newsfirstkannada.com

ದರ್ಶನ್ ಗ್ಯಾಂಗ್​ನಿಂದ ಕೊಲೆಯಾದ ಯುವಕನ ಪತ್ನಿಗೆ ಸರ್ಕಾರಿ ಕೆಲಸ? ರೇಣುಕಾಸ್ವಾಮಿ ತಾಯಿ ಏನಂದ್ರು?

Share :

Published June 18, 2024 at 3:45pm

  ಸೊಸೆಗೆ ಸರ್ಕಾರಿ ಕೆಲಸ ಸಿಗೋತ್ತಾ, ಇಲ್ವಾ- ಅತ್ತೆ ಏನಂದ್ರು?

  ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವರು

  ಡಾ.ಜಿ ಪರಮೇಶ್ವರ್ ಭೇಟಿ ಬಳಿಕ ತಾಯಿ ಏನ್ ಹೇಳಿದ್ರು?

ಚಿತ್ರದುರ್ಗ: ಸದ್ಯ ರಾಜ್ಯಾದ್ಯಂತ ರೇಣುಕಾಸ್ವಾಮಿ, ನಟ ದರ್ಶನ್, ಪವಿತ್ರಾ ಗೌಡ ಆ್ಯಂಡ್ ಗ್ಯಾಂಗ್​ನದ್ದೆ ಚರ್ಚೆ ನಡೆಯುತ್ತಿದೆ. ಕ್ಷಣ ಕ್ಷಣದ ಅಪ್​ಡೇಟ್​ಗಾಗಿ ಸಾರ್ವಜನಿಕರು ಕಾತುರದಿಂದ ಇದ್ದಾರೆ. ಈ ಎಲ್ಲದರ ಮಧ್ಯೆ ಇಂದು ರೇಣುಕಾಸ್ವಾಮಿ ನಿವಾಸಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಭರವಸೆ ನೀಡಿದ್ದಾರೆ.

ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಭೇಟಿ ನೀಡಿದ ಬಳಿಕ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಮಾಧ್ಯಮದವರೊಂದಿಗೆ ಮಾತನಾಡಿ, ಪರಮೇಶ್ವರ್ ಅವರು ಧೈರ್ಯ ತುಂಬಿ, ಸಾಂತ್ವನ ಹೇಳಿ ಹೋಗಿದ್ದಾರೆ. ಮಗನ ಸಾವಿಗೆ ನ್ಯಾಯ ಸಿಗುತ್ತದೆ ಎಂದಿದ್ದಾರೆ. ಸೊಸೆಗೆ ಸರ್ಕಾರಿ ಕೆಲಸ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೋಹಿತ್-ರಶೀದ್​​​ಗೆ ವರ್ಲ್ಡ್​​ಕಪ್​ನಲ್ಲಿ ಆಗಿ ಬರೋದಿಲ್ಲ.. ಯಾಮಾರಿದ್ರೆ ‘ದೋಸ್ತ್’​ಗಳೇ ವಿಲನ್ ಆಗ್ತಾರಾ?

ಮಗನ ಸಾವಿನ ಬಳಿಕ ತನಿಖೆ ಚುರುಕಾಗಿ ನಡೆಯುತ್ತಿದೆ. ಪೊಲೀಸರು, ಸರ್ಕಾರದವರೆಲ್ಲ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮಗನ ಆತ್ಮಕ್ಕೆ ಶಾಂತಿ ಸಿಗುತ್ತೆ. ಅಲ್ಲದೇ ಕೇಸ್​ ತನಿಖೆ ನಡೆಯುತ್ತಿರುವುದು ನೋಡಿದರೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ನಮಗೂ ಇದೆ. ಮುಖ್ಯಮಂತ್ರಿಗಳ ಬಳಿ ಈ ಬಗ್ಗೆ ಮಾತನಾಡಿ ಏನ್ ಹೇಳುತ್ತಾರೆಂದು ನಿಮಗೆ ತಿಳಿಸುತ್ತೇವೆ ಅಂತ ಗೃಹ ಸಚಿವರು ಹೇಳಿದ್ದಾರೆ. ನಮ್ಮ ಸೊಸೆಗೊಂದು ದಾರಿ ಆಗಲಿ ಎನ್ನವುದೇ ನಮ್ಮ ಅಭಿಪ್ರಾಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಗ್ಯಾಂಗ್​ನಿಂದ ಕೊಲೆಯಾದ ಯುವಕನ ಪತ್ನಿಗೆ ಸರ್ಕಾರಿ ಕೆಲಸ? ರೇಣುಕಾಸ್ವಾಮಿ ತಾಯಿ ಏನಂದ್ರು?

https://newsfirstlive.com/wp-content/uploads/2024/06/RENUKASWAMY_MOTHER_RATNAPRABHA.jpg

Load More