newsfirstkannada.com

×

ಟಿಪ್ಪುವಿನಿಂದ ವಿಕ್ಟೋರಿಯಾ ರಾಣಿವರೆಗೂ; ಮೈಸೂರು ಸಿಲ್ಕ್​ ಸೀರೆ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು?

Share :

Published September 17, 2024 at 11:38pm

    ಮೈಸೂರಿಗೆ ಮೊದಲು ರೇಷ್ಮೆಯನ್ನು ಪರಿಚಯಿಸಿದ್ದು ಟಿಪ್ಪು ಸುಲ್ತಾನ್!

    ಸ್ವಿಟ್ಜರ್ಲ್ಯಾಂಡ್‌ನಿಂದ ಹ್ಯಾಂಡ್‌ಲೂಮ್‌ ತರಿಸಿದ ಮೈಸೂರು ಒಡೆಯರ್

    ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್‌ ಕಾರ್ಪೊರೇಶನ್‌ ಸ್ಥಾಪನೆ ಹೇಗಾಯ್ತು?

ಹೆಣ್ಣಿಗೆ ಸೀರೆ ಯಾಕೆ ಅಂದ.. ಅಂದ ಚಂದ ಸೀರೆಯಲ್ಲಿ ಅಡಗಿರೋದ್ರಿಂದ. ಅಬ್ಬಾ.. ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸೀರೆ ಎಂದರೆ ಪಂಚಪ್ರಾಣ. ಅದ್ರಲ್ಲೂ ರೇಷ್ಮೆ ಸೀರೆ ಇದ್ದರೆ, ಮಹಿಳೆಯರ ಪಾಲಿಗೆ ದೇವಲೋಕದ ಅಪ್ಸರೆಯೇ ಧರೆಗಿಳಿದಂತಾಗುತ್ತೆ.

ನಮ್ಮ ಮೈಸೂರು ಸಿಲ್ಕ್ ಸೀರೆ, ಪ್ರಾಚೀನವಾದ ಪಾರಂಪರಿಕ ಉಡುಪಿನ ಪ್ರತೀಕವಾಗಿದೆ. ಇತ್ತೀಚಿನ ದಿನಗಳಲ್ಲಿ ವಿದೇಶಿಗರೂ ಮೈಸೂರು ಸಿಲ್ಕ್‌ ಸೀರೆಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಮೈಸೂರು ಸಿಲ್ಕ್ ಸೀರೆಗಳಿಗೆ ವಿದೇಶಗಳಲ್ಲಿ ಜನಪ್ರಿಯತೆಯನ್ನು ತಂದುಕೊಡುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿಯೂ ಸೀರೆ ಉಡುಗೆಗೆ ಮಹತ್ವದ ಸ್ಥಾನವಿದೆ. ಶುಭಕಾರ್ಯಗಳಲ್ಲಿ ಮಹಿಳೆಯರು ರೇಷ್ಮೆ ಸೀರೆ ಉಡುಪಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ.

ಮೈಸೂರು ಸಿಲ್ಕ್ ಸೀರೆಯ ಇತಿಹಾಸವೇನು?
ಮೈಸೂರು ರಾಜ್ಯದಲ್ಲಿ ಮೊದಲಿಗೆ ಟಿಪ್ಪು ಸುಲ್ತಾನ್ ರೇಷ್ಮೆಯನ್ನು ಪರಿಚಯಿಸಿದರೆ, ಅದನ್ನು ಉದ್ಯಮವಾಗಿ ಬೆಳೆಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಮೈಸೂರು ರೇಷ್ಮೆ ಸೀರೆ ಇಡೀ ಜಗತ್ತಿಗೆ ಪರಿಚಯವಾಗಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಆಡಳಿತದಿಂದಾಗಿ. 1780-1790ರ ನಡುವೆ ಮೈಸೂರು ಸಿಲ್ಕ್ ಸೀರೆ ತಯಾರಿಕೆಯನ್ನು ಟಿಪ್ಪು ಸುಲ್ತಾನ್ ಮಾಡಿದರು. ಆದರೆ ನಂತರ ವಿದೇಶಿ ಬಟ್ಟೆಗಳ ಜನಪ್ರಿಯತೆಯಿಂದಾಗಿ ಮೈಸೂರು ಸಿಲ್ಕ್ ಕುಗ್ಗಿತು. ಆ ನಂತರ ಮೈಸೂರು ಅರಸರ ಆಳ್ವಿಕೆಯಲ್ಲಿ ಮೈಸೂರು ಸಿಲ್ಕ್ ಮತ್ತೆ ಜನಪ್ರಿಯತೆಯ ಶಿಖರ ತಲುಪಿತು.

ಇದನ್ನೂ ಓದಿ: ನಂಗೂ ಬೇಕು.. ನಂಗೂ ಬೇಕು; ಮೈಸೂರು ಸಿಲ್ಕ್​​ ಸೀರೆಗಳಿಗೆ ಮುಗಿಬಿದ್ದ ನಾರಿಯರು; ಸಿಗ್ತಾ ಇಲ್ಲ ಯಾಕೆ? 

1912ರಲ್ಲಿ ಮೈಸೂರು ಸಿಲ್ಕ್ ಫ್ಯಾಕ್ಟರಿ ಆರಂಭವಾಯಿತು. 1932ರಲ್ಲಿ ಮೈಸೂರಿನ ಮಹಾರಾಜರ ಆಸಕ್ತಿ ಹಾಗೂ ನೆರವಿನಿಂದ ಬೃಹತ್ ತಯಾರಿಕೆಗೆ ಚಾಲನೆ ನೀಡಲಾಯಿತು. ಮಹಾರಾಜರು ಸ್ವಿಟ್ಜರ್ಲ್ಯಾಂಡ್‌ನಿಂದ 32 ಹ್ಯಾಂಡ್‌ಲೂಮ್‌ಗಳನ್ನು ಆಮದು ಮಾಡಿದ್ದರು. ಇದು ಭಾರತದಲ್ಲಿ ಪ್ರಥಮ ಬಾರಿಗೆ ನಡೆಯಿತು.

1912ರಲ್ಲಿ ಬ್ರಿಟನ್‌ನಲ್ಲಿ ರಾಣಿ ವಿಕ್ಟೋರಿಯ ಅವರ ಪಟ್ಟಾಭಿಷೇಕದ ಸಮಯದಲ್ಲಿ ಮಹಾರಾಜರು ಯಂತ್ರ-ನಿರ್ಮಿತ ರೇಷ್ಮೆ ವಸ್ತ್ರಗಳನ್ನು ನೋಡಿ, ಮೈಸೂರಿನಲ್ಲಿ ಇಂತಹದೇ ತಯಾರಿಕೆಯನ್ನು ಆರಂಭಿಸಲು ಪ್ರೇರಿತರಾದರು. ಅದರಿಂದಾಗಿ ಮೈಸೂರು ಸಿಲ್ಕ್ ಕಾರ್ಖಾನೆಗೆ ಪುನಃ ಜನಪ್ರಿಯತೆಯನ್ನು ತಂದುಕೊಟ್ಟರು.

ಇದನ್ನೂ ಓದಿ: ಮೈಸೂರು ಸಿಲ್ಕ್ ಸೀರೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್.. ಕ್ಯೂ ನಿಂತರೂ ಸಿಗುತ್ತಿಲ್ಲ ಸ್ಯಾರಿ; ಕಾರಣವೇನು?

ಆರಂಭದಲ್ಲಿ, ಮೈಸೂರು ಸಿಲ್ಕ್ ಸೀರೆಯನ್ನು ಕೇವಲ ರಾಜಮನೆತನ ಹಾಗೂ ಪ್ರಭುಗಳಿಗೆ ಮಾತ್ರ ಮೀಸಲಾಗಿತ್ತು. ಆದರೆ ಸ್ವಾತಂತ್ರ್ಯಾನಂತರ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್‌ ಕಾರ್ಪೊರೇಶನ್‌ ಸ್ಥಾಪನೆಯಾಗಿ, ವಿಶ್ವಬ್ಯಾಂಕ್‌ನ ಸಹಾಯದಿಂದ ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಮೈಸೂರು ಸಿಲ್ಕ್ ಜನಪ್ರಿಯತೆ ಹೆಚ್ಚಿತು.

ಮೈಸೂರು ರೇಷ್ಮೆ ಸೀರೆಗಳು ಶುದ್ಧ ಚಿನ್ನದ ಜರಿಯಿಂದ ಅಲಂಕೃತವಾಗಿರುವ ಇವು ಪಾರದರ್ಶಕತೆಯೊಂದಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಇದು ಕೇವಲ 115 ಬಗೆಯ 300ಕ್ಕೂ ಹೆಚ್ಚು ಮಾದರಿಗಳಲ್ಲಿ ಲಭ್ಯವಿದ್ದು, ವಿಶಿಷ್ಟ ವಿನ್ಯಾಸಗಳೊಂದಿಗೆ ಹೆಸರುವಾಸಿಯಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿಪ್ಪುವಿನಿಂದ ವಿಕ್ಟೋರಿಯಾ ರಾಣಿವರೆಗೂ; ಮೈಸೂರು ಸಿಲ್ಕ್​ ಸೀರೆ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು?

https://newsfirstlive.com/wp-content/uploads/2024/09/Mysore-Silk-Saree-History.jpg

Load More