ದರು ಎಂಬ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಇಸ್ಲಾಂ ಹುಟ್ಟಿದ್ದು 1500 ವರ್ಷಗಳ ಹಿಂದೆ, ಎಲ್ಲರೂ ಭಾರತದವರೆ ಯಾರೂ ಹೊರಗಿನವರಲ್ಲ, ನಾವೆಲ್ಲರೂ ಈ ದೇಶಕ್ಕೆ ಸೇರಿದವರು, ಭಾರತದ ಮುಸ್ಲಿಮರು ಮೂಲತಃ ಹಿಂದೂಗಳು, ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು ಎಂದಿದ್ದಾರೆ.

600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಮಾತ್ರ ಇದ್ದರು ಎಂದು ಹೇಳುತ್ತಾರೆ, ನಂತರ ಜನರು ಮತಾಂತರಗೊಂಡು ಮುಸ್ಲಿಮರಾದರು. ಜನರು ಸಹೋದರತೆ, ಶಾಂತಿ, ಐಕ್ಯತೆಯನ್ನು ಕಾಪಾಡುವಂತೆ ಮನವಿ ಮಾಡಿದ ಆಜಾದ್, ರಾಜಕೀಯದೊಂದಿಗೆ ಧರ್ಮವನ್ನು ಬೆರೆಸಬಾರದು, ಜನರು ಧರ್ಮದ ಹೆಸರಿನಲ್ಲಿ ಮತ ಹಾಕಬಾರದು ಎಂದು ಹೇಳಿದರು.

ಬಳಿಕ ಮಾತನಾಡಿದ ಅವರು, ಹಿಂದೂಗಳು ಸತ್ತಾಗ ಅವರನ್ನು ಸುಡುತ್ತಾರೆ. ವಿವಿಧ ಸ್ಥಳಗಳಲ್ಲಿ ಸುಡುತ್ತಾರೆ. ಅವರ ಚಿತಭಸ್ಮವನ್ನು ನೀರಲ್ಲಿ ಬಿಡುತ್ತಾರೆ. ಆ ನೀರನ್ನು ನಾವು ಕುಡಿಯುತ್ತೇವೆ. ನೀರಿನಲ್ಲಿ ಸುಟ್ಟ ಬೂದಿ ಇರುವುದು ಯಾರು ನೋಡುತ್ತಾರೆ? ಜನರು ಅದನ್ನು ಕುಡಿಯುತ್ತಾರೆ ಎಂದು ಹೇಳಿದ್ದಾರೆ.

ಅದೇ ರೀತಿ ಮುಸ್ಮಿಂಮರ ಮಾಂಸ ಮತ್ತು ಮೂಳೆ ರಾಷ್ಟ್ರದ ಮಣ್ಣಿನ ಭಾಗವಾಗುತ್ತದೆ. ಅವರು ಕೂಡ ನೆಲ ಮಣ್ಣಿನ ಭಾಗವಾಗುತ್ತದೆ. ಭಾರತ ಮಾತೆಯ ಮಣ್ಣಿನ ಭಾಗವಾಗುತ್ತಾರೆ. ಹಿಂದೂ ಮತ್ತು ಮುಸ್ಲಿಂಮರು ಈ ನೆಲದಲ್ಲಿ ವಿಲೀನಗೊಳ್ಳುತ್ತಾರೆ. ಅವರ ನಡುವೆ ಏನು ವ್ಯತ್ಯಾಸವಿದೆ? ಎಂದು ಗುಲಾಂ ನಬಿ ಅಜಾದ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು, ಮೊದಲು ಮುಸ್ಲಿಮರು ಹಿಂದೂಗಳಾಗಿದ್ದರು’; ಗುಲಾಂ ನಬಿ ಆಜಾದ್

https://newsfirstlive.com/wp-content/uploads/2023/08/Ghulam-Azad-1.jpg

Load More