ಹೊಸ ಸಂಸತ್ ಕಟ್ಟಡಕ್ಕೆ ಈ ರಾಜದಂಡವೇ ಯಾಕೆ?
ಚೋಳರ ಸಾಮ್ರಾಜ್ಯದ ಸೆಂಗೊಲ್ ಅಂದ್ರೆ ಏನು..?
ಸ್ವಾತಂತ್ರ್ಯ ಸಿಗೋ 15 ನಿಮಿಷಗಳ ಮೊದಲು ಸ್ವೀಕಾರ
ತಮಿಳುನಾಡಿನ ಐತಿಹಾಸಿಕ ರಾಜದಂಡವಾದ ‘ಸೆಂಗೊಲ್’ ಬಗ್ಗೆ ಇವತ್ತು ದೇಶಾದ್ಯಂತ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ನೂತನ ಸಂಸತ್ ಭವನ ಉದ್ಘಾಟನೆ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಸುದ್ದಿಗೋಷ್ಟಿ ನಡೆಸಿದ್ದರು. ಈ ವೇಳೆ ಮಾತನಾಡಿದ ಕೇಂದ್ರ ಸಚಿವರು, ಬ್ರಿಟಿಷರಿಂದ ಅಧಿಕಾರ ಹಸ್ತಾಂತರವನ್ನು ಪ್ರತಿನಿಧಿಸಲು ಅಂದಿನ ಪ್ರಧಾನಿ ನೆಹರು ಸ್ವೀಕರಿಸಿದ್ದ ‘ಸೆಂಗೊಲ್’ ಅನ್ನು ನೂತನ ಸಂಸತ್ ಭವನದಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಅಮಿತ್ ಶಾ ಈ ಹೇಳಿಕೆ ಬೆನ್ನಲ್ಲೇ ರಾಜದಂಡ ‘ಸೆಂಗೊಲ್’ ಬಗ್ಗೆ ಚರ್ಚೆಗಳು ಶುರುವಾಗಿವೆ.
ಅಮಿತ್ ಶಾ ಕೊಟ್ಟ ಮಾಹಿತಿ ಏನು..?
ಐತಿಹಾಸಿಕ ರಾಜದಂಡವಾದ ‘ಸೆಂಗೊಲ್’ ಅನ್ನು ಅಲಹಾಬಾದ್‌ನ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಮೇ 28 ರಂದು ಪ್ರಧಾನಿ ಮೋದಿ ನೂತನ ಸಂಸತ್ ಭವನ ಉದ್ಘಾಟಿಸ್ತಿದ್ದಾರೆ. ಈ ವೇಳೆ ಈ ರಾಜದಂಡವನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಅಮಿತ್ ಶಾ ಅವರ ಸ್ಟೇಟ್ಮೆಂಟ್ ಬೆನ್ನಲ್ಲೇ, ಅದನ್ನು ಯಾಕೆ ಸ್ಥಾಪಿಸಲಾಗ್ತಿದೆ, ಉದ್ದೇಶ ಏನು? ಅದನ್ನು ಬ್ರಿಟಿಷರು ನೆಹರುಗೆ ಯಾಕೆ ನೀಡಿದರು ಅನ್ನೋ ಚರ್ಚೆಗಳು ಶುರುವಾಗಿವೆ.
ಏನ್ ಹೇಳ್ತಿದೆ ಇತಿಹಾಸ..?
‘ಸೆಂಗೊಲ್’: ದೇಶದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಸಾಹತುಶಾಹಿ ಆಡಳಿತದ ಅಂತ್ಯ ಮತ್ತು ಭಾರತಿಯರಿಗೆ ಅಧಿಕಾರವನ್ನು ಹಸ್ತಾಂತರ ಮಾಡಿರೋದನ್ನು ಸಂಕೇತಿಸುತ್ತದೆ. ಅಂದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರೋದನ್ನು ಪ್ರತಿನಿಧಿಸುತ್ತದೆ. ಬ್ರಿಟಿಷರು ಭಾರತವನ್ನು ಬಿಟ್ಟುಹೋಗುವಾಗ ಅಂದಿನ ಪ್ರಧಾನಿ ನೆಹರುಗೆ ಮೌಂಟ್ ಬ್ಯಾಟನ್ ಇದನ್ನು ಹಸ್ತಾಂತರ ಮಾಡಿದ್ದರು.
ಸೆಂಗೊಲ್ ಅಂದ್ರೆ ಏನು..?
‘ಸೆಂಗೊಲ್’ (ರಾಜದಂಡ) ಮೂಲತಃ ತಮಿಳು ಪದವಾಗಿದ್ದು, ತಮಿಳಿನಲ್ಲಿ ಸೆಂಗೊಲ್ ಅಂದರೆ ‘ಧರ್ಮ’ ಎಂದರ್ಥ. ಈ ‘ರಾಜದಂಡ’ವನ್ನು ಒಬ್ಬ ವ್ಯಕ್ತಿಗೆ ವಹಿಸಿದರೆ ಅದನ್ನು ಸ್ವೀಕರಿಸಿದೋರು ನ್ಯಾಯಯುತ ಮತ್ತು ನಿಷ್ಪಕ್ಷಪಾತ ಆಡಳಿತವನ್ನು ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಈ ವಿಚಾರವನ್ನು ಚೋಳ ಸಾಮ್ರಾಜ್ಯದಲ್ಲಿ ಹೊಸ ರಾಜನ ಪಟ್ಟಾಭಿಷೇಕದ ವೇಳೆ ರಾಜಗೋಪಾಲಾಚಾರಿ ನೆಹರುಗೆ ತಿಳಿಸಿದ್ದರಂತೆ. ‘ಹೊಸ ರಾಜನು ಅರ್ಚಕರಿಂದ ‘ರಾಜದಂಡ’ವನ್ನು ಸ್ವೀಕರಿಸುವ ಪರಂಪರೆ ಇದೆ. ಅದರಂತೆ ನೀವು ಕೂಡ ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರ ಪಡೆದ ಸಂಕೇತವಾಗಿ ‘ರಾಜದಂಡ’ವನ್ನು ಸ್ವೀಕರಿಸಬೇಕು ಎಂದಿದ್ದರಂತೆ. ಅದರಂತೆ ನೆಹರು, ಮೌಂಟ್ ಬ್ಯಾಟನ್ರಿಂದ ಈ ಸೆಂಗೊಲ್ ಅನ್ನು ಸ್ವೀಕಾರ ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ.
ಆಗಸ್ಟ್ 15 ಬರುವ 15 ನಿಮಿಷಗಳ ಮೊದಲು ಸ್ವೀಕಾರ..!
ಇನ್ನು ಈ ‘ರಾಜದಂಡ’ವು ಚಿನ್ನದಿಂದ ಮಾಡಲಾಗಿದ್ದು, ಅದರ ಮೇಲೆ ನಂದಿ ಮೂರ್ತಿ ಇದೆ. ಇದನ್ನು ವ್ಯಾಪಾರಿ ವುಮ್ಮಿಡಿ ಬಂಗಾರು ಚೆಟ್ಟಿ ಅನ್ನೋರು ನಿರ್ಮಿಸಿದ್ದಾರೆ. ಸೆಂಗೊಲ್ಅನ್ನು ನೆಹರು ಸ್ವೀಕರಿಸುವ ಮೊದಲ ಅರ್ಚಕರು ಪಡೆದುಕೊಂಡಿದ್ದರು. ಅರ್ಚಕರು ಈ ರಾಜದಂಡವನ್ನು ಗಂಗಾ ಜಲದಿಂದ ಶುದ್ದೀಕರಿಸಿ, ಲಾರ್ಡ್ ಮೌಂಟ್ ಬ್ಯಾಟನ್ಗೆ ಹಸ್ತಾಂತರ ಮಾಡಿದ್ದರು. ಆಗಸ್ಟ್ 15 ಬರುವ 15 ನಿಮಿಷಗಳ ಮೊದಲು ಮೌಂಟ್ ಬ್ಯಾಟನ್ ನೆಹರು ಅವರಿಗೆ ಸ್ವಾತಂತ್ಯ ನೀಡಿದ ಸಂಕೇತವಾಗಿ ನೀಡಿದ್ದರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ