newsfirstkannada.com

ಈತ ಸಾಮಾನ್ಯನಲ್ಲ.. IPL ಇತಿಹಾಸದಲ್ಲೇ ಆ್ಯಕ್ಷನ್​ಗೆ ಬರದೆ, ಎಲ್ಲಾ ಸೀಸನ್​ ಆಡಿರುವ ಸರದಾರನೀತ! ಯಾರೀತ?

Share :

12-07-2023

    ಈ ಅಂಡರ್​ 19 ಆಟಗಾರರನ್ನ ಡ್ರಾಫ್ಟ್​ ಮೂಲಕ ಖರೀದಿಸಲಾಯ್ತು

    ಆರಂಭದಲ್ಲಿ ಡೆಲ್ಲಿ ಡೇರ್​ ಡೆವಿಲ್ಸ್​​ ಕೊಹ್ಲಿ ಮೇಲೆ ಆಸಕ್ತಿ ತೋರಿತ್ತು

    ಐಪಿಎಲ್​ಗಾಗಿ ಆರ್​ಸಿಬಿ ಈತನಿಗೆ ಮಣೆ ಹಾಕಿದ್ಯಾಕೆ?

ಐಪಿಎಲ್​ ಇತಿಹಾಸದಲ್ಲೆ ಆ್ಯಕ್ಷನ್​ಗೇ​ ಬರದೇ, ಸತತವಾಗಿ ಎಲ್ಲಾ ಸೀಸನ್​ನಲ್ಲೂ ಆಡಿರುವ ಆಟಗಾರ ಯಾರು ಅಂತಾ ನಿಮಗೆ ಗೊತ್ತಾ.? ಈತ ಸಾಮಾನ್ಯದ ಆಟಗಾರನಲ್ಲ. ದಾಖಲೆಗಳ ಸರದಾರ. ವಿಶ್ವ ಕ್ರಿಕೆಟ್​ ಲೋಕದ ಅಧಿಪತಿ. ಯಾರಪ್ಪ ಇದು.? ಅನ್ನೋ ನಿಮ್ಮ ಕುತೂಹಲ ಇದ್ರೆ ಈ ಸ್ಟೋರಿ ಓದಿ.

ಮಿಲಿಯನ್​ ಡಾಲರ್​ ಟೂರ್ನಿ, ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭವಾಗಿ 16 ವರ್ಷಗಳು ಕಳೆದಿದೆ. ಎಷ್ಟೋ ಆಟಗಾರರು ಬಂದಿದ್ದಾರೆ, ಹೋಗಿದ್ದಾರೆ. ಕೆಲವರು ನಿವೃತ್ತಿಯಾಗಿ ಈಗ ಕಾಮೆಂಟೇಟರ್​ ಆಗಿದ್ದಾರೆ. ಆದ್ರೆ, ಈ ಸ್ಪೆಷಲ್​​ ಪ್ಲೇಯರ್​ ಕನ್ಸಿಸ್ಟೆಂಟ್​ ಆಗಿ 16 ವರ್ಷದಿಂದ ಐಪಿಎಲ್​ ಆಡುತ್ತಲೇ ಬಂದಿದ್ದಾನೆ. ಐಪಿಎಲ್​ನಲ್ಲಿ ಆರ್ಭಟಿಸಿ, ಘರ್ಜಿಸಿ ದಾಖಲೆಯ ಸರದಾರನಾಗಿ ಮರೆದಾಡಿರೋ ಈ ಆಟಗಾರನ ಹೆಸರು ಈವರೆಗೆ ಆಕ್ಷನ್​ ಟೇಬಲ್​ನಲ್ಲಿ ಬಂದೇ ಇಲ್ಲ. ಆ ಆಟಗಾರ ಬೇರಾರೂ ಅಲ್ಲ. ಒನ್​ ಆ್ಯಂಡ್​ ಒನ್ಲಿ ಕಿಂಗ್​ ಕೊಹ್ಲಿ.

2008ರಲ್ಲಿ ಐಪಿಎಲ್​ ಆರಂಭವಾದಾಗ ಅಂಡರ್​ 19 ಆಟಗಾರರನ್ನ ಡ್ರಾಫ್ಟ್​ ಮೂಲಕ ಖರೀದಿಸಲಾಯ್ತು. ಆರಂಭದಲ್ಲಿ ಡೆಲ್ಲಿ ಡೇರ್​ ಡೆವಿಲ್ಸ್​​ ಕೊಹ್ಲಿ ಮೇಲೆ ಆಸಕ್ತಿ ತೋರಿತ್ತು. ಆದರೆ, ಬೌಲಿಂಗ್​ ಅಟ್ಯಾಕ್​ ಬಲಿಷ್ಠ ಪಡಿಸೋ ಲೆಕ್ಕಾಚಾರದಲ್ಲಿ ಲೆಫ್ಟ್​ ಪೇಸರ್​ ಪ್ರದೀಪ್​ ಸಂಗ್ವಾನ್​ರನ್ನ ಖರೀದಿಸ್ತು. ಅಂತಿಮವಾಗಿ ಆರ್​ಸಿಬಿ ಯಂಗ್​ ವಿರಾಟ್​ ಕೊಹ್ಲಿಗೆ ಮಣೆ ಹಾಕಿತು. ಅಂದು ಆರ್​ಸಿಬಿಗೆ ಎಂಟ್ರಿ ಕೊಟ್ಟ ಕೊಹ್ಲಿ ತಿರುಗಿ ನೋಡಿದ್ದೆ ಇಲ್ಲ.

ಕೊಹ್ಲಿ ಆರ್​ಸಿಬಿ ಆಟಗಾರನಾಗಿ, ನಾಯಕನಾಗಿ ಗೆಲ್ಲಿಸಿಕೊಟ್ಟ ಪಂದ್ಯಗಳಿಗೆ ಲೆಕ್ಕವೇ ಇಲ್ಲ. ಸಾಮಾನ್ಯ ಆಟಗಾರನಾಗಿ ಆರ್​​ಸಿಬಿ ಸೇರಿದ ಕೊಹ್ಲಿ, ಈಗ ಆರ್​​ಸಿಬಿ ಪಾಲಿನ ಎಲ್ಲವೂ ಆಗಿದ್ದಾರೆ. ಅಭಿಮಾನಿಗಳ ಮನದಲ್ಲಿ ಕಿಂಗ್​ ಪಟ್ಟ ಅಲಂಕರಿಸಿದ್ದಾರೆ. ಫ್ಯಾನ್ಸ್​ ಪಾಲಿಗೆ ಆರ್​​ಸಿಬಿ ಕೊಹ್ಲಿ, ಕೊಹ್ಲಿ ಅಂದ್ರೆ ಆರ್​​ಸಿಬಿ ಎಂಬಂತಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಈತ ಸಾಮಾನ್ಯನಲ್ಲ.. IPL ಇತಿಹಾಸದಲ್ಲೇ ಆ್ಯಕ್ಷನ್​ಗೆ ಬರದೆ, ಎಲ್ಲಾ ಸೀಸನ್​ ಆಡಿರುವ ಸರದಾರನೀತ! ಯಾರೀತ?

https://newsfirstlive.com/wp-content/uploads/2023/07/IPL2023.jpg

Load More