newsfirstkannada.com

ಪುಣೆ ಬಳಿಕ ಮತ್ತೊಂದು ಭೀಕರ ಅಪಘಾತ.. ಪ್ರಭಾವಿ ನಾಯಕನ ಮಗನಿಂದ Hit & Run; ಮಹಿಳೆ ಸಾವು; ಆಗಿದ್ದೇನು?

Share :

Published July 7, 2024 at 7:51pm

  ಮೀನು ತರಲೆಂದು ಪತಿಯ ಜತೆ ಬೈಕ್​ನಲ್ಲಿ ಹೋಗುತ್ತಿದ್ದಾಗ ನಡೆದ ಘಟನೆ

  BMW ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಸ್ಥಳದಲ್ಲೇ ಸಾವು, ಪತಿ ಪಾರು

  ಮುಂಬೈನ ವರ್ಲಿಯ ಕೋಳಿವಾಡ ಪ್ರದೇಶದಲ್ಲಿ ನಡೆದ ಭೀಕರ ಅಪಘಾತ

ಮುಂಬೈ: ಪುಣೆಯ ಪೋರ್ಷೆ ಕಾರು ಅಪಘಾತದ ದುರಂತ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ. ಬಿಎಂಡಬ್ಲ್ಯೂ ಕಾರಿನಿಂದ ಮಹಿಳೆಗೆ ಡಿಕ್ಕಿ ಹೊಡೆದು ಹೋಗಿದ್ದ ಆರೋಪಿ ದೊಡ್ಡ ರಾಜಕಾರಣಿ ಪುತ್ರ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಹಿರಿಯ ನಾಯಕನ ಪುತ್ರ ಈ ಕೇಸ್​​ನ ಪ್ರಮುಖ ಆರೋಪಿಯಾಗಿದ್ದಾನೆ. ಮಿಹಿರ್ ಶಾ (24) ಆರೋಪಿಯಾಗಿದ್ದಾನೆ.

ಅಸಲಿಗೆ ಆಗಿದ್ದೇನು..?

ಮಹಿಳೆಯೊಬ್ಬರು ಮೀನು ತರಲೆಂದು ಪತಿಯ ಜತೆ ಬೈಕ್​ನಲ್ಲಿ ತೆರಳಿದ್ದಾಗ 24 ವರ್ಷದ ಮಿಹಿರ್ ಶಾ ಬಿಎಂಡಬ್ಲ್ಯೂ ಕಾರಿನಲ್ಲಿ ಬಂದು ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾವೇರಿ ನಖ್ವಾ (45) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಪತಿ ಪ್ರದೀಪ್ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಮಹಿಳೆಯು ಪತಿಯೊಂದಿಗೆ ಆರ್ಟಿರಿಯಲ್ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಐಷಾರಾಮಿ ಕಾರು ಚಾಲಕನ ನಿಯಂತ್ರಣ ತಪ್ಪಿ ಬೆಳಗ್ಗೆ 5:30ರ ಸುಮಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪತಿ-ಪತ್ನಿ ಇಬ್ಬರೂ ಕಾರಿನ ಬಾನೆಟ್​ ಮೇಲೆ ಬಿದ್ದಿದ್ದಾರೆ. ಆಗ ಪತಿ ಬಾನೆಟ್​ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಮಹಿಳೆಗೆ ಸಾಧ್ಯವಾಗಲಿಲ್ಲ. ಆದರೆ ಇದೇ ವೇಳೆ ಕಾರು ಚಾಲಕ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಅಷ್ಟೊರೊಳಗೆ ಅವರು ಸಾವನ್ನಪ್ಪಿದ್ದರು ಎಂದು ವರ್ಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಅಬ್ಬಾ.. ಚಿನ್ನದ ಅಂಗಡಿಗೆ ಹೋಗಿ ಮುದ್ದಿನ ಶ್ವಾನಕ್ಕೆ ಸರ ಕೊಡಿಸಿದ ಮಹಿಳೆ; ಇದರ ಬೆಲೆ ಎಷ್ಟು ಗೊತ್ತಾ?

ಸದ್ಯ ಈ ಘಟನೆ ಸಂಬಂಧ ಹಿಟ್ ಅಂಡ್ ರನ್ ಕೇಸ್​ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಆರೋಪಿ ಎಸ್ಕೇಪ್​ ಆಗಲು ಆತನ ಗೆಳತಿ ಸಹಾಯ ಮಾಡಿರುವುದು ಬೆಳಕಿಗೆ ಬಂದಿದೆ. ಕಾರು ಆತನ ತಂದೆ ರಾಜೇಶ್ ಶಾ ಅವರ ಹೆಸರಿನಲ್ಲಿ ನೋಂದಣಿಯಾಗಿದೆ. ಪರಾರಿಯಾದ ಆರೋಪಿಗಾಗಿ ತೀವ್ರ ಶೋಧ ನಡೆಸಿದ ಪೊಲೀಸರು ಬಂಧಿಸಿದ್ದಾರೆ. ಪುಣೆ ಹಿಟ್ ಅಂಡ್ ರನ್ ಬಳಿಕ ಮುಂಬೈನಲ್ಲಿ ಈ ಘಟನೆ ನಡೆದಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಹಿರಿಯ ನಾಯಕನ ಪುತ್ರ ಅಪಘಾತ ಮಾಡಿದ್ದಾನೆ ಅಂತ ಗೊತ್ತಾಗುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಮುಜುಗರಕ್ಕೆ ಒಳಗಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪುಣೆ ಬಳಿಕ ಮತ್ತೊಂದು ಭೀಕರ ಅಪಘಾತ.. ಪ್ರಭಾವಿ ನಾಯಕನ ಮಗನಿಂದ Hit & Run; ಮಹಿಳೆ ಸಾವು; ಆಗಿದ್ದೇನು?

https://newsfirstlive.com/wp-content/uploads/2024/07/accident2.jpg

Load More